ಕೈ ಕಾರ್ಯಕರ್ತ ಆತ್ಮಹತ್ಯೆ, ರೀಲ್ಸ್ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಡ್ರೈವರ್

ಕಾಂಗ್ರೆಸ್ ಕಾರ್ಯಕರ್ತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಹಿಂದೆ ಸಚಿವ ಭೈರತಿ ಸುರೇಶ್ ಬಳಿ ಕೆಲಸ ಮಾಡುತ್ತಿದ್ದ ಕೃಷ್ಣ ಎನ್ನುವ ಕಾಂಗ್ರೆಸ್ ಕಾರ್ಯಕರ್ತ, ಏಕಾಏಕಿ ಹೊಸಪೇಟೆಯಲ್ಲಿ ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡಿದ್ದಾನೆ. ಇನ್ನೊಂದೆಡೆ ಟ್ರ್ಯಾಕ್ಟರ್ ಚಾಲಕನೋರ್ವ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಪ್ರತ್ಯೇಕ ಘಟನೆಯ ವಿವರ ಇಲ್ಲಿದೆ.

ಕೈ ಕಾರ್ಯಕರ್ತ ಆತ್ಮಹತ್ಯೆ, ರೀಲ್ಸ್ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಡ್ರೈವರ್
Krishna And Lokesh

Updated on: Jan 22, 2026 | 7:10 PM

ವಿಜಯನಗರ/ಕೊಪ್ಪಳ, (ಜನವರಿ.22): ಕಾಂಗ್ರೆಸ್ ಕಾರ್ಯಕರ್ತನೋರ್ವ (Congress Worker)  ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ (Suicide)  ಶರಣಾಗಿರುವ ಘಟನೆ ವಿಜಯನಗರ (Vijayanagara) ಜಿಲ್ಲೆ ಹೊಸಪೇಟೆಯ ರೈಲು ನಿಲ್ದಾಣದ ಬಳಿ ನಡೆದಿದೆ. ಕೊಪ್ಪಳ (Koppal) ಜಿಲ್ಲೆ ಕಾರಟಗಿ ನಿವಾಸಿ ಕೃಷ್ಣ ಮೇಗೂರು(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಕೃಷ್ಣ ಸಚಿವ ಭೈರತಿ ಸುರೇಶ್ ಅವರ ಬಳಿ ಕೆಲಸ ಮಾಡುತ್ತಿದ್ದ. ಆದ್ರೆ, ಒಂದು ವರ್ಷದ ಹಿಂದೆಯೇ ಕೆಲಸ ಬಿಟ್ಟಿದ್ದ. ಆದ್ರೆ, ಇದೀಗ ಆತ್ಮಹತ್ಯೆಗೆ ಶರಣಾಗಿದ್ದು,  ಸಾವಿಗೆ ಕಾರಣ ತಿಳಿದುಬಂದಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೀಲ್ಸ್ ಹುಚ್ಚಿಗೆ ಪ್ರಾಣ ಕಳೆದುಕೊಂಡ ಡ್ರೈವರ್

ಕಲಬುರಗಿ: ರೀಲ್ಸ್ ಹುಚ್ಚಿಗೆ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಚಾಲಕ ಪ್ರಾಣ ಕಳೆದುಕೊಂಡಿರುವ ಘಟನೆ
ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಮಹಾಗಾಂವ ಗ್ರಾಮದಲ್ಲಿ ಘಟನೆ. ನಿನ್ನೆ(ಜನವರಿ 21) ಮಧ್ಯಾಹ್ನ ನಡೆದ ಘಟನೆ ತಡವಾಗಿ ಬೆಳಕಿಗೆ. ಮಹಾಗಾಂವ ನಿವಾಸಿ ಲೋಕೇಶ ಕಲ್ಲಪ್ಪ ಪೂಜಾರಿ (22) ಮೃತ ಚಾಲಕ. ಕಬ್ಬಿನ ಗದ್ದೆಯಲ್ಲಿ ನೇಗಿಲು ಹೊಡೆಯುತ್ತಿದ್ದ ವೇಳೆ ರೀಲ್ಸ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಇದನ್ನೂ ಓದಿ: ತಹಶೀಲ್ದಾರ್​​ರಿಂದ ಕಿರುಕುಳ ಆರೋಪ: ತಾಲೂಕು ಕಚೇರಿ ಮುಂಭಾಗವೇ ಆತ್ಮಹತ್ಯೆಗೆ ಯತ್ನಿಸಿದ ಶಿರಸ್ತೇದಾರ್

ವೃತ್ತಿಯಲ್ಲಿ ಚಾಲಕನಾಗಿದ್ದ ಲೋಕೇಶ್​, ಟ್ರ್ಯಾಕ್ಟ‌ರ್ ಚಲಿಸುವಾಗಲೇ ಒಂದು ಕೈಯಲ್ಲಿ ಮೊಬೈಲ್ ಹಿಡಿದು ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದುಕೊಂಡಿರುತ್ತಿದ್ದ ರೀಲ್ಸ್ ಮಾಡುತ್ತಿದ್ದ. ಈ ವೇಳೆ ಕಾಲು ಜಾರಿ ಟ್ರಾಕ್ಟರ್​​ ಚಕ್ರದ ಕೆಳಗೆ ಬಿದ್ದಿದ್ದಾನೆ. ಈ ಸಂಬಂಧ ಮಹಾಂಗಾವ್ ಪೊಲೀಸ್ ಠಾಣೆಯಯಲ್ಲಿ ಪ್ರಕರಣ ದಾಖಲಾಗಿದೆ.

ರೈತ ಆತ್ಮಹತ್ಯೆಗೆ ಶರಣು

ಹಾವೇರಿ: ಸಾಲಬಾಧೇ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹೊಳೆಆನ್ವೇರಿ ಗ್ರಾಮದಲ್ಲಿ ನಡೆದಿದೆ. ರವಿಯಪ್ಪ ಐರಣಿ 50 ವರ್ಷ ಆತ್ಮಹತ್ಯೆಗೆ ಶರಣಾದ ರೈತ. ಒಂದು ಎಕರೆ ಜಮೀನು ಹೊಂದಿದ್ದ ರವಿಯಪ್ಪ ಐರಣಿ, 8 ಲಕ್ಷ ಸಾಲ ಮಾಡಿಕೊಂಡಿದ್ದ. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ಪರಿಶೀಲಿಸಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.