ಚಿಲ್ಲರೆ ವಾಪಸ್ಸು ಕೋಡೋದಿಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಬಸ್ ಕಂಡಕ್ಟರ್ ಮತ್ತು ಪ್ರಯಾಣಿಕನ ನಡುವೆ ಜಗಳ
ಸಾಮಾನ್ಯವಾಗಿ ಕಂಡಕ್ಟರ್ಗಳು ಚಿಲ್ಲರೆ ಇಲ್ಲದಿದ್ದರೆ ಟಿಕೆಟ್ ಹಿಂದೆ ಬರೆದುಕೊಡುತ್ತಾರೆ. ಆದರೆ ಈ ಕಂಡಕ್ಟರ್ ಬರೆದಿಲ್ಲ. ಆದು ಉದ್ದೇಶಪೂರ್ವಕವೋ ಅಥವಾ ಬರೆಯುವುದನ್ನು ಮರೆತರೋ ಅಂತ ಗೊತ್ತಿಲ್ಲ. ಇಳಿಯುವಾಗ ಇಸ್ಕೊಂಡರಾಯಿತು ಅಂತ ಪ್ರಯಾಣಿಕ ಕೂಡ ಸುಮ್ಮನಾಗಿದ್ದಾರೆ. ಅವರು ಅಗಲೇ ಚಿಲ್ಲರೆ ಬರೆದಿಲ್ಲದಿರುವುದನ್ನು ಪ್ರಶ್ನಿಸಿದ್ದರೆ ಈ ರಗಳೆಯೇ ಇರುತ್ತಿರಲಿಲ್ಲ.
ಬೆಂಗಳೂರು, ಜುಲೈ 2: ನೀವು ಬೆಂಗಳೂರಿನ ನಿವಾಸಿಯಾಗಿದ್ದು ನಿಯಮಿತವಾಗಿ ಬಿಎಂಟಿಸಿ ಬಸ್ಗಳಲ್ಲಿ ಓಡಾಡುತ್ತಿದ್ದರೆ ಇಂಥ ದೃಶ್ಯಗಳನ್ನು ಆಗಾಗ ನೋಡುತ್ತಿರುತ್ತೀರಿ. ಪ್ರಯಾಣಿಕರೊಬ್ಬರು (commuter) ಈ ನಗರ ಸಾರಿಗೆ ಬಸ್ಸನ್ನು ಹತ್ತಿ ನೂರು ರೂ. ಕೊಟ್ಟು ಡೇ ಪಾಸ್ ತೆಗೆದುಕೊಂಡಿದ್ದಾರೆ. ಕಂಡಕ್ಟರ್ ₹20 ಚಿಲ್ಲರೆ ವಾಪಸ್ಸು ಕೊಟ್ಟಿಲ್ಲ, ಅಮೇಲೆ ಕೊಡುತ್ತಾರೆ ಅಂತ ಪ್ರಯಾಣಿಕನೂ ಸುಮ್ಮನಾಗಿದ್ದಾರೆ. ಅದರೆ ಇವರು ಇಳಿಯುವ ಸ್ಟಾಪ್ ಬಂದಾಗ ಕಂಡಕ್ಟರ್ ಮಾರ್ಕೆಟ್ ಗೆ ಬಾ, ಕೊಡ್ತೀನಿ ಅಂದಿದ್ದಾರೆ. ಇದು ಕೆಆರ್ ಮಾರ್ಕೆಟ್ ಹೋಗುವ ಬಸ್ಸು. ನಾನ್ಯಾಕೆ ಮಾರ್ಕೆಟ್ ಬರಲಿ, ಚಿಲ್ಲರೆ ಇಲ್ಲ ಮೊದಲೇ ಹೇಳಬೇಕಿತ್ತು ಅಂತ ಪ್ರಯಾಣಿಕ ರೇಗಲಾರಂಭಿಸಿದ್ದಾರೆ. ಮುಂದೆ ನಡೆದಿದ್ದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: ಬಿಎಂಟಿಸಿ ಬಸ್ ಚಾಲಕನ ನಿರ್ಲಕ್ಷ್ಯ: ಸ್ವಲ್ಪ ಯಾಮಾರಿದ್ರೂ ಹೋಗ್ತಿತ್ತು ಮೂವರ ಪ್ರಾಣ, ಮಹಿಳೆಯಿಂದ ಹಲ್ಲೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ