ಕಟ್ಟಡ ಕಾರ್ಮಿಕ ಮಕ್ಕಳ ಸಹಾಯಧನಕ್ಕೆ ಸರ್ಕಾರ ಕತ್ತರಿ: ಕಲಿಕಾ ಭಾಗ್ಯಕ್ಕೆ “ಕಡಿತ” ಭಾಗ್ಯ

ಕಟ್ಟಡ ಕಾರ್ಮಿಕ ಮಕ್ಕಳ ವಾರ್ಷಿಕ ಸಹಾಯಧನಕ್ಕೆ ಕಾರ್ಮಿಕ ಇಲಾಖೆ ಕತ್ತರಿ ಕತ್ತರಿ ಹಾಕಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಈಗ ಕಾಂಗ್ರೆಸ್​ ಸರ್ಕಾರ ಕಡಿತ ಮಾಡಿದೆ. ಭಾರೀ ಪ್ರಮಾಣದಲ್ಲಿ ಸಹಾಯಧನ ಕಡಿತ ಮಾಡಿದ್ದು ಈ ಬಗ್ಗೆ ಸರ್ಕಾರ ಅಕ್ಟೋಬರ್ 30 ರಂದು ಅಧಿಸೂಚನೆ ಹೊರಡಿಸಿದೆ. ಹಾಗಾದ್ರೆ, ಎಷ್ಟೆಷ್ಟು ಕಡಿತ ಮಾಡಿದೆ ಎನ್ನುವ ಅಂಕಿ-ಅಂಶ ಈ ಕೆಳಗಿನಂತಿದೆ ನೋಡಿ.

ಕಟ್ಟಡ ಕಾರ್ಮಿಕ ಮಕ್ಕಳ ಸಹಾಯಧನಕ್ಕೆ ಸರ್ಕಾರ ಕತ್ತರಿ: ಕಲಿಕಾ ಭಾಗ್ಯಕ್ಕೆ ಕಡಿತ ಭಾಗ್ಯ
ವಿಧಾನಸೌಧ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 08, 2023 | 2:41 PM

ಬೆಂಗಳೂರು, (ನವೆಂಬರ್ 08): ಕಾಂಗ್ರೆಸ್​ ಸರ್ಕಾರ (Congress Government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ(guarantee scheme)  ಅನುದಾನ ಸರಿದೂಗಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಬೇರೆ ಯೋಜನೆಗಳ ಅನುದಾನವನ್ನು ಈ ಗ್ಯಾರಂಟಿಗೆ ಕೊಡಲಾಗುತ್ತಿದೆ. ಅಲ್ಲದೇ ಕೆಲ ಯೋಜನೆಗಳಿಗೆ ಕತ್ತರಿ ಹಾಕಲಾಗಿದೆ. ಅದರಂತೆ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಕತ್ತರಿ ಬಿದ್ದಿದೆ. ಹೌದು..  ಕಾರ್ಮಿಕ ಇಲಾಖೆ, ಕಲಿಕಾ ಭಾಗ್ಯ ಯೋಜನೆ(kalika bhagya yojana) ಅಡಿಯಲ್ಲಿ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೀಡುವ ವಾರ್ಷಿಕ ಸಹಾಯಧನವನ್ನು ಕಡಿತಗೊಳಿಸಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ ಕಾರ್ಮಿಕ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಕಡಿತ ಮಾಡಿದೆ. ಭಾರೀ ಪ್ರಮಾಣದಲ್ಲಿ ಸಹಾಯಧನ ಕಡಿತ ಮಾಡಿದ್ದು ಈ ಬಗ್ಗೆ ಸರ್ಕಾರ ಅಕ್ಟೋಬರ್ 30 ರಂದು ಅಧಿಸೂಚನೆ ಹೊರಡಿಸಿದೆ. ಕಟ್ಟಡ ಕಾರ್ಮಿಕರ ಮಕ್ಕಳ ಕಲಿಕೆ ಭಾಗ್ಯಕ್ಕೆ “ಕಡಿತ” ಭಾಗ್ಯ ಕರುಣಿಸಿದೆ.

ಇದನ್ನೂ ಓದಿ: 2023-24ರಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅವಕಾಶಗಳು

ಹಿಂದಿನ ಮೊತ್ತ ಈಗಿನ ಮೊತ್ತ

  • 1-4 ತರಗತಿ ವರೆಗಿನ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 5000 ರೂ. ನೀಡಲಾಗುತ್ತಿತ್ತು. ಆದ್ರೆ, ಇದೀಗ ಅದನ್ನು ಕಾಂಗ್ರೆಸ್​ ಸರ್ಕಾರ 1100 ರೂ.ಗೆ ಇಳಿಸಿದೆ.
  • 5-8 ತರಗತಿ ‌ ವಿದ್ಯಾರ್ಥಿಗಳಿಗೆ 8000 ರೂ. ರಿಂದ 1250 ರೂಪಾಯಿಗೆ ಇಳಿಕೆ. 9-10 ತರಗತಿ ಮಕ್ಕಳಿಗೆ ನೀಡಲಾಗುತ್ತಿದ್ದ 12000 ರೂಪಾಯಿ ಈಗ 3000 ರೂ.ಗೆ ಇಳಿಕೆ ಮಾಡಲಾಗಿದೆ.
  • ಪಿಯುಸಿ ವಿದ್ಯಾರ್ಥಿಗಳ 15000 ರೂಪಾಯಿಯನ್ನು 4600 ರೂ.ಗೆ ಇಳಿಸಲಾಗಿದೆ.
  • ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ 25000 ರೂ. ಅನ್ನು 6000 ರೂ.ನೀಡಲಾಗಿದೆ.
  • ಬಿಇ, ಬಿಟೆಕ್ ವಿದ್ಯಾರ್ಥಿಗಳಿಗೆ 50000 ರೂಪಾಯಿದಿಂದ 10000ರೂ.ಗೆ ಇಳಿಕೆ
  • ಪಿಜಿ 30000 -10000,
  • ಐಟಿಐ/ಡಿಪ್ಲಮೊ 20000-4600
  • ನರ್ಸಿಂಗ್/ಪ್ಯಾರ ಮೆಡಿಕಲ್ 40000-10000,
  • ಬಿ.ಇಡಿ 35000-6000
  • ಡಿ.ಇಡಿ 25000 – 4600
  • ವೈದ್ಯಕೀಯ 60000-11000,
  • ಎಲ್ಎಲ್‌ಬಿ/ಎಲ್‌ಎಲ್‌ಎಂ 30000-10000
  • ಪಿಎಚ್‌ಡಿ/ಎಂ.ಫಿಲ್ 25000 ರೂಪಾಯಿನಿಂದ 11000 ರೂ.ಗೆ ಇಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Wed, 8 November 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ