ಐಟಿ ದಾಳಿ ನೆಪದಲ್ಲಿ ದರೋಡೆಗೆ ಸಂಚು ಪ್ರಕರಣ: ಖದೀಮರನ್ನು ಸೆರೆ ಹಿಡಿದ ಉಡುಪಿ ಪೊಲೀಸರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 21, 2024 | 8:30 PM

ಐಟಿ ದಾಳಿ ನೆಪದಲ್ಲಿ ದರೋಡೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬರು ಖದೀಮರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ತೆಕ್ಕಟ್ಟೆಯಲ್ಲಿ ಜುಲೈ 25ರಂದು ಘಟನೆ ನಡೆದಿತ್ತು. ಸದ್ಯ ಉಳಿದ ಆರೋಪಿಗಳಿಗಾಗಿ ಉಡುಪಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಐಟಿ ದಾಳಿ ನೆಪದಲ್ಲಿ ದರೋಡೆಗೆ ಸಂಚು ಪ್ರಕರಣ: ಖದೀಮರನ್ನು ಸೆರೆ ಹಿಡಿದ ಉಡುಪಿ ಪೊಲೀಸರು
ಐಟಿ ದಾಳಿ ನೆಪದಲ್ಲಿ ದರೋಡೆಗೆ ಸಂಚು ಪ್ರಕರಣ: ಖದೀಮರನ್ನು ಸೆರೆ ಹಿಡಿದ ಉಡುಪಿ ಪೊಲೀಸರು
Follow us on

ಉಡುಪಿ, ಆಗಸ್ಟ್​​ 21: ಐಟಿ ಅಧಿಕಾರಿಗಳ (it officer) ಸೋಗಿನಲ್ಲಿ ಮನೆಗೆ ನುಗ್ಗಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ (arrested). ಸಂತೋಷ್ ನಾಯಕ್ (45) ಮತ್ತು ದೇವರಾಜ್ ಸುಂದರ್ ಮೆಂಡನ್ (46) ಬಂಧಿತರು. ಉಳಿದ ಆರೋಪಿಗಳಿಗಾಗಿ ಉಡುಪಿ ಪೊಲೀಸ್​ರು ಶೋಧ ಮುಂದುವರಿಸಿದ್ದಾರೆ. ಜುಲೈ 25ರಂದು ಜಿಲ್ಲೆಯ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಣೂರು ಎಂಬಲ್ಲಿ ಕವಿತಾ ಎಂಬುವವರ ಮನೆಯಲ್ಲಿ ಘಟನೆ ನಡೆದಿತ್ತು.

ಸದ್ಯ 15 ದಿನಗಳ ಹಿಂದೆ ಕೃತ್ಯಕ್ಕೆ ಬಳಸಿರುವ ಇನ್ನೋವಾ ಕಾರನ್ನು ಪೊಲೀಸ್​ರು ವಶಕ್ಕೆ ಪಡೆದಿದ್ದು, ಉಡುಪಿ ನ್ಯಾಯಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮಹಾರಾಷ್ಟದಿಂದ ಸಂಚು ರೂಪಿಸಿ ಐಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ಕೃತ್ಯ ನಡೆಸಲು ಖದೀಮರು ಯೋಜನೆ ಹಾಕಿದ್ದರು.

ಇದನ್ನೂ ಓದಿ: ಉಡುಪಿ: ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕ ಉಸಿರು ಗಟ್ಟಿ ಸಾವು

ಮನೆಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದ ಲೈವ್ ಸರ್ವೇಲೆನ್ಸ್ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಲಾಗಿತ್ತು. ಎಚ್ಚರಿಕೆಯ ಹಿನ್ನಲೆ ಕವಿತಾ ಮನೆಯ ಬಾಗಿಲು ಭದ್ರಪಡಿಸಿ ಒಳಗೆ ಕುಳಿತಿದ್ದರು. ಮನೆಯ ಒಳಗೆ ಪ್ರವೇಶಿಸಲು ಯತ್ನ ನಡೆಸಿ ವಿಫಲರಾಗಿ ವಾಪಾಸ್ ಆಗಿದ್ದರು. ಘಟನೆ ಬಳಿಕ ಕವಿತಾ ದೂರಿನ ಮೇಲೆ ತನಿಖೆ ನಡೆಸಿದ್ದ ಉಡುಪಿ ಪೊಲೀಸ್​, ಮಹಾರಾಷ್ಟ್ರ ಮತ್ತು ಬೆಂಗಳೂರಿನಲ್ಲಿ ಅಪರಾಧಿಗಳ ಶೋಧ ಮಾಡಿ ಇದೀಗ ಇಬ್ಬರನ್ನು ಬಂಧಿಸಿದ್ದಾರೆ.

ವ್ಯವಹಾರಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕವಿತಾ ಅವರ ಕುಟುಂಬ ತೆಕಟ್ಟೆ ಪರಿಸರದಲ್ಲಿ ಸರ್ವಸಜ್ಜಿತ ಮನೆಯಲ್ಲಿ ವಾಸವಾಗಿದ್ದವರು. ಕಳೆದ ಕೆಲವು ದಿನಗಳಿಂದ ಇವರ ಮನೆಯ ಮುಂದೆ ಇದೇ ತಂಡ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿತ್ತು ಎನ್ನಲಾಗಿದೆ. ಮನೆಯ ಸುತ್ತ ಇರುವ ಸಿಸಿ ಕ್ಯಾಮೆರಾ ಮತ್ತು ಭದ್ರತೆಯನ್ನು ಗಮನಿಸಿ ಐಟಿ ವೇಷದಾರಿಗಳ ರೂಪದಲ್ಲಿ ತಂಡ ಮನೆಗೆ ನುಗ್ಗುವ ಯತ್ನ ಮಾಡಿತ್ತು ಎನ್ನುವುದು ಸದ್ಯ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿತ್ತು.

ಇದನ್ನೂ ಓದಿ: ಉಡುಪಿ: ಮೊಬೈಲ್ ಕೊಡದಿದ್ದಕ್ಕೆ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಕುಂದಾಪುರ ಮೂಲದ ಸೈನ್ ಇನ್ ಸಿ ಸಿ ಕ್ಯಾಮೆರಾ ಲೈವ್ ಸರ್ವೆಲೆನ್ಸ್ ಸಂಸ್ಥೆ ಕವಿತಾ ಅವರ ಮನೆ ಮುಂದೆ 8:30 ರ ಸುಮಾರಿಗೆ ಅಪರಿಚಿತರು ಎರಡು ಕಾರಿನಲ್ಲಿ ಬಂದಿರುವುದನ್ನು ಗಮನಿಸಿ ಸಕಾಲದಲ್ಲಿ ಎಚ್ಚರಿಸಿದ್ದರು. ಮನೆಯೊಡತಿ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಮನೆಯ ಪಕ್ಕದ ಗೇಟ್ ಹತ್ತಿ ಕಾಂಪೌಂಡ್ ಒಳಗೆ ಹಾರಿ ಬಂದ ತಂಡದವರು ಮನೆಯ ಸುತ್ತ ವೀಕ್ಷಿಸಿ ಮನೆಯ ಒಳ ಪ್ರವೇಶಿಸುವ ಪ್ರಯತ್ನವನ್ನು ಮಾಡಿದ್ದರು. ಆದರೆ ಸಕಾಲದಲ್ಲಿ ಸಿಸಿ ಕ್ಯಾಮೆರಾ ಸಂಸ್ಥೆ ಎಚ್ಚರಿಸಿದ್ದ ಹಿನ್ನೆಲೆಯಲ್ಲಿ ಮನೆಯೊಡತಿ ಬಾಗಿಲನ್ನು ಭದ್ರಪಡಿಸಿಕೊಂಡ ಹಿನ್ನೆಲೆಯಲ್ಲಿ ಆಗಬಹುದಾದ ಅನಾಹುತ ತಪ್ಪಿತ್ತು. ಈ ಘಟನೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.