ಪುರಸಭೆ ಸದಸ್ಯೆ ತಳ್ಳಾಟ ಪ್ರಕರಣ: ಘಟನೆ ಖಂಡಿಸಿ ಡಿ. 5ರಂದು ಡಿಕೆಶಿ, ಸಿದ್ದು ನೇತೃತ್ವದಲ್ಲಿ ‘ಕೈ’ ಧರಣಿ

ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದಿನಿ ನಾಯ್ಕ್​ರ ತಳ್ಳಾಟ ಪ್ರಕರಣವನ್ನು ಖಂಡಿಸಿ ಕಾನೂನು ಹೋರಾಟ ನಡೆಸುತ್ತೇವೆ. ಡಿ.5ರಂದು ಡಿಕೆಶಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿ ನಡೆಯಲಿದೆ ಎಂದು ಜಿಲ್ಲೆಯ ತೇರದಾಳದಲ್ಲಿ ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಪುರಸಭೆ ಸದಸ್ಯೆ ತಳ್ಳಾಟ ಪ್ರಕರಣ: ಘಟನೆ ಖಂಡಿಸಿ ಡಿ. 5ರಂದು ಡಿಕೆಶಿ, ಸಿದ್ದು ನೇತೃತ್ವದಲ್ಲಿ ‘ಕೈ’ ಧರಣಿ
ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ನಡೆದ ಸಭೆ

Updated on: Dec 01, 2020 | 6:44 PM

ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಸದಸ್ಯೆ ಚಾಂದಿನಿ ನಾಯ್ಕ್​ರ ತಳ್ಳಾಟ ಪ್ರಕರಣವನ್ನು ಖಂಡಿಸಿ ಕಾನೂನು ಹೋರಾಟ ನಡೆಸುತ್ತೇವೆ. ಡಿ.5ರಂದು ಡಿಕೆಶಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಧರಣಿ ನಡೆಯಲಿದೆ ಎಂದು ಜಿಲ್ಲೆಯ ತೇರದಾಳದಲ್ಲಿ ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಶಾಸಕ ಸಿದ್ದು ಸವದಿ ನಾನು ತಳ್ಳಿಲ್ಲ, ರಕ್ಷಿಸುತ್ತಿದ್ದೆ ಅಂತಾರೆ. ಆದ್ರೆ ಶಾಸಕ ತಳ್ಳಿದ್ದು ಗೊತ್ತಾಗುತ್ತೆ. ಈ ಕುರಿತು‌ ನಾವು ಕಾನೂನು ತಜ್ಞರ ಸಲಹೆ ಪಡೆದಿದ್ದೇವೆ ಎಂದು ಹೇಳಿದರು.

ಮಹಿಳೆಯರ ಮೇಲೆ ದೈಹಿಕ ಆಕ್ರಮಣವಾಗಿದೆ. ಆ ಆಕ್ರಮಣದಿಂದ ಮಾನಸಿಕವಾಗಿ ಚಾಂದಿನಿ ನಾಯ್ಕ್​ ಇನ್ನೂ ಚೇತರಿಸಿಕೊಂಡಿಲ್ಲ. ಆ ಘಟನೆಯಿಂದ ಉಂಟಾದ ಮಾನಸಿಕ ನೋವಿನ ಪರಿಣಾಮ ಆಕೆಯ ಹೊಟ್ಟೆಯಲ್ಲಿದ್ದ ಭ್ರೂಣದ ಮೇಲೆ‌ಬೀರಿದೆ. ಹೀಗಾಗಿ, ಅದು ಇಲ್ಲದಂತಾಗಿದೆ ಎಂದು ಉಮಾಶ್ರೀ ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಅವರು ಮತಹಾಕೋದು ಅವರ‌ ಹಕ್ಕು. ಯಾರಿಗೆ ಹಾಕ್ತಿದ್ರೋ ಹಾಕುತ್ತಿದ್ರು. ಅದನ್ನ ಆಮೇಲೆ ನೋಡಬಹುದಿತ್ತು. ಆದ್ರೆ, ಈ ಮಹಿಳಾ ಸದಸ್ಯರು ವೋಟ್ ಹಾಕದಂತೆ ಅವರನ್ನು ಎಳೆದಾಡಿ ಅವರ ಮೇಲೆ‌ ದೌರ್ಜನ್ಯ ಎಸಗಿದ್ದಾರೆ. ಮತ್ತೊಬ್ಬ ಪುರಸಭೆ ಸದಸ್ಯೆ ಗೋದಾವರಿ ಬಾಟ್ ಎಂಬ ಮಹಿಳೆಯನ್ನು ಕಾಂಪೌಂಡ್ ಹಾರಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. ಅದು ಒಂದು ರೀತಿಯ ಕಿಡ್ನಾಪ್​. ಜೊತೆಗೆ, ಹುರಕಡ್ಲಿ ಎಂಬ ಮಹಿಳೆಯನ್ನು ಎಳೆದಾಡಿದ್ದಕ್ಕೆ ಮೈತುಂಬ ಬಾಸುಂಡೆ ಬಂದಿವೆ ಎಂದು ಉಮಾಶ್ರೀ ಹೇಳಿದರು.

ಮಹಿಳೆಯರ ಮೇಲೆ‌ ದೌರ್ಜನ್ಯ ಮಾಡುವ ಮೂಲಕ‌ ಅವರು ರಾಜಕೀಯಕ್ಕೆ ಬಾರದಂತೆ ಭಯಾನಕ ವಾತಾವರಣ ಸೃಷ್ಟಿ ಮಾಡಲಾಗಿದೆ. ಹಾಗಾಗಿ, ಡಿಸೆಂಬರ್ 5 ರಂದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಂಡಿದ್ದೇವೆ. ಸತೀಶ್​ ಜಾರಕಿಹೊಳಿ, ಎಸ್.ಆರ್.ಪಾಟೀಲ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

KUSHAL V
Loading...
Unable to load recommendations.
Follow Us