ಬಟ್ಟೆ ಕೊಳ್ಳುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ: ಪತ್ನಿ ಕೊಲೆಯಲ್ಲಿ ಗಲಾಟೆ ಅಂತ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆ ಗಲಾಟೆ ನಡೆದಿದ್ದು, ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತಿ ಹತ್ಯೆಗೈದಿರುವಂತಹ ಘಟನೆ ನಡೆದಿದೆ. ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ, ಆಗಸ್ಟ್ 19: ಬಟ್ಟೆ ಕೊಳ್ಳುವ ವಿಚಾರಕ್ಕೆ ಪತಿ ಮತ್ತು ಪತ್ನಿ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತ್ನಿಯನ್ನೇ ಪತಿ ಹತ್ಯೆಗೈದಿರುವಂತಹ (murder) ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್ಪೇಟೆಯಲ್ಲಿ (Dobbaspet) ನಡೆದಿದೆ. ಪತಿ ಶಿವಾನಂದ ಪತ್ನಿ ಕಾವ್ಯಾ(27) ರನ್ನು ಹತ್ಯೆಗೈದು ಪರಾರಿಯಾಗಿದ್ದರು. ಕಾವ್ಯಾ ಪೋಷಕರ ದೂರಿನನ್ವಯ ಶಿವಾನಂದ ಬಂಧಿಸಲಾಗಿದೆ.
ಕಾವ್ಯಾ ಮತ್ತು ಶಿವಾನಂದ 6 ವರ್ಷಗಳ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳಿದ್ದಾರೆ. ಶಿವಾನಂದ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 6 ತಿಂಗಳ ಹಿಂದೆಯಷ್ಟೇ ಆರೋಗ್ಯ ಸಮಸ್ಯೆಯಿಂದ ಕೆಲಸ ಬಿಟ್ಟಿದ್ದಾರೆ.
ತಿಂಗಳ ಹಿಂದೆ ಗಲಾಟೆ ಮಾಡಿ ಕಾವ್ಯಾ ತವರು ಸೇರಿದ್ದರು. ವಾರದ ಹಿಂದೆಯಷ್ಟೇ ಪತ್ನಿಯನ್ನ ಪತಿ ಮನೆಗೆ ಕರೆತಂದಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆ ಬಟ್ಟೆ ಕೊಡಿಸುತ್ತೆನೆಂದು ಕೊಡಿಸಿಲ್ಲ. ಹೀಗೆ ಆದರೆ ತವರು ಮನೆಗೆ ತೆರಳುವುದಾಗಿ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆ ಉಂಟಾಗಿ ಬಳಿಕ ಕೊಲೆ ಮಾಡಲಾಗಿದೆ. ನಂತರ ಮೃತದೇಹವನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ.
ಇದನ್ನೂ ಓದಿ: ಕೋಲಾರ ಶಿಕ್ಷಕಿ ಹತ್ಯೆ ಕೇಸ್: 8 ಜನರ ಬಂಧನ, ವಿಚಾರಣೆಯಲ್ಲಿ ಆರೋಪಿಗಳು ಬಿಚ್ಚಿಟ್ರು ಅಸಲಿ ಸತ್ಯ
ಇತ್ತ ತಂಗಿ ರಮ್ಯಾರ ಫೋನ್ ತೆಗೆಯದ ಮೃತ ಕಾವ್ಯ, ಅನುಮಾನಗೊಂಡು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಜೊತೆ ಸೀನ್ ಆಫ್ ಕ್ರೈಂ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನೆಲಮಂಗಲ ಡಿವೈಎಸ್ಪಿ ಜಗದೀಶ್ ನೇತೃತ್ವದಲ್ಲಿ ತನಿಖೆ ಮಾಡಿದ್ದು, ಕಾವ್ಯ ಪೋಷಕರ ಕರೆ ಸ್ವೀಕರಿಸಿದೆ ಎಸ್ಕೇಪ್ ಆಗಿದ್ದ ಪತಿ ಶಿವಾನಂದನನ್ನ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಸದ್ಯಕ್ಕೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇನೇ ಆಗಲಿ, ಬಾಳಿ ಬದುಕಬೇಕಿದ್ದ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ.
ಕಾಲೇಜಿನ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿ ಅನಾರೋಗ್ಯದಿಂದ ಸಾವು
ಮೈಸೂರು: ಕಾಲೇಜ್ ಹಾಸ್ಟೆಕ್ನಲ್ಲಿ ವಿದ್ಯಾರ್ಥಿನಿ ಅನಾರೋಗ್ಯದಿಂದ ಮೃತಪಟ್ಟಿರುವಂತಹ ಘಟನೆ ಮೈಸೂರಿನ ದಕ್ಷ ಪಿಯು ಕಾಲೇಜಿನಲ್ಲಿ ನಡೆದಿದೆ. ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತಿದ್ದ ಜಯಪ್ರಾರ್ಥನ (17) ಮೃತ ವಿದ್ಯಾರ್ಥಿನಿ. ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಿವಾಸಿ.
ಭಾನುವಾರ ಊಟದ ನಂತರ ಜಯಪ್ರಾರ್ಥನ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ವಿಚಾರ ತಿಳಿದು ಖಾಸಗಿ ಆಸ್ಪತ್ರೆಯಲ್ಲಿ ಆಡಳಿತ ಮಂಡಳಿ ಚಿಕಿತ್ಸೆ ಕೊಡಿಸಿದೆ. ಮಗಳ ಅನಾರೋಗ್ಯ ವಿಚಾರವನ್ನು ಪೋಷಕರ ಗಮನಕ್ಕೆ ತರದೇ ನಿರ್ಲಕ್ಷ್ಯ ತೋರಿದ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಪ್ರಾಸಿಕ್ಯೂಷನ್ ವಿರೋಧಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ಹೃದಯಾಘಾತದಿಂದ ಸಾವು
ಇಂದು ಬೆಳಗ್ಗೆ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಈಗ ಆಡಳಿತ ಮಂಡಳಿ ಪೋಷಕರಿಗೆ ವಿಷಯ ಮುಟ್ಟಿಸಿದ್ದು, ಅವರು ಬರುವ ಮುನ್ನವೇ ಜಯಪ್ರಾರ್ಥನ ಮೃತಪಟ್ಟಿದ್ದಾರೆ. ಮಗಳ ಸಾವಿಗೆ ಕಾಲೇಜು ಆಡಳಿತ ಮಂಡಳಿ ಕಾರಣ ಎಂದು ಪೋಷಕರು ಆರೋಪ ಮಾಡಿದ್ದು, ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:37 pm, Mon, 19 August 24