Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಂಟಿಸಿ ಬಸ್​​ ಚಾಲಕನ ನಿರ್ಲಕ್ಷ್ಯ: ಸ್ವಲ್ಪ ಯಾಮಾರಿದ್ರೂ ಹೋಗ್ತಿತ್ತು ಮೂವರ ಪ್ರಾಣ, ಮಹಿಳೆಯಿಂದ ಹಲ್ಲೆ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು, ಸ್ವಲ್ಪದರಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ಮಹಿಳೆ ಚಾಲಕನ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಘಟನೆಯಿಂದಾಗಿ ಇಬ್ಬರ ಮೇಲೂ ದೂರು ದಾಖಲಾಗಿದೆ. ಬಿಎಂಟಿಸಿ ಚಾಲಕರ ಜವಾಬ್ದಾರಿಯ ಕುರಿತು ಪ್ರಶ್ನೆಗಳು ಎದ್ದಿವೆ.

ಬಿಎಂಟಿಸಿ ಬಸ್​​ ಚಾಲಕನ ನಿರ್ಲಕ್ಷ್ಯ: ಸ್ವಲ್ಪ ಯಾಮಾರಿದ್ರೂ ಹೋಗ್ತಿತ್ತು ಮೂವರ ಪ್ರಾಣ, ಮಹಿಳೆಯಿಂದ ಹಲ್ಲೆ
ಬಿಎಂಟಿಸಿ ಚಾಲಕನ ನಿರ್ಲಕ್ಷ್ಯ: ಸ್ವಲ್ಪ ಯಾಮಾರಿದ್ರೂ ಹೋಗ್ತಿತ್ತು ಮೂವರ ಪ್ರಾಣ!
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on:Dec 14, 2024 | 9:17 PM

ಬೆಂಗಳೂರು, ಡಿಸೆಂಬರ್​ 14: ಓರ್ವ ಮಹಿಳೆ ಆಕೆಯ ಇಬ್ಬರೂ ಮಕ್ಕಳನ್ನು ಸ್ಕೂಟರ್​ನಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದರಂತೆ. ಈ ವೇಳೆ ಬೇಕು ಬೇಕು ಅಂತ ಬಿಎಂಟಿಸಿ (BMTC) ತರ್ಲೆ ಚಾಲಕ ಹಾರ್ನ್ ಮಾಡಿದ್ದಾನೆ. ಅವರು ತಿರುಗಿ ನೋಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಸ್ಕೂಟರ್​ಗೆ ಡಿಕ್ಕಿ ಹೊಡೆದಿದ್ದಾನೆ. ಚಾಲಕನ ನಿರ್ಲಕ್ಷ್ಯದಿಂದು ಸ್ವಲ್ಪ ಯಾಮಾರಿದರೂ ಇಂದು ಮೂವರು ಪ್ರಾಣ ಕಳೆದುಕೊಳ್ಳಬೇಕಾಗಿತ್ತು.

ಡಿಸೆಂಬರ್ ತಿಂಗಳಲ್ಲಿ ನಡೆದ ಮೊದಲ ಹಲ್ಲೆ

ಇತ್ತೀಚೆಗೆ ಬಿಎಂಟಿಸಿಯ ಕಂಡಕ್ಟರ್, ಡ್ರೈವರ್​ಗಳ ಮೇಲೆ ಹಲ್ಲೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾಲ್ಕು ತಿಂಗಳಲ್ಲಿ ಇದು ಹತ್ತನೇ ಬಾರಿ ನಡೆದಿರುವ ಹಲ್ಲೆ ಪ್ರಕರಣವಾಗಿದ್ದರೆ, ನವೆಂಬರ್ ತಿಂಗಳಲ್ಲೇ ನಾಲ್ಕು ಕಂಡಕ್ಟರ್, ಡ್ರೈವರ್​ಗಳ ಮೇಲೆ ಹಲ್ಲೆಯಾಗಿತ್ತು. ಡಿಸೆಂಬರ್ ತಿಂಗಳಲ್ಲಿ ನಡೆದ ಇದು ಮೊದಲ ಹಲ್ಲೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್​ಗಿಲ್ಲ ಭದ್ರತೆ; ಕಲ್ಲಿನಿಂದ ತಲೆ ಜಜ್ಜಲು ಯತ್ನಿಸಿದ ಪ್ರಯಾಣಿಕ!

ಇಂದು ಮಧ್ಯಾಹ್ನ 2-20 ರ ಸುಮಾರಿಗೆ ಜಾಲಹಳ್ಳಿ ಟು ಕೆ.ಆರ್ ಮಾರ್ಕೆಟ್ ಗೆ ಹೋಗ್ತಿದ್ದ ಡಿಪೋ- 22 ಕ್ಕೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ – KA-51 AK4215 ಸುಮ್ಮನಹಳ್ಳಿ ಬಳಿ ಸ್ಕೂಟರ್​ನಲ್ಲಿ ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಮಹಿಳೆ ಕೆಳಗೆ ಬಿದ್ದ ಪರಿಣಾಮ ಕೈಗೆ ಗಾಯವಾಗಿದೆ. ಸ್ಕೂಟರ್ ಹಿಂಭಾಗದಲ್ಲಿ ಇಬ್ಬರು ಮಕ್ಕಳು ಇದ್ರಂತೆ. ಇದರಿಂದ ಆಕ್ರೋಶಗೊಂಡ ಮಹಿಳೆ ಬಸ್ ಹತ್ತಿ ಡ್ರೈವರ್ ಅಂಬರೀಶ್ ಮೇಲೆ ಹಲ್ಲೆ ಮಾಡಿದ್ದಾರೆ.

ನನ್ನ ಮತ್ತು ನನ್ನ ಮಕ್ಕಳನ್ನು ಕೊಲೆ ಮಾಡಲು ಹೀಗೆ ಮಾಡಿದ್ದಾನೆ. ಚೂರು ಯಾಮಾರಿದರೂ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ಕೂಗಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ತನ್ನ ಸಹೋದರನನ್ನು ಕರೆಸಿ ಡ್ರೈವರ್​ಗೆ ಥಳಿಸಿದ್ದಾರೆ. ಆ ವೇಳೆ ಡ್ರೈವರ್ ಕುಸಿದು ಬಿದಿದ್ದು, ನಂತರ ಡ್ರೈವರ್​ನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎಫ್ಐಆರ್ ದಾಖಲು

ಇನ್ನೂ ಈ ಘಟನೆಗೆ ಬಿಎಂಟಿಸಿ ಡ್ರೈವರ್ ಅಂಬರೀಶ್ ನಿರ್ಲಕ್ಷ್ಯವೇ ಕಾರಣವಂತೆ. ರೋಡ್​ನಲ್ಲಿ ಸರಿಯಾಗಿ ಹೋಗುತ್ತಿದ್ದ ಮಹಿಳೆಯ ಸ್ಕೂಟರ್​ಗೆ ಬಿಎಂಟಿಸಿ ಡ್ರೈವರ್ ಅಂಬರೀಶ್ ಬೇಕು ಎಂದು ಸಾಕಷ್ಟು ಬಾರಿ ಹಾರ್ನ್​​ ಮಾಡಿದ್ದಾನೆ. ಅವರು ತಿರುಗಿ ನೋಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಸ್ಕೂಟರ್​ಗೆ ಗುದ್ದಿದ್ದಾನಂತೆ.

ಸ್ಕೂಟರ್​ನಲ್ಲಿ ಇಬ್ಬರು ಮಕ್ಕಳು ಇದ್ರಂತೆ ಡ್ರೈವರ್ ನಿರ್ಲಕ್ಷ್ಯದಿಂದ ಚೂರು ಯಾಮಾರಿದರೂ ಇಂದು ಮೂವರು ಅಮಾಯಕರ ಪ್ರಾಣ ಹೋಗುತ್ತಿತ್ತು. ಈ ಘಟನೆ ಬಗ್ಗೆ ಬಿಎಂಟಿಸಿ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಸೋದರನ ಮೇಲೆ ಕಾಮಾಕ್ಷಿಪಾಳ್ಯ ಟ್ರಾಫಿಕ್ ಪೋಲಿಸ್ ಸ್ಟೇಷನ್ ನಲ್ಲಿ ಡ್ರೈವರ್ ದೂರು ನೀಡಿದರೆ, ಇತ್ತ ಮಹಿಳೆಯೂ ಡ್ರೈವರ್ ಮೇಲೆ ದೂರು ನೀಡಿದ್ದಾರೆ.

ಹಲ್ಲೆ‌ ಮಾಡಿದ ಮಹಿಳೆ ಹೇಳಿದ್ದಿಷ್ಟು 

ಹಲ್ಲೆ‌ ಮಾಡಿರುವ ಸವಿತಾ ಹೇಳಿಕೆ ನೀಡಿದ್ದು, ಮಧ್ಯಾಹ್ನ‌ 2.30ಕ್ಕೆ ನಾನು ಮಕ್ಕಳನ್ನ ಕರೆದುಕೊಂಡು ಹೋಗುತ್ತಿದ್ದೆ. ಆವಾಗ ಬಸ್ ಅವರು ಪದೇ ಪದೇ ಹಾರ್ನ್ ಮಾಡುತ್ತಿದ್ದ. ಗ್ಯಾಪ್ ಇದ್ರೂ ಕೂಡ ಬಂದು ಡಿಕ್ಕಿ ಹೊಡೆದಿದಾರೆ. ಆವಾಗ ನನ್ನ ಮಕ್ಕಳಲ್ಲಿ ಒಬ್ಬನಿಗೆ ಮಾತೇ ನಿಂತು ಬಿಡುತ್ತೆ. ಆಗ ನನ್ನ ಮಗನಿಗೆ ಏನಾಯ್ತು ಅಂತಾ ಭಯವಾಯ್ತು. ಅದಕ್ಕೆ ನಾನು ಹೋಗಿ ಹೊಡೆದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ: BMTC ಕಂಡಕ್ಟರ್​ಗೆ ಚಾಕುವಿನಿಂದ ಇರಿದ ಪ್ರಯಾಣಿಕ

ಸುಮನಹಳ್ಳಿ ಬ್ರಿಡ್ಜ್ ಹತ್ರ ತುಂಬಾ ಅಪಘಾತಗಳಾಗಿವೆ. ಹಾಗಾಗಿ ನನಗೆ ತುಂಬಾ ಭಯ ಆಯ್ತು. ಪೊಲೀಸ್​ ಠಾಣೆಗ ಬನ್ನಿ ಅಂತ ಕರೆದರೂ, ಅವರು ಬಸ್​ ಇಳಿದು ಹೋದರು. ಮಕ್ಕಳಿಗೆ ಏನಾದರೂ ಆದರೆ ಏನು ಕಥೆ. ಈ ಮುಂಚೆ ನಮ್ಮ ಪಕ್ಕದ ಮನೆಯವರಿಗೂ ಹೀಗೆ ಬಸ್ ಡಿಕ್ಕಿ ಆಗಿ ಡೆತ್ ಆಗಿದ್ದರು. ಹಾಗಾಗಿ ಭಯ ಬಿದ್ದು ಹೊಡೆದೆ. ಇವಾಗ ಅವರ ಮೇಲೆ ದೂರು ಕೊಡಲು ಬಂದಿದ್ದೇನೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಬಿಎಂಟಿಸಿ ಡ್ರೈವರ್ ನಿರ್ಲಕ್ಷ್ಯದಿಂದ ಇವತ್ತು ಚೂರು ಹೆಚ್ಚು ಕಮ್ಮಿಯಾಗಿದ್ದರೂ ಮೂವರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಇನ್ನಾದ್ರು ಬಿಎಂಟಿಸಿ ಅಧಿಕಾರಿಗಳು ಇಂತಹ ಬೇಜವಾಬ್ದಾರಿ ಡ್ರೈವರ್​ಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:15 pm, Sat, 14 December 24