ಸಿಎಂ ಚರ್ಚೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಹಿಂದ ವರ್ಸಸ್ ದಲಿತ ಸಮಾವೇಶಕ್ಕೆ ಪ್ಲ್ಯಾನ್
ದಲಿತ ಸಮಾವೇಶಗಳ ಕುರಿತು ಚರ್ಚೆ ಸುದ್ದಿ ಬೆನ್ನಲ್ಲೇ ಪರಮಾಪ್ತ ಡಾ.H.C.ಮಹದೇವಪ್ಪ ಜೊತೆಗೆ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ. ಗೌಪ್ಯ ಸ್ಥಳದಲ್ಲಿ ನಿನ್ನೆ ಮಹದೇವಪ್ಪ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದರು.
ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಭವಿಷ್ಯದ ಸಿಎಂ ಚರ್ಚೆ ಬೆನ್ನಲ್ಲೇ ಅಹಿಂದ ವರ್ಸಸ್ ದಲಿತ ಸಮಾವೇಶ ಕೂಗು ಕೇಳಿ ಬಂದಿದೆ. ಅಹಿಂದ ಸಮಾವೇಶಗಳಿಗೆ ಸಿದ್ದರಾಮಯ್ಯ ಪ್ಲ್ಯಾನ್ ಹಿನ್ನೆಲೆಯಲ್ಲಿ ಅಹಿಂದ ಪ್ಲ್ಯಾನ್ಗೆ ದಲಿತ ಸಮಾವೇಶದ ಕೌಂಟರ್ ಪ್ಲ್ಯಾನ್ ಮಾಡಲಾಗಿದೆ. ಕಾಂಗ್ರೆಸ್ ದಲಿತ ನಾಯಕರಿಂದ ದಲಿತ ಸಮಾವೇಶಗಳಿಗೆ ಪ್ಲ್ಯಾನ್ ನಡೆಯುತ್ತಿದೆ.
ದಲಿತ ಸಮಾವೇಶಗಳ ಕುರಿತು ಚರ್ಚೆ ಸುದ್ದಿ ಬೆನ್ನಲ್ಲೇ ಪರಮಾಪ್ತ ಡಾ.H.C.ಮಹದೇವಪ್ಪ ಜೊತೆಗೆ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ. ಗೌಪ್ಯ ಸ್ಥಳದಲ್ಲಿ ನಿನ್ನೆ ಮಹದೇವಪ್ಪ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದರು. ದಲಿತ ಸಮಾವೇಶ ಮಾಡಿದರೆ ಅಹಿಂದ ಸಮಾವೇಶಕ್ಕೆ ಹಿನ್ನಡೆಯಾಗುತ್ತೆ. ಆದ್ದರಿಂದ ಅಹಿಂದ ಹೋರಾಟಕ್ಕೆ ಚಾಲನೆ ನೀಡಲು ಕಸರತ್ತು ಮಾಡಲಾಗುತ್ತಿದೆ. ದಲಿತ ಸಮಾವೇಶಗಳಿಗೆ ಮಹದೇವಪ್ಪ ಸಹಕಾರಕ್ಕೆ ಮನವಿ ಮಾಡಿದ್ದಾರೆ. ಮಹದೇವಪ್ಪ ಜೊತೆ ಡಾ.ಜಿ.ಪರಮೇಶ್ವರ್ ಹಾಗೂ ಇತರರ ಚರ್ಚೆ ನಡೆಸಿದ್ದು ದಲಿತ ನಾಯಕರು ಮಹದೇವಪ್ಪರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ.
ದಲಿತ ಸಮಾವೇಶ ನಡೆಸಲು ದಲಿತ ನಾಯಕರ ಪ್ಲ್ಯಾನ್ ನಾವೇ ಅಹಿಂದ ಸಮಾವೇಶ ನಡೆಸೋಣವೆಂದು ಮನವರಿಕೆ ಮಾಡಿದ್ದಾರೆ. ಮಹದೇವಪ್ಪ ಜೊತೆ ಸಿದ್ದರಾಮಯ್ಯ ಒಂದು ಸುತ್ತಿನ ಚರ್ಚೆ ನಡೆಸಿ ಅಹಿಂದ ಸಮಾವೇಶ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ಸಿಎಂ ಗಾದಿ ಮೇಲೆ ಕಣ್ಣಿಟ್ಟ ಕೈ ನಾಯಕರಿಂದ ಸಮಾವೇಶ ನಡೆಸಲು ಸಿದ್ಧತೆ ನಡೆಯುತ್ತಿದೆ. ಪಕ್ಷದ ವೇದಿಕೆ ಬಿಟ್ಟು ಸಮುದಾಯ ಸಮಾವೇಶಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಭಾರತದ ಮೊದಲ ‘ಆಕಸ್ಮಿಕ’ ಪ್ರಧಾನಿ ಪಿ.ವಿ.ನರಸಿಂಹ ರಾವ್ ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಗಳಿಸಿದ್ದು ಹೇಗೆ?