AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮಾಡಿದ ಉಪಕಾರವು ನಿಮಗೆ ಮರಳಿ ಬರಬಹುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ ಗುರುವಾರ ಏಕಾಂತಕ್ಕೆ ಭಂಗ, ಶ್ರೇಷ್ಠರ ಸಹವಾಸ, ಅಧಿಕಾರಕ್ಕೆ ಸಂಚು, ದೊರೆಯುದದರ ಬಗ್ಗೆ ಅಪಪ್ರಚಾರ ಇವೆಲ್ಲ ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ನೀವು ಮಾಡಿದ ಉಪಕಾರವು ನಿಮಗೆ ಮರಳಿ ಬರಬಹುದು
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Jul 03, 2025 | 1:02 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ವೃದ್ಧಿ, ಕರಣ: ಭದ್ರ, ಸೂರ್ಯೋದಯ – 06 : 09 am, ಸೂರ್ಯಾಸ್ತ – 07 – 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:14 : 15:51, ಯಮಘಂಡ ಕಾಲ 06:09 – 07:46, ಗುಳಿಕ ಕಾಲ 09:23 – 10:59

ಮೇಷ ರಾಶಿ: ಯಾರದೋ ಪ್ರಭಾವದಿಂದ ನಿಮ್ಮ ಕೆಲಸ ಆಗುವುದು. ಇಂದು ನೀವು ಮಾಡಿದ ಉಪಕಾರವು ನಿಮಗೆ ಮರಳಿಬರಬಹುದು. ದೀರ್ಘಕಾಲದಿಂದ ಮಾಡುತ್ತಿದ್ದ ಕೆಲಸಗಳು ಮುಕ್ತಾಯವಾಗುವುವು. ವೈದ್ಯಕೀಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆಯಾದೀತು‌. ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡುವವರಿಗೆ ಬರಬೇಕಾದ ಹಣ ಬಾರದೇ ಕಷ್ಟವಾಗುವುದು. ಭೂಮಿಗೆ ಸಂಬಂಧಿಸಿದ ವಿಚಾರವು‌ ನ್ಯಾಯಾಲಯದ ಮೆಟ್ಟಿಲೇರಿ ಬಗೆಹರಿಯದು. ನಿಮ್ಮ ಅತಿಯಾದ ಕಲ್ಪನೆ ಭಗ್ನವಾದೀತು. ಇದರಿಂದ ದುಃಖಿಸುವಿರಿ. ಸುಪ್ತವಾದ ಪ್ರತಿಭೆಯು ಅನಾವರಣಕ್ಕೆ ಸ್ಥಳ ಹುಡುಕುವುದು. ಇಂದು ನಿಮ್ಮ ಮಾತಿನ ಆರಂಭವೇ ನೀವು ಎಂತಹವರು ಎನ್ನುವುದನ್ನು ತಿಳಿಸುತ್ತದೆ. ಬಾಡಿಗೆ ಮನೆಯವರ ಜೊತೆ ಸಣ್ಣ ವಿಚಾರಕ್ಕೆ ಕಲಹವಾಗಲಿದೆ. ಚಿಂತಿಸದೇ ಅನ್ಯ ಮಾರ್ಗವನ್ನು ಹಿಡಿಯಿರಿ. ನಿಮ್ಮ ತೊಂದರೆಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯಬೇಕಾದ ಸ್ಥಿತಿ ಬರಬಹುದು.

ವೃಷಭ ರಾಶಿ: ಬಂಧುಗಳ ಆಗಮನವು ನಿಮಗೆ ಅನಿರೀಕ್ಷಿತವಾಗಲಿದೆ. ಸ್ವಯಂ‌ಕೃತ ಅಪರಾಧಕ್ಕೆ ಬೇರೆಯವರನ್ನು ಬೊಟ್ಟುಮಾಡಿ ತೋರಿಸುವುದು ಬೇಡ. ಹಣವನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದರೂ ನಿಮ್ಮ ಕೈ ಮೀರಿ ಹೋಗುವ ಸಂದರ್ಭವೇ ಇರುವುದು. ಪ್ರಯಾಣವನ್ನು ಅತಿಯಾಗಿ ಮಾಡಬೇಡಿ.‌ ಹಣದ ವಿಚಾರವಾಗಿ ಮನೆಯಲ್ಲಿ ಜಗಳವಾಹಬಹುದು. ನಿಮ್ಮ ವಾಹನಕ್ಕೆ ಅನ್ಯರಿಂದ ಅಪಾಯ. ಹಿರಿಯರ ಮಾತನನ್ನು ಅಹಂಕಾರದಿಂದ ಮುರಿಯಬೇಡಿ. ಬಿಸಿ ರಕ್ತವು ಆರಿದ ಮೇಲೆ ಪಶ್ಚಾತ್ತಾಪ ಪಡಬೇಕಾದೀತು. ಯಾರದೋ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನ ಫಲಿಸದು. ಮಾನಸಿಕ‌ ಆಲಸ್ಯ ಇಂದು ಸರಿಯಾದ ಕೆಲಸ ಸಿಗಲಿದ್ದು, ಅದನ್ನು ಅನಿವಾರ್ಯವಾಗಿ ಮಾಡುವಿರಿ. ಸೋಲಿಸುವ ಮನೋಭಾವದಿಂದ ಆಟವಾಡುವುದು ಬೇಡ. ಸಂಗಾತಿಯನ್ನು ತಮಾಷೆ ಮಾಡಲು ಹೋಗಿ ವೈಮನಸ್ಸು ಉಂಟಾಗಬಹದು. ನಿದ್ರೆಯಲ್ಲಿ ಆಗಾಗ ಎಚ್ಚರಿಕೆ ಆಗಬಹುದು. ವಾತಶಮನಕ್ಕೆ ವೈದ್ಯರನ್ನು ಭೇಟಿಯಾಗಿ. ಮಕ್ಕಳಲ್ಲಿ ಸ್ಪರ್ಧಾಮನೋಭಾವವನ್ನು ಹೆಚ್ಚಿಸುವಿರಿ.

ಮಿಥುನ ರಾಶಿ: ಇನ್ನೊಬ್ಬರಿಗೆ ಮಾಡಿದ ಸಹಾಯದಿಂದ ನಿಮಗೆ ಶಾಂತಿ ಸಿಗಲಿದೆ. ನಿಮ್ಮ ಉದ್ಯೋಗದ ಚಿಂತೆಯಿಂದ ಯಾವ ಪ್ರಯೋಜನವೂ ಆಗದು. ಚಿಂತನೆಯಿಂದ ಮಾತ್ರ ಬಂದಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಬಗೆ ಅರಿಯದಾದೀತು. ಸಂಪತ್ತಿನ ಜೊತೆಗೆ ಶತ್ರುಗಳೂ ಬರುವರು. ದಾನವಾಗಿ ಕೊಟ್ಟಿದ್ದನ್ನು ಮತ್ತೆ ಕೇಳಿ ಪಡೆಯುವಿರಿ. ನಿಮ್ಮವರ ಮೇಲೆ ಕಾಳಜಿ ಹೆಚ್ಚಿರುವುದು. ಅಧಿಕಾರದ ಪಡೆಯಲು ವಾಮಮಾರ್ಗವನ್ನು ಬಳಸಬಹುದು. ಬೇರೆಯವರ ಮೇಲೆ ಪ್ರಭಾವ ಬೀರುವ ಸಂದರ್ಭಬರಬಹುದು. ಹಣಕಾಸಿನ ಹೂಡಿಕೆಯು ಕಾನೂನುಬದ್ಧವಾಗಿರಲಿ. ಒಳ್ಳೆಯ ಕೆಲಸವನ್ನು ಸಿದ್ಧಿಸಿಕೊಳ್ಳಲು ಪ್ರಯತ್ನಿಸಿ. ರಾಜಕೀಯ ವ್ಯಕ್ತಿಗಳಾಗಿದ್ದರೆ ಒಂದು ಸಕಾರಾತ್ಮಕ ಸಂಚಲನವನ್ನು ತರುವಿರಿ. ಅಪರಿಚಿರ ಒಡನಾಟ ಕಡಿಮೆ ಮಾಡಿ. ಕುಟುಂಬವನ್ನು ನಡೆಸುವ ಜವಾಬ್ದಾರಿ ಸಿಗಬಹುದು. ಇಂದು ನೀವು ಅನವಶ್ಯಕ ವಸ್ತುಗಳನ್ನು ಇಷ್ಟಪಡುವಿರಿ. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು.

ಕರ್ಕಾಟಕ ರಾಶಿ: ವಾಹನದ ಮೋಹವು ನಿಮ್ಮನ್ನು ಕುರುಡುಮಾಡಬಹುದು. ನಿಮಗೆ ಇಂದು ಪ್ರಭಾವೀ ವ್ಯಕ್ತಿಗಳ ಸಹವಾಸದಿಂದ ಸ್ಥಾನವು ಪ್ರಾಪ್ತಿಯಾಗಲಿದೆ. ಪುಣ್ಯಸ್ಥಳದ ದರ್ಶ‌ನಕ್ಕೆಂದು ಪ್ರಯಾಣ ಮಾಡುವಿರಿ. ವಾಹನದಿಂದ‌ ಬಿದ್ದು ಪೆಟ್ಟು ಮಾಡಿಕೊಳ್ಳಬೇಡಿ. ನಿಮ್ಮ ನಡೆಯನ್ನು ತಿಳಿಯಲು ಜನರು ಕಷ್ಟಪಡುವರು. ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಲಿ. ಯೋಜನೆಗಳನ್ನು ಸರಿಯಾಗಿ ಬಿತ್ತರಿಸಿ. ಕೆಲಸವನ್ನು ಒಂಟಿಯಾಗಿ ಮಾಡಲು ಹಿಂಜರಿಯುವಿರಿ. ನಿಮಗೆ ಎಲ್ಲವೂ ಬಂಧನದಂತೆ ಅನ್ನಿಸುವುದು. ಎಲ್ಲರನ್ನೂ ಸುಮ್ಮನೇ ಅನುಮಾನದ ದೃಷ್ಟಿಯಿಂದ ನೋಡಬೇಡಿ. ಉದ್ಯೋಗದಲ್ಲಿ ಒಪ್ಪಂದವನ್ನು ಸರಿಯಾಗಿ ಮಾಡಿಕೊಳ್ಳಿ. ಇಷ್ಟಪಟ್ಟವರಿಗೆ ನೋವನ್ನು ಕೊಡುವಿರಿ. ಖರೀದಿಯಿಂದ ಮೋಸವಾಗುವ ಸಾಧ್ಯತೆ ಇದೆ. ಕಷ್ಟದಿಂದ ಸಂಪಾದಿಸಿದ್ದನ್ನು ಕಳೆದುಕೊಳ್ಳುವಿರಿ. ಪ್ರೀತಿಸುವ ವಸ್ತುವೊಂದು ಇಂದು ಹಾಳಾಗಿ ಹೋಗಲಿದೆ. ಕೈಗೆ ಸಿಗದ ಹಣ್ಣು ಹುಳಿ ಎನ್ನುವುದು ಸಹಜವೇ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ.

ಸಿಂಹ ರಾಶಿ: ನಿಮ್ಮ ವಿದ್ಯಾಭ್ಯಾಸದ ಆಸೆ ಪೂರ್ಣವಾಗಲಿದೆ. ಇಂದು ಅಸರಂಭಿಸಿದ ಕಾರ್ಯವನ್ನು ಮುಗಿಸುವ ಮನೋಭಾವದಲ್ಲಿ ಇರುವಿರಿ. ಆದರೆ ದೇಹದ ಆಲಸ್ಯ, ಮನಸ್ಸಿನಲ್ಲಿ ಇರುವ ಜಾಡ್ಯದಿಂದ ಯಾವ ಕಾರ್ಯಗಳೂ ಆಗದು. ಏಕಮುಖವಾದ ನಿರ್ಧಾರವನ್ನು ತೆಗದುಕೊಂಡು ನೀವು ಒಬ್ಬೊಟಿಯಾಗಬೇಕಾದೀತು. ನಿಮ್ಮ ಮಾತು ಪ್ರೇರಣೆಯಾಗಬಹುದು. ಎಲ್ಲರ ಜೊತೆ ಚರ್ಚಿಸಿ ಅವರನ್ನು ತೆಗೆದುಕೊಂಡು ಹೋಗಿ. ಸಿಟ್ಟಿನಿಂದ ಏನನ್ನೂ ಸಾಧಿಸಲಾಗದು ಎಂಬ ಸತ್ಯವು ತಿಳಿಯಬಹುದು. ಕೋಪದಲ್ಲಿ ಮೂಗು ಕತ್ತರಿಸಿದರೆ ಮರಳಿ ಬರುವುದೆ? ಗಣ್ಯರು ನಿಮ್ಮನ್ನು ಭೇಟಿಯಾದಾರು. ನೀವು ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಅವರಿಂದ ಸಹಾವಾಗಬಹುದು. ಇಂದು ನೀವು ಗೌರವವನ್ನು ಕೇಳಿ ಪಡೆದುಕೊಳ್ಳಲಿದ್ದೀರಿ. ನಿಮ್ಮವರು ಇದನ್ನು ಅಪಹಾಸ್ಯ ಮಾಡುವರು. ಪ್ರಯಾಣದಿಂದ ಆಯಾಸವಾಗಲಿದೆ. ಮಕ್ಕಳಿಲ್ಲದೇ ಬೇಸರ ಕಾಡಬಹುದು. ಏಕಾಂಗಿಯಾಗಿ ಎದುರಿಸುವುದು ಕಷ್ಟವಾಗುವುದು.

ಕನ್ಯಾ ರಾಶಿ: ಹಿರಿಯರ ಮಾತಿನ ಮರ್ಮವನ್ನು ತಿಳಿಯಲಾಗದು. ಇಂದು ನಿಮ್ಮ ಕಾರ್ಯಕ್ಷೇತ್ರವನ್ನು ಉತ್ತಮ ಮಾಡಿಕೊಳ್ಳುವುದು ಹೊಣೆಗಾರಿಕೆ ಆಗುವುದು. ನಿಮ್ಮ ಯೋಗ್ಯತೆಗೆ ಉನ್ನತಸ್ಥಾನದ ಪ್ರಸ್ತಾಪವೂ ಆಗಬಹುದು. ನಿಮ್ಮ ಜೀವನದಲ್ಲಿ ಪ್ರಮುಖರು ಯಾರೆಂಬ ಸರಿಯಾದ ಚಿತ್ರಣವು ನಿಮಗೆ ಸಿಗಲಿದೆ. ಇಂದು ನಿಮ್ಮ ಲೆಕ್ಕಾಚಾರಗಳು ಬುಡಮೇಲಾದೀತು. ಪ್ರಯಾಣ ಮಾಡುವ ಸಂದರ್ಭ ಬರಬಹುದು. ದೂರದ ಯಾತ್ರೆಯು ಕಾರಣಾಂತರಗಳಿಂದ ಮುಂದೆಹೋಗುವುದು. ಜನ್ಮಾಂತರದ ಪುಣ್ಯವು ನಿಮ್ಮನ್ನು ಕಾಪಾಡಲಿದೆ. ಬಂಗಾರದ ಖರೀದಿಯನ್ನು ಮಾಡಲಿದ್ದೀರಿ. ದಾಂಪತ್ಯದಲ್ಲಿ ಮೌನವೇ ಹೆಚ್ಚಿರುವುದು. ಹಣ ಉಳಿತಾಯದ ಬಗ್ಗೆ ಸಂಗಾತಿಯು ಗಮನಸುವರು. ತಲೆನೋವು ಕಾಡೀತು ಇಂದು. ವಿದ್ಯಾರ್ಥಿಗಳು ಒಂದು ಹಂತದ ಓದನ್ನು ಮುಗಿಸಿ ಉದ್ಯೋಗಕ್ಕೆ ತೆರಳುವ ಆಲೋಚನೆ ಮಾಡುವರು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿಂದಿಸಬಹುದು. ಮನಸ್ಸಿನಲ್ಲಿ ಸಾವಧಾನತೆ ಇರದು.

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು