Nasal Aspergillosis: ಕೊರೊನಾ-ಬ್ಲ್ಯಾಕ್ ಫಂಗಸ್ ಮಧ್ಯೆ ಮತ್ತೊಂದು ಹೊಸ ಫಂಗಸ್ ಜನರನ್ನು ಹೆದರಿಸುತ್ತಿದೆ, 8 ಮಂದಿ ಆಸ್ಪತ್ರೆಗೆ
ಕೊರೊನಾದಿಂದ ಗುಣಮುಖರಾಗಿ ನಿಟ್ಟುಸಿರು ಬಿಡುವಷ್ಟರಲ್ಲಿ ಬ್ಲಾಕ್ ಫಂಗಸ್ ಜೀವವನ್ನೇ ಕಸಿದುಕೊಳ್ಳುತ್ತಿದ್ದು. ಈಗ ಇವೆಲ್ಲದರ ನಡುವೆ ಹೊಸ ರೀತಿಯ ಮತ್ತೊಂದು ಫಂಗಸ್ ಜನರನ್ನು ಹೆದರಿಸುತ್ತಿದೆ. ಹೊಸ ಮಾದರಿ ಮತ್ತೊಂದು ಫಂಗಸ್ ಪತ್ತೆಯಾಗಿದೆ.
ದೆಹಲಿ: ಮಹಾಮಾರಿ ಕೊರೊನಾ ಸೋಂಕಿನ ನಡುವೆ ದೇಶಾದ್ಯಂತ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಮತ್ತು ಯೆಲ್ಲೋ ಫಂಗಸ್ ಈಗಾಗಲೇ ಜನರನ್ನು ಕಿತ್ತು ತಿನ್ನುತ್ತಿವೆ. ಕೊರೊನಾದಿಂದ ಗುಣಮುಖರಾಗಿ ನಿಟ್ಟುಸಿರು ಬಿಡುವಷ್ಟರಲ್ಲಿ ಬ್ಲಾಕ್ ಫಂಗಸ್ ಜೀವವನ್ನೇ ಕಸಿದುಕೊಳ್ಳುತ್ತಿದ್ದು. ಈಗ ಇವೆಲ್ಲದರ ನಡುವೆ ಹೊಸ ರೀತಿಯ ಮತ್ತೊಂದು ಫಂಗಸ್ ಜನರನ್ನು ಹೆದರಿಸುತ್ತಿದೆ. ಹೊಸ ಮಾದರಿ ಮತ್ತೊಂದು ಫಂಗಸ್ ಪತ್ತೆಯಾಗಿದೆ.
ಗುಜರಾತ್‌ನ ವಡೋದರಾದಲ್ಲಿ 262 ಬ್ಲ್ಯಾಕ್ ಫಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ, ನಗರದಲ್ಲಿ ನೇಸಲ್ ಆಸ್ಪರ್ಜಿಲೊಸಿಸ್ (Nasal Aspergillosis) ಎಂಬ ಹೆಸರಿನ ಮತ್ತೊಂದು ಫಂಗಸ್ ಪತ್ತೆಯಾಗಿದೆ. ಸೈನಸ್‌ನಲ್ಲಿ ಸಂಭವಿಸುವ ಈ ಹೊಸ ಸೋಂಕಿನಿಂದ ವೈದ್ಯರು ಸಹ ಶಾಕ್ ಆಗಿದ್ದಾರೆ. ಮಾಹಿತಿಯ ಪ್ರಕಾರ, ಈ ಹೊಸ ಫಂಗಸ್ ಕೊರೊನಾ ಸೋಂಕಿತರಲ್ಲಿ ಅಥವಾ ಕೊರೊನಾ ವೈರಸ್ನಿಂದ ಗುಣಮುಖರಾದವರಲ್ಲಿ ಪತ್ತೆಯಾಗಿದೆ.
ವಡೋದರಾದ ಎಸ್‌ಎಸ್‌ಜಿ ಆಸ್ಪತ್ರೆಯಲ್ಲಿ 8 ಹೊಸ ಫಂಗಸ್ ನೇಸಲ್ ಆಸ್ಪರ್ಜಿಲೊಸಿಸ್ ರೋಗಿಗಳು ದಾಖಲಾಗಿದ್ದಾರೆ. ನಗರ ಮತ್ತು ಜಿಲ್ಲಾಡಳಿತದ ಕೊವಿಡ್-19 ರ ಸಲಹೆಗಾರ ಡಾ.ಶೀತಲ್ ಮಿಸ್ತ್ರಿ ಅವರು “ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರೋರಿಗೆ ಪಲ್ಮನರಿ ಯಾಸ್ಪರ್ ಗಿಲೊಸಿಸ್ ಉಂಟಾಗುತ್ತೆ, ಆದರೆ ಇದೀಗ ಸೈನಸ್ನಲ್ಲಿ ನೇಸಲ್ ಆಸ್ಪರ್ಜಿಲೊಸಿಸ್ ಉಂಟಾಗುತ್ತಿದೆ. ಆದರೆ ಸೈನಸ್‌ನ ಆಸ್ಪರ್ಜಿಲೊಸಿಸ್ ಅಪರೂಪ. ಆದರೆ ಈ ರೋಗವು ಈಗ ಕೊವಿಡ್‌ನಿಂದ ಗುಣಮುಖರಾದವರು ಅಥವಾ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಕಂಡುಬರುತ್ತಿದೆ. ಬ್ಲ್ಯಾಕ್ ಫಂಗಸ್ಗೆ ಹೋಲಿಸಿದರೆ, ಇದು ಕಡಿಮೆ ಅಪಾಯಕಾರಿ ಎಂದು ತಿಳಿಸಿದ್ದಾರೆ.
ವೈದ್ಯರ ಪ್ರಕಾರ, ಸೋಂಕಿತರಿಗೆ ಚಿಕಿತ್ಸೆ ನೀಡಲು ಸ್ಟೀರಾಯ್ಡ್‌ಗಳನ್ನು ಬಳಸಲಾಗುತ್ತಿರುವುದರಿಂದ ಫಂಗಸ್ಗಳು ಸೋಂಕಿತರಲ್ಲಿ ಕಂಡು ಬರುತ್ತಿದೆ. ಆಮ್ಲಜನಕದ ಪೂರೈಕೆಯನ್ನು ಹೈಡ್ರೇಟ್ ಮಾಡಲು ಬಳಸುವ ನೀರು ಕೂಡ ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಗುಜರಾತ್‌ನಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. 36 ನಗರಗಳಲ್ಲಿ ನೈಟ್ ಕರ್ಫ್ಯೂನಲ್ಲಿ ಒಂದು ಗಂಟೆಯವರೆಗೆ ರಿಯಾಯಿತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಬೆಳಗ್ಗೆ ವಿಧಿಸಲಾದ ನಿರ್ಬಂಧಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎದು ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ. ಶುಕ್ರವಾರದಿಂದ 36 ನಗರಗಳಲ್ಲಿ ಬೆಳಿಗ್ಗೆ 9 ರಿಂದ ಬೆಳಿಗ್ಗೆ 6 ರವರೆಗೆ ಈ ನಿರ್ಬಂಧನೆ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಪ್ರಸ್ತುತ, ನೈಟ್ ಕರ್ಫ್ಯೂ ಸಂಜೆ 8 ರಿಂದ ಬೆಳಿಗ್ಗೆ 6 ರವರೆಗೆ ಜಾರಿಯಲ್ಲಿದೆ.
ಇದನ್ನೂ ಓದಿ: Black Fungus ದೇಶದಲ್ಲಿ ಬ್ಲಾಕ್ ಫಂಗಸ್ ಪ್ರಕರಣಗಳ ಸಂಖ್ಯೆ 11717, ಗುಜರಾತಿನಲ್ಲೇ ಅಧಿಕ
(After Black Fungus another infection Nasal Aspergillosis found in gujarat)
Published On - 10:09 am, Fri, 28 May 21