ದೇಶದಲ್ಲಿ ಉತ್ಪಾದನೆಯಾದ ಕೊವ್ಯಾಕ್ಸಿನ್ ಎಲ್ಲಿಗೆ ಹೋಯ್ತು? ಕೊವ್ಯಾಕ್ಸಿನ್ ಉತ್ಪಾದನೆ, ಬಳಕೆ ಲೆಕ್ಕ ಪರಸ್ಪರ ತಾಳೆಯಾಗುತ್ತಿಲ್ಲ
ದೇಶದಲ್ಲಿ ಈವರೆಗೆ 8 ಕೋಟಿ ಡೋಸ್ ಕೊವ್ಯಾಕ್ಸಿನ್ ಉತ್ಪಾದನೆ ಮಾಡಲಾಗಿದೆ. 8 ಕೋಟಿ ಡೋಸ್ ಪೈಕಿ 2 ಕೋಟಿ ಡೋಸ್ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಹಾಗೂ ಉಳಿದ 6 ಕೋಟಿ ಡೋಸ್ನಲ್ಲಿ ದೇಶದಲ್ಲಿ ಈವರೆಗೆ 2 ಕೋಟಿ ಡೋಸ್ ಜನರಿಗೆ ನೀಡಲಾಗಿದೆ. ಹಾಗಾದರೆ ಉಳಿದ 4 ಕೋಟಿ ಡೋಸ್ ಲಸಿಕೆ ಎಲ್ಲಿ ಹೋಯಿತು ಎಂಬ ಪ್ರಶ್ನೆ ಉದ್ಭವಿಸಿದೆ.
ದೆಹಲಿ: ಕೊರೊನಾ ಮಹಾಮಾರಿ ಇಡೀ ದೇಶವನ್ನೆ ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟಿದೆ. ಈ ಮಹಾಮಾರಿಯ ವಿರುದ್ಧ ಹೋರಾಡಲು ಸದ್ಯ ಲಸಿಕೆ ಪಯೋಗ ಮಾಡಲಾಗುತ್ತಿದೆ. ಆದರೆ ದೇಶದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಿಸಿರುವ ಹೊತ್ತಿನಲ್ಲಿ ಲಸಿಕೆ ಕೊರತೆಯೂ ತಲೆದೋರಿರುವುದು ಮತ್ತಷ್ಟು ಸಂಕಟಕ್ಕೆ ಕಾರಣವಾಗಿದೆ. ಬಹುತೇಕ ಎಲ್ಲಾ ಕಡೆ ಕೊರೊನಾ ಲಸಿಕೆಗೆ ಅಭಾವ ಉಂಟಾಗಿದೆ. ಆದರೆ ದೇಶದಲ್ಲಿ ಉತ್ಪಾದನೆಯಾದ ಕೊವ್ಯಾಕ್ಸಿನ್ ಎಲ್ಲಿಗೆ ಹೋಯ್ತು? ಎಂಬ ಪ್ರಶ್ನೆ ಎದ್ದಿದೆ.
ದೇಶದಲ್ಲಿ ಈವರೆಗೆ 8 ಕೋಟಿ ಡೋಸ್ ಕೊವ್ಯಾಕ್ಸಿನ್ ಉತ್ಪಾದನೆ ಮಾಡಲಾಗಿದೆ. 8 ಕೋಟಿ ಡೋಸ್ ಪೈಕಿ 2 ಕೋಟಿ ಡೋಸ್ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಹಾಗೂ ಉಳಿದ 6 ಕೋಟಿ ಡೋಸ್ನಲ್ಲಿ ದೇಶದಲ್ಲಿ ಈವರೆಗೆ 2 ಕೋಟಿ ಡೋಸ್ ಜನರಿಗೆ ನೀಡಲಾಗಿದೆ. ಹಾಗಾದರೆ ಉಳಿದ 4 ಕೋಟಿ ಡೋಸ್ ಲಸಿಕೆ ಎಲ್ಲಿ ಹೋಯಿತು ಎಂಬ ಪ್ರಶ್ನೆ ಉದ್ಭವಿಸಿದೆ.
ಇನ್ನು ಕೊವ್ಯಾಕ್ಸಿನ್ ಉತ್ಪಾದನೆ ಮತ್ತು ಬಳಕೆಯಾದ ಅಂಕಿ ಅಂಶ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಬಗ್ಗೆ ಭಾರತ್ ಬಯೋಟೆಕ್ ಕಂಪನಿಯಿಂದ ಈವರೆಗೆ ಸ್ಪಷ್ಟನೆಯಿಲ್ಲ. ರಾಜ್ಯ ಸರ್ಕಾರಗಳಿಂದ ಕೊವ್ಯಾಕ್ಸಿನ್ಗೆ ಅಪಾರ ಬೇಡಿಕೆಯಿದೆ. ಆದರೆ ರಾಜ್ಯ ಸರ್ಕಾರಗಳಿಗೂ ಹೆಚ್ಚಿನ ಲಸಿಕೆ ಪೂರೈಕೆಯಾಗ್ತಿಲ್ಲ. ಹಾಗಾದ್ರೆ 4 ಕೋಟಿ ಡೋಸ್ ಕೊವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ದರಕ್ಕೆ ಲಸಿಕೆ ಪೂರೈಸಿದೆಯಾ? ಎಂಬ ಅನುಮಾನ ಉಂಟಾಗಿದೆ. ಕೊವ್ಯಾಕ್ಸಿನ್ ಉತ್ಪಾದನೆ, ಬಳಕೆ ಲೆಕ್ಕ ಪರಸ್ಪರ ತಾಳೆಯಾಗುತ್ತಿಲ್ಲ ಹೀಗಾಗಿ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಆದಷ್ಟು ಬೇಗ ಈ ಬಗ್ಗೆ ತನಿಖೆ ನಡೆಸಿ ಸತ್ಯವನ್ನು ಬಯಲು ಮಾಡಬೇಕಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ, ಔಷಧಿ ಮೇಲಿನ ಜಿಎಸ್‌ಟಿಗೆ ಬೀಳುತ್ತಾ ಕಡಿವಾಣ; ಮೇ 28ಕ್ಕೆ ಜಿಎಸ್ಟಿ ಮಂಡಳಿ ಮಹತ್ವದ ಸಭೆ