ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ
ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ – 06 : 08 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:51 – 17:28, ಯಮಘಂಡ ಕಾಲ 09:23 – 10:59, ಗುಳಿಕ […]

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ – 06 : 08 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:51 – 17:28, ಯಮಘಂಡ ಕಾಲ 09:23 – 10:59, ಗುಳಿಕ ಕಾಲ 12:37 -14:14
ತುಲಾ ರಾಶಿ: ನಿಮ್ಮ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯವನ್ನು ಸಾಧಿಸುವಿರಿ. ಇಂದು ನಿಮ್ಮ ಮನಸ್ಸನ್ನು ಒಂದೇ ಕಾರ್ಯದಲ್ಲಿ ನಿಲ್ಲಿಸಲಾಗದು. ನೀವೇ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಯಶಸ್ಸನ್ನು ಕೊಡಲಿದೆ. ಶ್ರಮದ ಅವಶ್ಯಕತೆ ಬಹಳ ಇರಲಿದೆ. ಸ್ನೇಹವು ಬಲಗೊಳ್ಳಬಹುದು. ಕಛೇರಿಯಲ್ಲಿ ಇಂದು ಅಸಮಾಧನಕಾರ ವಾತಾವರಣ ಇರಲಿದೆ. ಕಛೇರಿಯ ಆರಂಭದಲ್ಲಿ ಮೇಲಧಿಕಾರಿಗಳಿಂದ ಬೈಗುಳ ಕೇಳಿಬರುವುದು. ನಿಮ್ಮ ವಿರುದ್ಧ ಯಾರೋ ಏನ್ನೋ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾಡಲಿದೆ. ಸಂಗಾತಿಯ ಗಂಭೀರ ಸಮಸ್ಯೆಗೆ ಸ್ಪಂದಿಸಿ. ಕೆಲಸವು ಎಷ್ಟೇ ಚೆನ್ನಾಗಿದ್ದರೂ ಪ್ರಶಂಸೆ ಸಿಗುತ್ತಿಲ್ಲ ಎಂಬ ನೋವು ಹೆಚ್ಚಾಗಬಹುದು. ಕೆಲಸದಲ್ಲಿ ವೈರಾಗ್ಯವೂ ಬರುವ ಸಾಧ್ಯತೆ ಇದೆ. ನಕಾರಾತ್ಮಕತೆಯ ಬಗ್ಗೆ ಚಿಂತಿಸಿ, ಆದರೆ ಅದರದ್ದೇ ಆಲೋಚನೆಯಲ್ಲಿ ನೀವು ಮುಳುಗಬೇಡಿ. ಅನಿವಾರ್ಯವಾಗಿ ಬಂದ ಕೆಲಸವನ್ನು ಮಾಡಬೇಕಾಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಮಾನಸಿಕತೆ ನಿಮ್ಮನ್ನು ಖುಷಿಯಿಂದ ಇಡಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಇನ್ನೊಬ್ಬರ ನೋವಿಗೆ ಸ್ಪಂದನೆ ಇರಲಿ.
ವೃಶ್ಚಿಕ ರಾಶಿ: ದೊಡ್ಡ ನಗರಗಳಲ್ಲಿ ಒಂಟಿಯಾಗಿ ಸಂಚಾರ ಮಾಡುವಿರಿ. ನಿಮ್ಮ ಬಳಿ ಇರುವ ಸಂಪತ್ತಿನಲ್ಲಿ ಅಲ್ಪವನ್ನಾದರೂ ಸಹಾಯಕ್ಕಾಗಿ ನೀಡಿ. ಮುಂದೆ ಅದೇ ಮರಳಿ ಬರಬಹುದು. ಬಹಳ ದಿನದ ಕಾರ್ಯಗಳನ್ನು ಬೇಗನೆ ಮುಗಿಸಲಿದ್ದೀರಿ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ಕಾಲು ನೋವಿನಿಂದ ನರಕದ ಅನುಭವವಾಗಬಹುದು. ನಿಮ್ಮ ನಾಯಕತ್ವವು ಎಲ್ಲರಿಗೂ ಅರಿವಿಗೆ ಬರುವುದು. ಅಧಿಕಾರವು ಸಿಕ್ಕ ಮಾತ್ರಕ್ಕೆ ಹೇಗಾದರೂ ಚಲಾಯಿಸಬೇಕೆಂದಿಲ್ಲ. ನೈತಿಕವಾಗಿ ಮಾತು ಇರಲಿ. ಹಣಕಾಸಿನ ವಿಚಾರದಲ್ಲಿ ಇರುವ ಗೊಂದಲವನ್ನು ಆರ್ಥಿಕ ತಜ್ಞರ ಬಳಿ ಬಗೆಹರಿಸಿಕೊಳ್ಳಬಹದು. ಯಾರ ಬಗ್ಗೆಯೂ ತೀರ್ಮಾನ ಕೊಡುವ ಬದಲು ಪೂರ್ವಾಪರ ವಿಚಾರಗಳನ್ನು ಗಮನಸಿಕೊಳ್ಳಿ. ಪ್ರತ್ಯಕ್ಷವಾಗಿ ಕಂಡಿದ್ದೂ ಸುಳ್ಳಾಗುವುದು. ನಿಮ್ಮ ಮೂಗಿನ ನೇರದ್ದು ಮಾತ್ರ ಸತ್ಯವಾಗಿ ಇರದು. ಜನರನ್ನು ಅವರ ಯೋಗ್ಯತೆಯ ಆಧಾರದ ಮೇಲೆ ಕೆಲಸಕ್ಕೆ ಜೋಡಿಸಿ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ ಮೇಲೆ ಪ್ರಭಾವವನ್ನು ಬೀರಲಿದೆ.
ಧನು ರಾಶಿ: ಮುಂಗಡ ಹಣವನ್ನು ಮರಳಿ ಹಿಂದಿರುಗಿಸುವಿರಿ. ಇಂದು ನೀವು ಸರ್ಕಾರದ ಕಡೆಯಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಕೊಡಬೇಕಾಗಿಬರಬಹುದು. ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ವಾಹನ ರಿಪೇರಿಯಿಂದ ಖರ್ಚಾಗಲಿದೆ. ಕುಟುಂಬದಲ್ಲಿ ತಾನೇ ಶ್ರೇಷ್ಠ ಎಂಬ ಭಾವ ಬೇಡ. ಸ್ಥಳ ಖರೀದಿಗೆ ಕೂಡಿಟ್ಟ ಹಣವು ಮತ್ತೆಲ್ಲಿಗೋ ವಿಯೋಗವಾಗುವುದು. ಸಮಯವು ಒಂದೇ ರೀತಿಯಲ್ಲಿ ಇರದು. ಅಕಸ್ಮಾತ್ ಆಗಿ ಸಿಕ್ಕ ಜವಾಬ್ದಾರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಇರುವ ಸಮಸ್ಯೆಯನ್ನು ಎದುರಿಸಲು ಹೋಗಿ ಮತ್ತೊಂದು ಸಮಸ್ಯೆಯನ್ನು ಹುಟ್ಟುಹಾಕಿಕೊಳ್ಳಬೇಡಿ. ಸ್ವಾಭಾವಿಕ ಮಾತೂ ತಿರುಗುಬಾಣವಾಗಲಿದೆ. ಅವರ ಮೇಲೆ ಬುದ್ಧಿವಂತಿಕೆ ಸವಾರಿ ಮಾಡಬೇಡಿ. ಅವರ ಬೇಸರವೇ ನಿಮಗೆ ದುಃಖವನ್ನು ತಂದುಕೊಟ್ಟೀತು. ಯಾರನ್ನೂ ನಂಬದವರು ಇಂದು ನಂಬಿ ಮೋಸ ಹೋಗಬಹುದು. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು. ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾದ್ಯತೆ ಇದೆ.
ಮಕರ ರಾಶಿ: ಹೊಸ ಸ್ನೇಹಿತರ ಆಗಮನದಿಂದ ಹಳಬರನ್ನು ನಿರ್ಲಕ್ಷ್ಯ ಮಾಡುವ ಸಂಭವವಿದೆ. ಇಂದು ಸಹೋದರರ ಜೊತೆ ಪ್ರೀತಿಯಿಂದ ಇರುವಿರಿ. ಬದಲಾಗಬೇಕು ಎನ್ನುವ ಹಂಬಲವು ನಿಮ್ಮಲ್ಲಿ ಅತಿಯಾಗಿರಬಹುದು. ಸರಿಯಾದ ಬದಲಾವಣೆಯನ್ನು ಹೊಂದಿರಿ. ಯಾರನ್ನೂ ಸಾಧರಣ ಮನುಷ್ಯ ತಿಳಿದುಕೊಳ್ಳಬೇಡಿ. ಅವರ ಯೋಗ್ಯತೆಯನ್ನು ಅವರ ಬಟ್ಟೆಯಿಂದ, ಮಾತಿನಿಂದ ಅಳೆಯಲು ನೀವಿಂದು ಅಶಕ್ಯರು. ಒತ್ತಡಗಳು ನಿಮ್ಮ ಆರೋಗ್ಯವನ್ನು ಇನ್ನೂ ದುರ್ಬಲ ಸ್ಥಿತಿಗೆ ಒಯ್ಯುವುದು. ಒಂದೊಂದೇ ಖರ್ಚನ್ನು ನೀವು ನಿಭಾಯಿಸುವಾಗ ಅದೊಂದು ದೊಡ್ಡ ಮೊತ್ತವಾಗಿ ಕಾಣಬಹುದು. ನಿಮ್ಮಷ್ಟಕ್ಕೇ ನೀವು ಹೊಸತನವನ್ನು ಸೃಷ್ಟಿಸಿಕೊಂಡು ಅಪಮಾನಕ್ಕೆ ಒಳಗಾಗುವಿರಿ. ಸ್ವಾವಲಂಬಿಯಾಗಲು ಶ್ರಮಿಸಿಸುವಿರಿ. ಮೇಲೆಧಿಕಾರಿಗಳ ದಯಾಪಾಶವು ನಿಮ್ಮನ್ನು ವೃತ್ತಿಯಲ್ಲಿ ಉಳಿಸಬಹುದು. ಸಂಕಷ್ಟ ಬಂದಾದ ಎಲ್ಲದಕ್ಕೂ ಏನೋ ಒಂದು ಕಾರಣವಿರಬಹುದು ಎಂದು ಸಮಾಧಾನವನ್ನು ತಂದುಕೊಳ್ಳುವಿರಿ. ಗೃಹನಿರ್ಮಾಣದ ಪ್ರಸ್ತಾಪವು ಇರಲಿದೆ.
ಕುಂಭ ರಾಶಿ: ಮಾನಸಿಕ ಖಿನ್ನತೆಯಿಂದ ಮಾರ್ಗಗಳು ಕಾಣಿಸದೇ ಇರಬಹುದು. ನಿಮ್ಮ ಯಶಸ್ಸು ಕಂಡು ನಿಮ್ಮವರೇ ಸಂಕಟ ಪಡುತ್ತಾರೆ. ಅವರನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಿ. ಹತ್ತಿರದ ಊರಿಗೆ ಪ್ರಯಾಣವನ್ನು ಮಾಡಲಿದ್ದೀರಿ. ಹಳೆಯ ವಿಚಾರಗಳನ್ನು ಪತಿಯಿಂದ ಕೇಳುವ ಸಂದರ್ಭ ಬರಬಹುದು. ಸಾಮಾಜಿಕವಾದ ಕೆಲಸವನ್ನು ಮಾಡುವವರಿಗೆ ತಾಳ್ಮೆ ಮುಖ್ಯವಾಗಿ ಬೇಕಾಗಿದೆ. ಆರ್ಥಿಕ ವಿಚಾರದಲ್ಲಿ ಹೊಂದಾಣಿಕೆ ಇದ್ದರೆ ಅದು ಕೆಲವು ಕಾಲದ ವರೆಗೆ ಮಾತ್ರ. ಸ್ವಭಾವವನ್ನು ತಿದ್ದಿಕೊಳ್ಳಲು ಇಷ್ಟಪಟ್ಟರೂ ನಿಮ್ಮ ಜೊತೆಗಿರುವವರು ಅದನ್ನು ಬಿಡಲಾರರು. ನಿಮ್ಮನ್ನು ಛೇಡಿಸುತ್ತ ಹಾಸ್ಯ ಮಾಡುವರು. ಸಾಲವನ್ನು ಮಾಡಬೇಕಾಗಿ ಬಂದರೆ ಬಹಳ ಎಚ್ಚರಿಕೆಯಿಂದ ಜನರನ್ನು ನೋಡಿ ಮಾಡಿ. ನಿರುತ್ಸಾಹಕ್ಕೆ ಮದ್ದು ಅವಶ್ಯಕ. ಯಾವುದಾದರೂ ಘಟನೆಯು ನಿಮ್ಮನ್ನು ಇಂದು ಹೆಚ್ಚು ಕಾಡಬಹುದು. ಯಾರನ್ನೂ ನಿರ್ಲಕ್ಷ್ಯದಿಂದ ನೋಡುವುದು ಬೇಡ. ಕ್ರೀಡಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು.
ಮೀನ ರಾಶಿ: ದುಡಿಮೆಯಿಂದ ಗಳಿಸಿದ ಹಣ ಸ್ಥಿರವಾಗಿ ಉಳಿಯುವುದು. ಉಳಿದವರಿಗೆ ಆತಂಕವಿರಲಿದೆ. ಇಂದು ನಿಮ್ಮನ್ನು ಭೇಟಿಯಾಗಲು ಬಂದವರನ್ನು ಅಗೌರವದಿಂದ ಕಾಣುವುದು ಬೇಡ. ನಿಮ್ಮ ಹತ್ತಾರು ಕನಸುಗಳಲ್ಲಿ ಒಂದನ್ನು ನನಸು ಮಾಡಿಕೊಳ್ಳುವಿರಿ. ಬಂಧುಗಳ ವಿಯೋಗವಾರ್ತೆಯು ಬರಬಹುದು. ನೀವಂದು ಅಶಕ್ತರಿಗೆ ಸಹಾಯ ಮಾಡುವಿರಿ. ಅತಿಯಾದ ಹಠಮಾರಿತನವನ್ನು ಉಳಿಸಿಕೊಳ್ಳುವುದು ಬೇಡ. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು. ಒಲಿಸಿಕೊಳ್ಳಲು ಸ್ತ್ರೀಯರು ನಿಮ್ಮನ್ನು ಪ್ರಶಂಸಿಸಿಯಾರು. ಆಪ್ತರು ನೀಡುವ ಉಡುಗೊರೆಯಿಂದ ಸಂತೃಪ್ತಿ ಇರುವುದು. ನಿಮ್ಮ ಕೈಲಾದ ಸಹಾಯವನ್ನು ಮಾಡಿ. ಸಾಧ್ಯವಾದರೆ ನಿತ್ಯವೂ ಅನ್ನದಾನ ನಡೆಯುವ ಸ್ಥಳಕ್ಕೆ ಹೋಗಿ ಸುವಸ್ತುವನ್ನು ಕೊಡಿ. ಸುಳ್ಳಾಡುವವರ ಬಗ್ಗೆ ಅತಿಯಾದ ಕೋಪವಿರಲಿದೆ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು. ಒತ್ತಡದಿಂದ ಹೊರಬರುವ ಪ್ರಯತ್ನಮಾಡುವಿರಿ. ಇಂದು ಅಪರಿಚಿತ ಸ್ಥಳವು ಆಪ್ತವೂ ಆಗಲಿದೆ.




