ಅಡುಗೆ ಅನಿಲ ಸೋರಿಕೆ: ಮನೆಯಲ್ಲಿ ಭಾರೀ ಸ್ಫೋಟ
ಮಂಗಳೂರು: ನಗರದ ವಾಸ್ ಲೇನ್ ಬಳಿಯ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸ್ವಲ್ಪದರಲ್ಲಿಯೇ ಭಾರೀ ಅನಾಹುತವೊಂದು ತಪ್ಪಿದೆ. ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು, ತಿಳಿಯದೇ ಮನೆಯವ್ರು ವಿದ್ಯುತ್ ಸ್ವಿಚ್ ಹಾಕಿದ್ದಾರೆ.ಆ ವೇಳೆ ದೊಡ್ಡ ಸ್ಫೋಟ ಸಂಭವಿಸಿದೆ. ಮನೆಯಲ್ಲಿದ್ದ ಗದಗ ಮೂಲದ ಮಂಜುನಾಥ್(25) ಮತ್ತು ರೇಖಾ(20) ಎಂಬವರಿಗೆ ಗಾಯಗಳಾಗಿವೆ. ಸ್ಪೋಟದ ತೀವ್ರತೆಗೆ ಮನೆಯ ಕಿಟಕಿ ಗಾಜು ಒಡೆದಿದ್ದು, ಮನೆ ಮುಂದೆ ನಿಂತಿದ್ದ ಕಾರಿಗೆ ಹಾನಿಯಾಗಿದೆ. ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.
ಮಂಗಳೂರು: ನಗರದ ವಾಸ್ ಲೇನ್ ಬಳಿಯ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸ್ವಲ್ಪದರಲ್ಲಿಯೇ ಭಾರೀ ಅನಾಹುತವೊಂದು ತಪ್ಪಿದೆ.
ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದು, ತಿಳಿಯದೇ ಮನೆಯವ್ರು ವಿದ್ಯುತ್ ಸ್ವಿಚ್ ಹಾಕಿದ್ದಾರೆ.ಆ ವೇಳೆ ದೊಡ್ಡ ಸ್ಫೋಟ ಸಂಭವಿಸಿದೆ. ಮನೆಯಲ್ಲಿದ್ದ ಗದಗ ಮೂಲದ ಮಂಜುನಾಥ್(25) ಮತ್ತು ರೇಖಾ(20) ಎಂಬವರಿಗೆ ಗಾಯಗಳಾಗಿವೆ. ಸ್ಪೋಟದ ತೀವ್ರತೆಗೆ ಮನೆಯ ಕಿಟಕಿ ಗಾಜು ಒಡೆದಿದ್ದು, ಮನೆ ಮುಂದೆ ನಿಂತಿದ್ದ ಕಾರಿಗೆ ಹಾನಿಯಾಗಿದೆ. ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.
Published On - 1:11 pm, Mon, 25 November 19