ಕೋಲಾರ: ಸಾಲ ಮರುಪಾವತಿಸದೆ NOC (ನಿರಾಕ್ಷೇಪಣಾ ಪತ್ರ) ನೀಡಿ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ CEO ಸುಧಾಕರ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆಮಾಡಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಮಂಗಲದಲ್ಲಿ ನಡೆದಿದೆ. ಸಾಲ ಮರುಪಾವತಿಸದೆ NOC ಕೊಡಲು ಒಪ್ಪದ ಸಿಬ್ಬಂದಿ ಮೇಲೆ ಮಂಗಲ ಗ್ರಾಮದ ನಾರಾಯಣಸ್ವಾಮಿ ಎಂಬಾತ ಹಲ್ಲೆ ಮಾಡಿದ್ದಾನೆ.
ಸಾಲ ಮರುಪಾವತಿಸದೇ NOC ನೀಡುವುದಿಲ್ಲ ಎಂದು ಹೇಳಿದ ಸುಧಾಕರ್ ಮೇಲೆ ಇಂದು ನಾರಾಯಣಸ್ವಾಮಿ ಎಂಬಾತ ಏಕಾಏಕಿ ಹಲ್ಲೆ ಮಾಡಿರುವ ಜೊತೆ ಕೊಲೆ ಬೆದರಿಕೆಯನ್ನು ಸಹ ಹಾಕಿದ್ದಾನೆ ಎಂದು ಹೇಳಲಾಗಿದೆ. ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ನಾರಾಯಣಸ್ವಾಮಿ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆನರಾ ಬ್ಯಾಂಕ್ ಮಹಿಳಾ ಅಧಿಕಾರಿ ಮೇಲೆ ಹಲ್ಲೆ, ಪೊಲೀಸ್ ಅಧಿಕಾರಿ ಸಸ್ಪೆಂಡ್ಗೆ ಸಚಿವೆ ನಿರ್ಮಲಾ ಸೂಚನೆ