ACE Pro: ಭವಿಷ್ಯಕ್ಕೆ ಹಣಕಾಸು ಬಲ ನೀಡುತ್ತೆ ಟಾಟಾ ಏಸ್ ಪ್ರೋ: ಟಿ ರಾಘವೇಂದ್ರಪ್ರಭು
T Raghavendra Prabhu at Tata ACE Pro release event in Bengaluru: ಟಾಟಾ ಮೋಟಾರ್ಸ್ ತಯಾರಿಸಿರುವ ಮತ್ತು 3.99 ಲಕ್ಷ ರೂ ಬೆಲೆಯೊಂದಿಗೆ ಆರಂಭವಾಗುವ ಏಸ್ ಪ್ರೋ ಸರಕು ಸಾಗಣೆ ವಾಹನ ಬೆಂಗಳೂರಿನಲ್ಲಿ ಬಿಡುಗಡೆ ಆಗಿದೆ. ಯುವ ಉದ್ದಿಮೆದಾರರು ಬೆಳೆಯಲು ಈ ವಾಹನ ಅನುವು ಮಾಡಿಕೊಡುತ್ತದೆ ಎಂದು ಟಾಟಾ ಕ್ಯಾಪಿಟಲ್ ಸಂಸ್ಥೆಯ ಟಿ ರಾಘವೇಂದ್ರ ಪ್ರಭು ಹೇಳಿದ್ದಾರೆ.
ಬೆಂಗಳೂರು, ಜುಲೈ 2: ಟಾಟಾ ಏಸ್ ಪ್ರೋ ವಾಹನದಿಂದ (Tata ACE Pro) ದೇಶದಲ್ಲಿ ತಳಮಟ್ಟದಲ್ಲಿ ಉದ್ದಿಮೆದಾರರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಟಾಟಾ ಕ್ಯಾಪಿಟಲ್ ಸಂಸ್ಥೆಯ ಮೋಟಾರ್ ಫೈನಾನ್ಸ್ ವಿಭಾಗದ ಝೋನಲ್ ಬ್ಯುಸಿನೆಸ್ ಮುಖ್ಯಸ್ಥ ಟಿ ರಾಘವೇಂದ್ರ ಪ್ರಭು (T Raghavendra Prabhu) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಟಾಟಾ ಏಸ್ ಪ್ರೋ ವಾಹನ ಬಿಡುಗಡೆ ಕಾರ್ಯಕ್ರಮದ ವೇಳೆ ಮಾತನಾಡಿದ ರಾಘವೇಂದ್ರ ಪ್ರಭು, ವಾಹನದ ಅಗ್ಗದ ದರ, ಸುಲಭ ಸಾಲ ಮತ್ತು ಇಎಂಐ ವ್ಯವಸ್ಥೆ ಇವು ಮೊದಲ ಬಾರಿ ವಾಹನ ಖರೀದಿಸುತ್ತಿರುವವರೂ ಮುನ್ನುಗ್ಗುವಂತೆ ಮಾಡಬಲ್ಲುವು ಎಂದು ಅವರು ಹೇಳಿದ್ದಾರೆ. ಶ್ರಮ ಪಡುವ ಪ್ರತಿಯೊಬ್ಬ ವ್ಯಕ್ತಿಯೂ ಹೆಮ್ಮೆಯ ವಾಹನ ಮಾಲೀಕ ಮತ್ತು ಬ್ಯುಸಿನೆಸ್ ಚಾಲಕನಾಗಲು ಏಸ್ ಪ್ರೋ ಸಹಾಯವಾಗುತ್ತದೆ ಎಂದು ರಾಘವೇಂದ್ರ ಪ್ರಭು ಬಣ್ಣಿಸಿದ್ದಾರೆ.
ಟಾಟಾ ಮೋಟಾರ್ಸ್ನ ಅಬ್ ಮೇರಿ ಬಾರಿ ಅಭಿಯಾನದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡಾ. ರಾಜ್ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ

ಡಿವೈಡರ್ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ

ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್

‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
