ಕೊವಿಶೀಲ್ಡ್​ ಲಸಿಕೆ 2 ಡೋಸ್ ಪಡೆದಿದ್ದರೂ ಮತ್ತೆ ಕೊವ್ಯಾಕ್ಸಿನ್​ ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ; ನೋಂದಣಿಗೆ ಹೊಸ ಫೋನ್​ ನಂಬರ್​ ಬಳಕೆ

ಈ ಬಗ್ಗೆ ತಮಗೂ ಮಾಹಿತಿ ಇರುವುದಾಗಿ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎಂ.ಕೆ.ಸುದರ್ಶನ್​ ತಿಳಿಸಿದ್ದಾರೆ. ಉಲ್ಬಣ ಆಗುತ್ತಿರುವ ಕೊರೊನಾ ಸೋಂಕು ಸಹಜವಾಗಿಯೇ ಆರೋಗ್ಯ ಕ್ಷೇತ್ರದ ಸಿಬ್ಬಂದಿಯಲ್ಲಿ ಭಯ ಹುಟ್ಟಿಸಿದೆ ಎಂದಿದ್ದಾರೆ.

ಕೊವಿಶೀಲ್ಡ್​ ಲಸಿಕೆ 2 ಡೋಸ್ ಪಡೆದಿದ್ದರೂ ಮತ್ತೆ ಕೊವ್ಯಾಕ್ಸಿನ್​ ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ; ನೋಂದಣಿಗೆ ಹೊಸ ಫೋನ್​ ನಂಬರ್​ ಬಳಕೆ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:May 27, 2021 | 8:47 PM

ಬೆಂಗಳೂರು: ದೇಶಾದ್ಯಂತ ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್ 19 ಲಸಿಕೆ ವಿತರಣೆಯ ಮೊದಲ ಹಂತದಲ್ಲಿಯೇ ಎರಡೂ ಡೋಸ್​ ಲಸಿಕೆ ನೀಡಲಾಗಿದೆ. ಹಾಗೆ ಈ ಹಂತದಲ್ಲಿ ಕೊವಿಶೀಲ್ಡ್​ ಲಸಿಕೆಯ ಎರಡೂ ಡೋಸ್ ಪಡೆದಿರುವ ಬೆಂಗಳೂರಿನ ಅನೇಕ ಆರೋಗ್ಯ ಕಾರ್ಯಕರ್ತರು ಇದೀಗ ಮತ್ತೆ ಕೊವ್ಯಾಕ್ಸಿನ್ ಲಸಿಕೆ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗೆ ಮೂರನೇ ಡೋಸ್​ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವ ಸಲುವಾಗಿ ಹೊಸ ಫೋನ್​ ನಂಬರ್​, ಫೋಟೋ ಐಡಿಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ.

ಆರೋಗ್ಯ ಕಾರ್ಯಕರ್ತರ ಈ ಕ್ರಮವನ್ನು ಕೆಲವು ವೈದ್ಯರು ಸಮರ್ಥಿಸಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್​ ಇಂಡಿಯಾ ವರದಿ ಮಾಡಿದೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿ ಸದಾ ಕೊವಿಡ್​ 19 ಸೋಂಕಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಿದ್ದಾರೆ. ನಿರಂತರವಾಗಿ ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಕೊಂಡಿದ್ದಾರೆ. ಲಸಿಕೆ ವಿತರಣೆ ಶುರುವಾದಾಗ ಆರೋಗ್ಯ ಕಾರ್ಯಕರ್ತರಿಗೆ ಆಯ್ಕೆಗೆ ಅವಕಾಶ ಇರಲಿಲ್ಲ. ಆದರೆ ಈಗ ಅವರಿಗೆ ಸರಿಯಾಗಿ ಅರಿವು ಮೂಡಿದೆ. ಅಷ್ಟಕ್ಕೂ ಆರೋಗ್ಯ ಕಾರ್ಯಕರ್ತರು ಇನ್ನೊಂದು ಡೋಸ್ ಲಸಿಕೆ ಪಡೆದರೆ ತಪ್ಪೇನು? ಎಂದೂ ಕೆಲವು ವೈದ್ಯರು ಪ್ರಶ್ನಿಸಿದ್ದಾರೆ.

ಜನವರಿಯಲ್ಲಿ ಲಸಿಕೆ ಅಭಿಯಾನ ಶುರುವಾದಾಗ ಕರ್ನಾಟಕದ ಕೇವಲ ಆರು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು. ಉಳಿದಂತೆ ಎಲ್ಲ ಆಸ್ಪತ್ರೆಗಳಲ್ಲೂ ಕೊವಿಶೀಲ್ಡ್​ ಲಸಿಕೆಯನ್ನೇ ನೀಡಲಾಗಿದೆ. ಕೆಲವು ವೈದ್ಯರು ಎರಡೂ ಡೋಸ್ ಕೊವಿಶೀಲ್ಡ್ ಲಸಿಕೆ ಪಡೆದಾಗ್ಯೂ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವು ಆರೋಗ್ಯ ಕಾರ್ಯಕರ್ತರು ಕೊವಿಶೀಲ್ಡ್​ ಲಸಿಕೆ ಪಡೆದ 28 ದಿನಗಳ ನಂತರ ಆ್ಯಂಟಿಬಾಡಿ ತಪಾಸಣೆ ಮಾಡಿಸಿದ್ದಾರೆ. ಅದರಲ್ಲಿ ಅನೇಕರಿಗೆ ನೆಗೆಟಿವ್​ ವರದಿ ಬಂದಿದೆ. ಅಂಥವರೆಲ್ಲ ಈಗ ಕೊವ್ಯಾಕ್ಸಿನ್​ ಲಸಿಕೆ ಪಡೆಯಲು ಮುಂದಾಗಿದ್ದಾರೆ ಎಂದೂ ವೈದ್ಯರು ಮಾಹಿತಿ ನೀಡಿದ್ದಾರೆ.

ಇನ್ನು ಈ ಬಗ್ಗೆ ತಮಗೂ ಮಾಹಿತಿ ಇರುವುದಾಗಿ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎಂ.ಕೆ.ಸುದರ್ಶನ್​ ತಿಳಿಸಿದ್ದಾರೆ. ಉಲ್ಬಣ ಆಗುತ್ತಿರುವ ಕೊರೊನಾ ಸೋಂಕು ಸಹಜವಾಗಿಯೇ ಆರೋಗ್ಯ ಕ್ಷೇತ್ರದ ಸಿಬ್ಬಂದಿಯಲ್ಲಿ ಭಯ ಹುಟ್ಟಿಸಿದೆ. ಹಾಗಾಗಿಯೇ ಹೆಚ್ಚಿನ ಜನರು ಇದೀಗ ಇನ್ನೊಂದು ಡೋಸ್ ಲಸಿಕೆ ಪಡೆಯಲು ಮುಂದಾಗಿದ್ದಾರೆ ಎಂದೂ ಹೇಳಿದ್ದಾರೆ.

ಕೊವ್ಯಾಕ್ಸಿನ್​ ಲಸಿಕೆ ಸಂಪೂರ್ಣ ನಿಷ್ಕ್ರಿಯ ವೈರಸ್​ನ್ನು ಆಧರಿಸಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ ಎಂದು ನಂಬಲಾಗಿದೆ. ಆದರೆ ಇದೀಗ ಲಸಿಕೆ ಅಭಾವದ ಮಧ್ಯೆ, ಆರೋಗ್ಯ ಸಿಬ್ಬಂದಿ ಮತ್ತೊಮ್ಮೆ ಲಸಿಕೆ ಪಡೆದು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗಿದ್ದರಿಂದ ಸಹಜವಾಗಿಯೇ ಅಗತ್ಯವಿರುವವರಿಗೆ ತೊಂದರೆಯಾಗಿದೆ ಎಂದೂ ಡಾ. ಸುದರ್ಶನ್​ ತಿಳಿಸಿದ್ದಾರೆ. ಆದರೆ ಹೀಗೆ ಕೊವಿಶೀಲ್ಡ್ ಎರಡೂ ಡೋಸ್ ಪಡೆದು ಮತ್ತೆ ಕೊವ್ಯಾಕ್ಸಿನ್ ಪಡೆಯಲು ಹೊರಟಿರುವುದು ಅನಾರೋಗ್ಯಕರ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಅರ್ಧ ಡೋಸ್​ ಕೊರೊನಾ ಲಸಿಕೆ ಕೊಟ್ಟು ಯಾಮಾರಿಸ್ತಾರೆ! ಬೆಂಗಳೂರಲ್ಲಿ ಪೊಲೀಸರಿಗೇ ಮೋಸ ಮಾಡಿದ ಆರೋಗ್ಯ ಕೇಂದ್ರದ ಸಿಬ್ಬಂದಿ

(Health Workers who got 2 dose covishield vaccine are now taking covaxin in Karnataka)

Published On - 8:44 pm, Thu, 27 May 21

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ