ಲಸಿಕೆ ಡೋಸ್ ಮಿಶ್ರಣ: ಉತ್ತರಪ್ರದೇಶದಲ್ಲಿ 20 ಮಂದಿಗೆ 2 ವಿಭಿನ್ನ ಲಸಿಕೆ; ಸಮಸ್ಯೆ ಏನೂ ಆಗಲ್ಲ ಎಂದ ಕೇಂದ್ರ ಸರ್ಕಾರ

Vaccine Dose mix-up: ವ್ಯಾಕ್ಸಿನೇಷನ್ ಕೇಂದ್ರಗಳು ಪ್ರೋಟೋಕಾಲ್ ಪ್ರಕಾರ ಅದೇ ಲಸಿಕೆಗಳ ಡೋಸ್ ಗಳು ನೀಡಬೇಕು. ಆದರೆ ಮಿಶ್ರಣ ಸಂಭವಿಸಿದಲ್ಲಿ, ಯಾವುದೇ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿಲ್ಲ ಎಂದಿದ್ದಾರೆ ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ. ಪೌಲ್.

ಲಸಿಕೆ ಡೋಸ್ ಮಿಶ್ರಣ: ಉತ್ತರಪ್ರದೇಶದಲ್ಲಿ 20 ಮಂದಿಗೆ 2 ವಿಭಿನ್ನ ಲಸಿಕೆ; ಸಮಸ್ಯೆ ಏನೂ ಆಗಲ್ಲ ಎಂದ ಕೇಂದ್ರ ಸರ್ಕಾರ
ಕೊವಿಡ್ 19 ಲಸಿಕೆ ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: May 28, 2021 | 11:40 AM

ದೆಹಲಿ: ಎರಡು ವಿಭಿನ್ನ ಲಸಿಕೆಗಳನ್ನು ಪಡೆದರೆ ಗಾಬರಿಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ನೇಪಾಳದ ಗಡಿಯಲ್ಲಿರುವ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಕನಿಷ್ಠ 20 ಜನರಿಗೆ ವಿವಿಧ ಲಸಿಕೆಗಳ ಡೋಸ್ ನೀಡಿದ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ಈ ರೀತಿ ಪ್ರತಿಕ್ರಿಯಿಸಿದೆ. ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ. ಪೌಲ್ ಅವರು, ವ್ಯಾಕ್ಸಿನೇಷನ್ ಕೇಂದ್ರಗಳು ಪ್ರೋಟೋಕಾಲ್ ಪ್ರಕಾರ ಅದೇ ಲಸಿಕೆಗಳ ಡೋಸ್ ಗಳು ನೀಡಬೇಕು. ಆದರೆ ಮಿಶ್ರಣ ಸಂಭವಿಸಿದಲ್ಲಿ, ಯಾವುದೇ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿಲ್ಲ ಎಂದಿದ್ದಾರೆ. ಎರಡು ಸ್ಲಾಟ್‌ಗಳಲ್ಲಿ ಎರಡು ವಿಭಿನ್ನ ಲಸಿಕೆಗಳನ್ನು ಪಡೆದ 20 ಜನರು ಎಲ್ಲರೂ ಆಡಾಹಿ ಕಲಾನ್ ಗ್ರಾಮದವರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರು. ಏಪ್ರಿಲ್ 1 ರಂದು, ಕೊವಿಶೀಲ್ಡ್ ಒಂದು ಡೋಸ್ ನೀಡಲಾಯಿತು. ಅದು ಅವರ ಮೊದಲ ಡೋಸ್ ಆಗಿದೆ. ಮೇ 14 ರಂದು ಅವರಿಗೆ ಎರಡನೇ ಡೋಸ್ ನೀಡಲಾಯಿತು. ಆರೋಗ್ಯ ಕಾರ್ಯಕರ್ತರು ಈ ಮೊದಲು ಅವರಿಗೆ ಯಾವ ಲಸಿಕೆ ನೀಡಲಾಗಿದೆಯೆಂದು ಕಂಡುಹಿಡಿಯಲು ಕಾರ್ಡ್ ಪರಿಶೀಲಿಸದ ಕಾರಣ, ಅವರಿಗೆ ತಪ್ಪಾಗಿ ಕೊವಾಕ್ಸಿನ್ ನೀಡಲಾಯಿತು.

ಗ್ರಾಮದವರಾದ ರಾಮ್ ಸೂರತ್ ಅವರು ಎರಡು ಡೋಸ್‌ಗಳಲ್ಲಿ ಎರಡು ವಿಭಿನ್ನ ಲಸಿಕೆಗಳನ್ನು ನೀಡುತ್ತಿರುವುದನ್ನು ಗಮನಿಸಿದರು. ಅವುಗಳಲ್ಲಿ ಯಾವುದೂ ಯಾವುದೇ ವ್ಯತಿರಿಕ್ತ ಪರಿಣಾಮವನ್ನು ವರದಿ ಮಾಡಿಲ್ಲ ಎಂದು ವರದಿಗಳು ತಿಳಿಸಿವೆ.

ಕೆಲವು ದೇಶಗಳು ಅಧ್ಯಯನಗಳ ಆಧಾರದ ಮೇಲೆ ಕೊವಿಶೀಲ್ಡ್ ಮೊದಲ ಡೋಸ್ ಜತೆ ಫೈಜರ್ ಅಥವಾ ಮಾಡರ್ನಾ ಎರಡನೇ ಡೋಸ್ ಬೆರೆಸಲು ಅನುಮತಿ ನೀಡಿವೆ.

ಜನವರಿಯಲ್ಲಿ ಭಾರತದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾದಾಗ, ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎರಡು ಲಸಿಕೆಗಳನ್ನು ಬೆರೆಸದಂತೆ ಎಚ್ಚರಿಕೆ ವಹಿಸುವಂತೆ ಕೇಳಿಕೊಂಡಿತು. ಆದರೆ ಇತ್ತೀಚೆಗೆ ಡಾ. ಪೌಲ್ ಅವರು ಸೈದ್ಧಾಂತಿಕವಾಗಿ ಮತ್ತು ವೈಜ್ಞಾನಿಕವಾಗಿ, ಎರಡು ಲಸಿಕೆಗಳನ್ನು ಮಿಶ್ರಣ ಮಾಡಲು ಸಾಧ್ಯವಿದೆ ಎಂದು ಹೇಳಿದ್ದಾರೆ ಆದರೆ ವಿಷಯಕ್ಕೆ ವಿವರವಾದ ಅಧ್ಯಯನಗಳು ಬೇಕಾಗುತ್ತವೆ. ಪ್ರಾಯೋಗಿಕ ಆಧಾರದ ಮೇಲೆ ಲಸಿಕೆ ಪ್ರಮಾಣವನ್ನು ಮಿಶ್ರಣ ಮತ್ತು ಹೊಂದಾಣಿಕೆ ಮಾಡಲು ನೋಡುತ್ತಿರುವುದಾಗಿ ಕೇಂದ್ರ ಗುರುವಾರ ತಿಳಿಸಿದೆ.

ಭಾರತದಲ್ಲಿ ಸುಮಾರು 4.36 ಕೋಟಿ ‌ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15.9 ಕೋಟಿ ಜನರಿಗೆ ಮೊದಲ‌ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿದೆ. ಲಸಿಕೆ ನೀಡಿಕೆಯ ವೇಗ ಹೆಚ್ಚಾಗುತ್ತಿದೆ‌ ಎಂದು ಲಸಿಕೆ ಸಮಿತಿಯ ಮುಖ್ಯಸ್ಥ ವಿ.ಕೆ.ಪೌಲ್ ಹೇಳಿದರು. ಜುಲೈ ಅಂತ್ಯದ ವೇಳೆಗೆ 51.6 ಕೋಟಿ ಡೋಸ್ ಲಸಿಕೆ ವಿತರಿಸಲಾಗುವುದು. ವಿದೇಶಿ ಲಸಿಕಾ ಕಂಪನಿಗಳ ಜೊತೆಗೆ ಚರ್ಚೆ ನಡೆಸುತ್ತಿದ್ದೇವೆ. ಭಾರತ್ ಬಯೋಟೆಕ್ ಕಂಪನಿ 90 ಲಕ್ಷ ಡೋಸ್ ಲಸಿಕೆಯಿಂದ ಉತ್ಪಾದನೆ ಆರಂಭಿಸಿತು. ಈಗ ಈಗ ಉತ್ಪಾದನೆ ಪ್ರಮಾಣ ಹೆಚ್ಚಿಸಿದೆ.‌ ಇನ್ನೂ ಕೆಲವೇ ತಿಂಗಳಲ್ಲಿ ತಿಂಗಳಿಗೆ ಹತ್ತು ಕೋಟಿ ಡೋಸ್ ಲಸಿಕೆ ಉತ್ಪಾದಿಸಲಿದೆ. ಫೈಜರ್ ಕಂಪನಿಯು ಭಾರತಕ್ಕೆ ಲಸಿಕೆ ಪೂರೈಸಲು ಆಸಕ್ತಿ ತೋರಿಸಿದೆ ಅವರು ಮಾಹಿತಿ ನೀಡಿದರು.

ಮೊದಲ ಡೋಸ್ ಆಗಿ ಯಾವ ಲಸಿಕೆ ಪಡೆಯುತ್ತಾರೋ ಅದೇ ಲಸಿಕೆಯನ್ನು 2ನೇ ಡೋಸ್​ ಆಗಿ ತೆಗೆದುಕೊಳ್ಳಬೇಕು. ಉತ್ತರ ಪ್ರದೇಶದಲ್ಲಿ ಬೇರೆಬೇರೆ ಲಸಿಕೆಗಳ ಡೋಸ್ ಪಡೆದಿರುವವರಿಗೆ ಯಾವುದೇ ಅಡ್ಡಪರಿಣಾಮಗಳು ಕಂಡು ಬಂದಿಲ್ಲ. ಎರಡೂ ಡೋಸ್ ಪಡೆದ ಬಳಿಕ ಆ್ಯಂಟಿಬಾಡಿ ಟೆಸ್ಟ್ ಅಗತ್ಯವಿಲ್ಲ. ಕೊವ್ಯಾಕ್ಸಿನ್ ಲಸಿಕೆಯ ಬೂಸ್ಟರ್ ಡೋಸ್ ನೀಡುವ ಪ್ರಯೋಗ ನಡೆಯುತ್ತಿದೆ ಎಂದು ವಿ.ಕೆ.ಪೌಲ್  ವಿವರಿಸಿದರು.

ಇದನ್ನೂ ಓದಿ: ಕೊವಿಶೀಲ್ಡ್​ ಲಸಿಕೆ 2 ಡೋಸ್ ಪಡೆದಿದ್ದರೂ ಮತ್ತೆ ಕೊವ್ಯಾಕ್ಸಿನ್​ ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ; ನೋಂದಣಿಗೆ ಹೊಸ ಫೋನ್​ ನಂಬರ್​ ಬಳಕೆ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು