ಬೆಂಗಳೂರಿನ 27 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊವಾಕ್ಸಿನ್ 2ನೇ ಡೋಸ್ ಲಭ್ಯ

ಕೊವಾಕ್ಸಿನ್ 2ನೇ ಡೋಸ್ ಈ ಕೆಳಗಿನ 27 ಆಯ್ದ ಆಸ್ಪತ್ರೆಗಳು/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದೆ. 2ನೇ ಡೋಸ್ ಗೆ ಕಾಯುತ್ತಿರುವವರು ನೇರವಾಗಿ ವಾಕ್ ಇನ್ ಮೂಲಕ ಬರಬಹುದು ಎಂದು ಬಿಬಿಎಂಪಿ ಕಮೀಷನರ್ ಫೇಸ್ಬುಕ್ ಮೂಲಕ ತಿಳಿಸಿದ್ದಾರೆ.

ಬೆಂಗಳೂರಿನ 27 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊವಾಕ್ಸಿನ್ 2ನೇ ಡೋಸ್ ಲಭ್ಯ
ಕೊವ್ಯಾಕ್ಸಿನ್

Updated on: May 30, 2021 | 12:41 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವ ಹೆಚ್ಚಾಗಿದ್ದು ಜನ ಸರತಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯದೆ ಮನೆಗೆ ವಾಪಾಸ್ ಆಗುವ ಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯದ ಅನೇಕ ವ್ಯಾಕ್ಸಿನ್ ಸೆಂಟರ್​ಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಲಸಿಕೆ ಸಿಗದೇ ವ್ಯಾಕ್ಸಿನ್ ಸೆಂಟರ್​ಗಳ ಮುಂದೆ ಜನ ಸಿಬ್ಬಂದಿಗಳೊಂದಿಗೆ ಗಲಾಟೆ ಮಾಡಿದ ಘಟನೆಗಳು ನಡೆದಿದ್ದವು. ಸದ್ಯ ಈಗ ನಗರದ 27 ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 2ನೇ ಡೋಸ್ ಲಭ್ಯವಿದೆ ಎಂದು ಬಿಬಿಎಂಪಿ ತಿಳಿಸಿದೆ.

ಕೊವಾಕ್ಸಿನ್ 2ನೇ ಡೋಸ್ ಈ ಕೆಳಗಿನ 27 ಆಯ್ದ ಆಸ್ಪತ್ರೆಗಳು/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದೆ. 2ನೇ ಡೋಸ್ ಗೆ ಕಾಯುತ್ತಿರುವವರು ನೇರವಾಗಿ ವಾಕ್ ಇನ್ ಮೂಲಕ ಬರಬಹುದು ಎಂದು ಬಿಬಿಎಂಪಿ ಕಮಿಷನರ್ ಫೇಸ್​ಬುಕ್​ ಮೂಲಕ ತಿಳಿಸಿದ್ದಾರೆ.

ನಗರದ 27 ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 2ನೇ ಡೋಸ್ ಲಭ್ಯವಿದೆ

ಇನ್ನು ಇದರ ಜೊತೆ ಬಿಪಿಎಲ್ ಕಾರ್ಡ್ ಇರುವ ರೋಗಿಗಳಿಗೆ ಮತ್ತು ಇತರ ರೋಗಿಗಳಿಗೆ ಹೆಚ್‌ಆರ್‌ಸಿಟಿ/ಸಿಟಿ ಸ್ಕ್ಯಾನ್ ಮತ್ತು ಖಾಸಗಿ ಆಂಬ್ಯುಲೆನ್ಸ್ ಸೇವೆಗಾಗಿ ನಿಗದಿತ ದರವನ್ನು ಕರ್ನಾಟಕ ಸರ್ಕಾರ ನಿಗದಿಪಡಿಸಿದೆ. ಅನಗತ್ಯವಾಗಿ ಹೆಚ್ಚು ಶುಲ್ಕ ವಿಧಿಸುವವರ ಬಗ್ಗೆ ಎಚ್ಚರ ವಹಿಸಿ! ಎಂದು ಬಿಬಿಎಂಪಿ ಕಮಿಷನರ್ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ.

ಇದನ್ನೂ ಓದಿ:

ಕೊವ್ಯಾಕ್ಸಿನ್​​ ಲಸಿಕೆ ತಯಾರಿಕೆಯಿಂದ ಪೂರೈಕೆ ತನಕ ಒಟ್ಟು 4 ತಿಂಗಳ ಸಮಯ ಬೇಕು: ಭಾರತ್ ಬಯೋಟೆಕ್

ದೇಶದಲ್ಲಿ ಉತ್ಪಾದನೆಯಾದ ಕೊವ್ಯಾಕ್ಸಿನ್ ಎಲ್ಲಿಗೆ ಹೋಯ್ತು? ಕೊವ್ಯಾಕ್ಸಿನ್ ಉತ್ಪಾದನೆ, ಬಳಕೆ ಲೆಕ್ಕ ಪರಸ್ಪರ ತಾಳೆಯಾಗುತ್ತಿಲ್ಲ

Published On - 12:31 pm, Sun, 30 May 21