ಸ್ವಾತಂತ್ರ್ಯ ದಿನವೂ ಹುಬ್ಬಳ್ಳಿಯಲ್ಲಿ ವಿವಾದ: ಹೆಚ್ಎಸ್ಎಫ್ ಬೋರ್ಡ್ ಹಾಕಿ ಧ್ವಜಾರೋಹಣ, ಶ್ರೀರಾಮಸೇನೆ ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 15, 2024 | 6:54 PM

ಹಳೇ ಹುಬ್ಬಳ್ಳಿಯ ಸರ್ಕಲ್​ನಲ್ಲಿ ಬ್ಯಾರಲ್ ಮೇಲೆ ‘ಹೆಚ್ಎಸ್ಎಫ್’ ಬೋರ್ಡ್ ಹಾಕಿ ಧ್ವಜಾರೋಹಣ ಮಾಡಿರುವಂತಹ ಘಟನೆ ನಡೆದಿದೆ. ಶಾಂತಿ ಕದಡಲು ಯತ್ನಿಸಿದ ಆರೋಪದಡಿ ಹುಬ್ಬಳ್ಳಿ-ಧಾರವಾಡ ಡಿಸಿಪಿ ನಂದಗಾವಿಗೆ ಶ್ರೀರಾಮಸೇನೆ ದೂರು ನೀಡಿದ್ದು, ಧ್ವಜಾರೋಹಣ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಸ್ವಾತಂತ್ರ್ಯ ದಿನವೂ ಹುಬ್ಬಳ್ಳಿಯಲ್ಲಿ ವಿವಾದ: ಹೆಚ್ಎಸ್ಎಫ್ ಬೋರ್ಡ್ ಹಾಕಿ ಧ್ವಜಾರೋಹಣ, ಶ್ರೀರಾಮಸೇನೆ ದೂರು
ಸ್ವಾತಂತ್ರ್ಯ ದಿನವೂ ಹುಬ್ಬಳ್ಳಿಯಲ್ಲಿ ವಿವಾದ: ಹೆಚ್ಎಸ್ಎಫ್ ಬೋರ್ಡ್ ಹಾಕಿ ಧ್ವಜಾರೋಹಣ, ಶ್ರೀರಾಮಸೇನೆ ದೂರು
Follow us on

ಹುಬ್ಬಳ್ಳಿ, ಆಗಸ್ಟ್​ 15: ಬ್ಯಾರಲ್ ಮೇಲೆ ಹಜರತ್ ಸೈಯದ್ ಫತೇಶಾ ವಲಿ ದರ್ಗಾ ಎಂಬ ಬೋರ್ಡ್ ಹಾಕಿ ಧ್ವಜಾರೋಹಣ (Independence Day) ಮಾಡಿರುವಂತಹ ಘಟನೆ ಹಳೇ ಹುಬ್ಬಳ್ಳಿಯ ಸರ್ಕಲ್​ನಲ್ಲಿ ನಡೆದಿದೆ. ಆ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆ ದಿನವೂ ಹಳೇ ಹುಬ್ಬಳ್ಳಿಯಲ್ಲಿ ವಿವಾದ ಉಂಟಾಗಿದೆ. ಅನುಮತಿ ಇಲ್ಲದೆ ಅನ್ಯಕೋಮಿನವರಿಂದ ಧ್ವಜಾರೋಹಣ ಆರೋಪ ಕೇಳಿಬಂದಿದ್ದು, ಬ್ಯಾರಲ್ ಮೇಲಿದ್ದ ಹೆಚ್ಎಸ್ಎಫ್ ಬರಹವನ್ನು ಪೊಲೀಸರು ಅಳಿಸಿಹಾಕಿದ್ದಾರೆ.

ಶಾಂತಿ ಕದಡಲು ಯತ್ನಿಸಿದ ಆರೋಪದಡಿ ಹುಬ್ಬಳ್ಳಿ-ಧಾರವಾಡ ಡಿಸಿಪಿ ನಂದಗಾವಿಗೆ ಶ್ರೀರಾಮಸೇನೆ ದೂರು ನೀಡಿದ್ದು, ಧ್ವಜಾರೋಹಣ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಇನ್ನು ಸ್ವತಃ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸುರೇಶ್ ಯಳ್ಳೂರ ಧ್ವಜಾರೋಹಣ ಮಾಡಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣ ಸ್ವಾತಂತ್ರೋತ್ಸವ ಆಚರಣೆ

ಕೊಡಗು: ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ ಮತ್ತು ನೂತನ ಕಾಂಪೌಂಡ್ ನಿರ್ಮಿಸುವ ಮೂಲಕ ಬೆಂಗಳೂರು ಮೂಲದ ಬೈಕಿಂಗ್ ಬುಡ್ಡೀಸ್ ಸಂಸ್ಥೆಯ ಸದಸ್ಯರಿಂದ ಅರ್ಥಪೂರ್ಣ ಸ್ವಾತಂತ್ರೋತ್ಸವ ಆಚರಣೆ ಮಾಡಿರುವಂತಹ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರಾಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಹಳೇ ನಾಣ್ಯ, ನೋಟು ಸಂಗ್ರಹಿಸಿ ಭಾರತ ನಕ್ಷೆ ತಯಾರಿಸಿ ಸ್ವಾತಂತ್ರೋತ್ಸವ ಸಂಭ್ರಮಾಚರಣೆ

ಸಂಸ್ಥೆಯ ಹತ್ತನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗೆ ನೆರವಾಗಿದ್ದಾರೆ. 78 ನೇ ಸ್ವಾತಂತ್ರ್ಯ ಸಂಭ್ರಮ ಹಿನ್ನೆಲೆಯಲ್ಲಿ ಆಕರ್ಷಕ ಮೆರವಣಿಗೆ ಮೂಲಕ ಶಾಲಾ ಆವರಣಕ್ಕೆ ಆಗಮಿಸಿ ಧ್ವಜಾರೋಹಣ ಮಾಡಲಾಗಿದೆ. ಗ್ರಾಮಸ್ಥರ ಸಮ್ಮುಖದಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಗಿದೆ.

ಯಾದಗಿರಿಯಲ್ಲಿ ಅದ್ದೂರಿ ಸ್ವಾತಂತ್ರ್ಯ ದಿನಾಚಾರಣೆ

ಯಾದಗಿರಿ: ಜಿಲ್ಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚಾರಣೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಯ್ತು. ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಪೂರ ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ರು. ಬಳಿಕ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ರು. ಬಳಿಕ ತೆರದ ವಾಹನದಲ್ಲಿ ತೆರಳಿ ಪರೇಡ್ ಪರಿವೀಕ್ಷಣೆ ನಡೆಸಿದ್ರು.

ಇದನ್ನೂ ಓದಿ: ಗಗನಕ್ಕೇರಿದ ಹೂ, ಹಣ್ಣು, ತರಕಾರಿ ಬೆಲೆ; ರೈತರಿಗೆ ವರವಾದ ವರಮಹಾಲಕ್ಷ್ಮಿ ಹಬ್ಬ

ಇದಾದ ಬಳಿಕ ಪೊಲೀಸ್, ಅಗ್ನಿ ಶಾಮಕ ಸೇರಿದಂತೆ ವಿವಿಧ ತಂಡಗಳು ಪರೇಡ್ ನಡೆಸಿ ಸಚಿವರಿಗೆ ಗೌರವ ಸಲ್ಲಿಸಿದ್ರು. ಬಳಿಕ ವಿವಿಧ ಶಾಲೆಯ ಮಕ್ಕಳು ವಿವಿಧ ದೇಶ ಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು. ಉತ್ತಮ ನೃತ್ಯ ಮಾಡಿದ ತಂಡಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಶಸ್ತಿ ಪತ್ರವನ್ನ ನೀಡಲಾಯ್ತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನ ವಹಿಸಬೇಕಿದ್ದ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಬಂಧನ ಭೀತಿ ಹಿನ್ನಲೆ ಗೈರಾಗಿದ್ರು ಅಂತ ಹೇಳಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.