ಚಡ್ಡಿ ದೋಸ್ತ್ಗಳಂತಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಮತ್ತು ಮಾಜಿ ಮಂತ್ರಿ, ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ನಡುವಣ ಕಲಹ ಮತ್ತೊಂದು ಮಜಲಿಗೆ ಬಂದು ನಿಂತಿದೆ. ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಯಾವ ಬಣ್ಣದ ಚಡ್ಡಿ ಹಾಕಿಕೊಂಡಿದ್ದರು ಅಂತಾ ನನಗೆ ಗೊತ್ತು ಎಂದು ಕಳೆದ ಸಾರ್ವತ್ರಿಕ ಚುನಾವಣೆ ಪ್ರಚಾರದ ವೇಳೆ ಸಾರ್ವತ್ರಿಕವಾಗಿ ಕೆಳ ಹಂತಕ್ಕೆ ಜಾರಿದ್ದ ಉಭಯ ನಾಯಕರ ನಡುವಣ ಕಾದಾಟ, ನಿನ್ನೆಯಿಂದ ದಿಢೀರನೆ ಮತ್ತೆ ಕಾಣಿಸಿಕೊಂಡಿದೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗನ್ಮ್ಯಾನ್ಗಳು ಬೀಗ ಮುರಿದು ಒಳನುಗ್ಗಿದ್ದಾರೆ. ಗೆಸ್ಟ್ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ಜಮೀರ್ ದೂರು ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ಅಲ್ಲಿ ತಮ್ಮ ಪುತ್ರನ ಶೂಟಿಂಗ್ ಪರಿಕರಗಳು ಇದ್ದವು. ಅದನ್ನು ತೆಗೆದುಕೊಡು ಬರಲು ಹೋಗಿದ್ದರು ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದರು.
ಆದರೆ ಇದಕ್ಕೆ ತಿರುಗೇಟು ನೀಡಿರುವ ಶಾಸಕ ಜಮೀರ್ ಅಹಮದ್, ಕುಮಾರಸ್ವಾಮಿ ಅವರು ತಮ್ಮ ಪುತ್ರ, ನಟ ನಿಖಿಲ್ ಗೌಡ ಅವರ ಶೂಟಿಂಗ್ ಸಾಮಾನ್ ಗೆಸ್ಟ್ ಹೌಸ್ನಲ್ಲಿ ಇದೆ ಅಂತಾ ನನಗೆ ಕೇಳ್ಬೇಕಿತ್ತು. ಆಗ ನಾನೇ ನಿಂತು ಬಾಗಿಲು ತೆಗೆಸಿ ಅವರಿಗೆ ಸೇರಿದ ಸಾಮಾನು ತೆಗೆದುಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆಯ ಪ್ರಕರಣದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಜಮೀರ್ ಅಹಮದ್ ಖಾನ್ ‘ಕುಮಾರಸ್ವಾಮಿ ಕಡೆಯವರ ಮೇಲೆ ಡಕಾಯತಿ ಕೇಸ್ ಹಾಕಬೇಕು ಅಂತಾ ಹೇಳಿದ್ದಾರೆ. ಮನೆ ಬೀಗ ಒಡೆದು ನುಗ್ಗಿದರೆ ಏನ್ ಮಾಡಬೇಕು ಹೇಳಿ? ನನ್ನ ಮನೆ, ನಾನು ಬೀಗ ಹಾಕಿಕೊಂಡರೆ ತಪ್ಪೇನು? ಕುಮಾರಸ್ವಾಮಿಗೆ 2001ರಲ್ಲಿ ಕೂರಲು ಜಾಗ ಇರಲಿಲ್ಲ. ಆಗ ಸದಾಶಿವನಗರದಲ್ಲಿದ್ದ ನನ್ನ ಗೆಸ್ಟ್ ಹೌಸ್ ಹಾಗೂ ಯುಬಿ ಸಿಟಿಯಲ್ಲಿದ್ದ ನನ್ನ ಗೆಸ್ಟ್ ಹೌಸ್ ಗಳನ್ನು ನಾನೇ ಕೊಟ್ಟಿದ್ದು. ಆಗ ನಾನೇ ಕೊಟ್ಟಿದ್ದು, ಅವರಿಗೆ ಯಾರೂ ಇರಲಿಲ್ಲ ಆಗ, ಈಗ ಅವರು ದೊಡ್ಡವರಾಗಿದ್ದಾರೆ ಅಂತಾ ಜಮೀರ್ ಆಕ್ರೋಶ, ಅಸಮಾಧಾನ ಹೊರಹಾಕಿದರು.
ಇದಕ್ಕೂ ಮುನ್ನ ನಿನ್ನೆ ಬುಧವಾರ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ದೂರು ನೀಡಿದ್ದಾರೆ. ಆಪ್ತ ಸಹಾಯಕ ಫಾರೂಕ್ ಮೂಲಕ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸದಾಶಿವ ನಗರದ ಗೆಸ್ಟ್ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂಬುದು ದೂರು.
ಸದಾಶಿವ ನಗರದ ಗೆಸ್ಟ್ಹೌಸ್ಗೆ ಗನ್ಮ್ಯಾನ್ಗಳು ಪ್ರವೇಶ ಮಾಡಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗನ್ಮ್ಯಾನ್ಗಳು ಬೀಗ ಮುರಿದು ಒಳನುಗ್ಗಿದ್ದಾರೆ. ಗೆಸ್ಟ್ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ದೂರು ಸಲ್ಲಿಸಲಾಗಿದೆ. ಅದರೆ ಕುಮಾರಸ್ವಾಮಿ ಅವರ ಆಪ್ತ ಭೋಜೇಗೌಡರು ಕ್ಷಮೆಯಾಚಿಸಿದ್ದರಿಂದ ದೂರು ನೀಡಿಲ್ಲ ಎಂದೂ ಜಮೀರ್ ಅಹ್ಮದ್ ಇದೇ ವೇಳೆ ಹೇಳಿದ್ದಾರೆ.
ಸದಾಶಿವನಗರದ ಎಂದರೆ ಹೆಚ್ ಡಿ ಕುಮಾರಸ್ವಾಮಿ ಅಥವಾ ಹೆಚ್ ಡಿ ಕುಮಾರಸ್ವಾಮಿ ಎಂದರೆ ಸದಾಶಿವನಗರ ಎನ್ನುವ ಕಾಲವೊಂದಿತ್ತು. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರಿಗೆ ಜಮೀರ್ ಬಹಳ ಆಪ್ತರಾಗಿದ್ದರು ಆಗ ಜಮೀನನ್ನು ಕುಮಾರಸ್ವಾಮಿಯವರಿಗೆ ಬಿಟ್ಟುಕೊಟ್ಟಿದ್ದರು. ಅದು ಎಷ್ಟರ ಮಟ್ಟಿಗೆ ಗುರುತಿಸಲ್ಪಟ್ಟಿತ್ತು ಎಂದರೆ ಗೆಸ್ಟ್ ಹೌಸ್ ಅನ್ನು ಕುಮಾರಸ್ವಾಮಿಯವರೇ ಕೊಂಡುಕೊಂಡಿದ್ದಾರೆ ಅವರ ಹೆಸರಿನಲ್ಲಿಯೇ ಇದೆ ಎಂದು ಜನ ನಂಬಿದ್ದರು ಆದರೆ ಕುಮಾರಸ್ವಾಮಿ ಮತ್ತು ಜಮೀರ್ ಅವರ ನಡುವೆ ಬಿರುಕು ಬಿಟ್ಟು ಕಾಂಗ್ರೆಸ್ಸಿಗೆ ಹೋಗಿದ್ದರೂ ಸಹ ವಿಚಾರ ಇಷ್ಟು ಕೆಳಕ್ಕೆ ಇದ್ದಿರಲಿಲ್ಲ ಬಿದ್ದಿರಲಿಲ್ಲ. ಈಗ ಹಾಗೆ ಬಾಗಿಲು ಮುರಿದು ಒಳಗೆ ಹೋಗಲು ಯತ್ನಿಸಿದ್ದಾರೆ ಎಂಬ ಆರೋಪ ಬಂದಿರುವುದು ಒಂದು ವಿಚಿತ್ರ ಆದರೂ ಸತ್ಯ.
ಶಾಸಕ ಜಮೀರ್ ಅಹಮದ್, ನಿನ್ನೆಯ ಪ್ರಕರಣದ ಬಗ್ಗೆ ಇನ್ನೂ ಏನು ಹೇಳಿದ್ದಾರೆ… ಈ ವಿಡಿಯೋ ನೋಡಿ:
ಕುಮಾರಸ್ವಾಮಿ ಉಲ್ಟಾ ಗಿರಾಕಿ ಅಂದಿದ್ದಕ್ಕೆ ಮನೆ ಬಾಗಿಲು ಮುರಿದ್ರು |Zameer ahmad|HDKumaraswamy
(congress mla Zameer ahmed khan questions HD Kumaraswamy motive behind barging in to his guest house in sadashivanagar)
Published On - 1:13 pm, Thu, 10 June 21