Shocking.. ಏಪ್ರಿಲ್​ನಿಂದ ಮದ್ಯ ಮಾರಾಟ ಪ್ರಮಾಣದಲ್ಲಿ ಕುಸಿತ!

ಬೆಂಗಳೂರು: ಕುಡಿಯೋದೆ ನನ್ನ weakness.. ಆದರೆ ನ್ಯಾಯಕ್ಕೆ ದುಡಿಯೋದೆ ನನ್ನ ಬಿಸಿನೆಸ್ಸು ಅಂತಾ ಯುದ್ಧಕಾಂಡ ಸಿನಿಮಾದ ಹಾಡು ಸಿಕ್ಕಾಪಟ್ಟೆ ಫೇಮಸ್ . ಆದರೆ, ನಮ್ಮಲ್ಲಿ ಕೆಲ ಮದ್ಯಪ್ರಿಯರು ಕುಡಿಯೋದೇ ನನ್ನ ಬಿಸಿನೆಸ್ಸು ಅಂತಾ ಫುಲ್ ಟೈಟ್ ಆಗಿ ತೂರಾಡ್ತಿರುತ್ತಾರೆ. ಅಂಥವರಿಗೆ  ಕೊರೊನಾ ಲಾಕ್​ಡೌನ್ ಸಮಯದಲ್ಲಿ ಎಣ್ಣೆ ಸಿಗದೆ ಪರದಾಡಿದ್ದು ಸಹ ನೋಡಿದ್ದೇವೆ. ಕೊನೆಗೆ ಇವರ ಅಳಲು, ಮನವಿ ಮತ್ತ ಎಲ್ಲಾ ರೀತಿಯ ಪ್ರಾರ್ಥನೆಗೆ ಮಣಿದ ರಾಜ್ಯ ಸರ್ಕಾರ ಕೊನೆಗೂ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿತ್ತು. ಫುಲ್​ ಖುಷ್​ […]

Shocking.. ಏಪ್ರಿಲ್​ನಿಂದ ಮದ್ಯ ಮಾರಾಟ ಪ್ರಮಾಣದಲ್ಲಿ ಕುಸಿತ!
Edited By:

Updated on: Aug 25, 2020 | 3:54 PM

ಬೆಂಗಳೂರು: ಕುಡಿಯೋದೆ ನನ್ನ weakness.. ಆದರೆ ನ್ಯಾಯಕ್ಕೆ ದುಡಿಯೋದೆ ನನ್ನ ಬಿಸಿನೆಸ್ಸು ಅಂತಾ ಯುದ್ಧಕಾಂಡ ಸಿನಿಮಾದ ಹಾಡು ಸಿಕ್ಕಾಪಟ್ಟೆ ಫೇಮಸ್ . ಆದರೆ, ನಮ್ಮಲ್ಲಿ ಕೆಲ ಮದ್ಯಪ್ರಿಯರು ಕುಡಿಯೋದೇ ನನ್ನ ಬಿಸಿನೆಸ್ಸು ಅಂತಾ ಫುಲ್ ಟೈಟ್ ಆಗಿ ತೂರಾಡ್ತಿರುತ್ತಾರೆ. ಅಂಥವರಿಗೆ  ಕೊರೊನಾ ಲಾಕ್​ಡೌನ್ ಸಮಯದಲ್ಲಿ ಎಣ್ಣೆ ಸಿಗದೆ ಪರದಾಡಿದ್ದು ಸಹ ನೋಡಿದ್ದೇವೆ.

ಕೊನೆಗೆ ಇವರ ಅಳಲು, ಮನವಿ ಮತ್ತ ಎಲ್ಲಾ ರೀತಿಯ ಪ್ರಾರ್ಥನೆಗೆ ಮಣಿದ ರಾಜ್ಯ ಸರ್ಕಾರ ಕೊನೆಗೂ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿತ್ತು. ಫುಲ್​ ಖುಷ್​ ಆದ ಮದ್ಯಪ್ರಿಯರು ಸಾಲಾಗಿ ಅಂಗಡಿಗಳ ಮುಂದೆ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಶಿಸ್ತಿನ ಸಿಪಾಯಿಗಳಂತೆ ಮದ್ಯ ಖರೀದಿಸಿದ್ದನು ಕಣ್ಣಾರೆ ನೋಡಿ ಅಚ್ಚರಿ ಸಹ ಪಟ್ಟಿದ್ದೆವು.

ಹೌದು, ನಮ್ಮಲ್ಲಿ ಹೆಂಡತಿಯನ್ನಾದ್ರೂ ಬಿಡ್ತೀನಿ ಆದ್ರೆ ಹೆಂಡ ಬಿಡಲ್ಲ ಅನ್ನೋರು ಸ್ವಲ್ಪ ಜಾಸ್ತಿ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಕುಡಿಯೋಕೆ ಎಣ್ಣೆ ಬೇಕೇ ಬೇಕು. ಹೀಗಾಗಿ, ಮದ್ಯ ಖರೀದಿ ಮಾಡಲು ಕ್ಯೂನಲ್ಲಿ ನಿಂತ ಎಣ್ಣೆಪ್ರಿಯರನ್ನ ಕಂಡು ಎಲ್ಲರೂ ಇವರ ಖರೀದಿಯ ಭರಾಟೆಯಿಂದ ರಾಜ್ಯದ ಆರ್ಥಿಕತೆ ಚೇತರಿಸಿಕೊಂಡು ಬಿಡುತ್ತದೆ ಎಂದು ಯೋಚಿಸಿದ್ದೂ ಉಂಟು. ಅಂತೆಯೇ, ಕುಡುಕರು ರಾಜ್ಯದ ಆರ್ಥಿಕತೆಗೆ ನೆರವಾಗಲು ಶ್ರಮಿಸುತ್ತಿರುವ ನಾವು ಸಹ ಕೊರೊನಾ ವಾರಿಯರ್ಸ್​ ಎಂಬ ಭಾವನೆಯಲ್ಲಿ ತೇಲಾಡಿದ್ದು ಉಂಟು! ಆದರೆ ಈಗ ನಾವು  ಹೇಳ್ತಿರೋ ಸುದ್ದಿ ತುಂಬಾ ಶಾಕಿಂಗ್ ಆಗಿದೆ.
ಮದ್ಯ ಮಾರಾಟ ಪ್ರಮಾಣದಲ್ಲಿ ಕುಸಿತ
ಏಪ್ರಿಲ್​ನಿಂದ ಆಗಸ್ಟ್​ನವರೆಗೆ ಅಬಕಾರಿ ಇಲಾಖೆ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಮದ್ಯ ಮಾರಾಟದ ಪ್ರಮಾಣ ಕುಸಿತ ಕಂಡಿದೆ. ಇದು ಎಷ್ಟರ ಮಟ್ಟಿಗೆ ಅಂದ್ರೆ ಕಳೆದ ಏಪ್ರಿಲ್​ನಿಂದ ಮದ್ಯಪ್ರಿಯರು ಕುಡಿಯೋದನ್ನೇ ಬಿಟ್ರಾ ಎಂಬಂತೆ ಭಾಸವಾಗುತ್ತದೆ. ಜೊತೆಗೆ, ಇದರಿಂದ ರಾಜ್ಯ ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟ ಸಹ ಆಗಿದೆ ಎಂದು ಇಲಾಖೆ ತಿಳಿಸಿದೆ.

ಏಪ್ರಿಲ್​ನಿಂದ ಎಣ್ಣೆ ಕುಡಿಯುವದನ್ನ ಕಡಿಮೆ ಮಾಡಿದ್ರಾ ಮದ್ಯಪ್ರಿಯರು?
ಬಿಯರ್ ಮಾರಾಟದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 62.76 ಲಕ್ಷ ಬಾಕ್ಸ್​ಗಳಷ್ಟು ಕಡಿಮೆ ಮಾರಾಟವಾಗಿದೆ. ಏಪ್ರಿಲ್​ನಿಂದ ಆಗಸ್ಟ್​ನವರೆಗೆ ರಾಜ್ಯದಲ್ಲಿ ಬಿಯರ್ ಮಾರಾಟವಾಗಿರೋದು ಕೇವಲ 53 ಲಕ್ಷ ಬಾಕ್ಸ್ ಮಾತ್ರ. ಕಳೆದ ವರ್ಷ 116.09 ಲಕ್ಷ ಬಾಕ್ಸ್​ಗಳಷ್ಟು ಸೇಲ್ ಆಗಿತ್ತು. ಐಎಂಎಲ್ ಮಾರಾಟದಲ್ಲಿಯೂ ಸಹ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಈ ಬಾರಿ ಐಎಂಎಲ್ ನಲ್ಲಿ 49 ಲಕ್ಷ ಬಾಕ್ಸ್ ನಷ್ಟು ಕಡಿಮೆ ಮಾರಾಟವಾಗಿದೆ. ಇಲ್ಲಿಯವರಿಗೂ ಐಎಂಎಲ್ ಸೇಲ್ ಆಗಿರೋದು ಕೇವಲ 17,1 24 ಲಕ್ಷ ಬಾಕ್ಸ್​ಗಳು ಮಾತ್ರ

ಕಳೆದ ವರ್ಷ ಐಎಂಎಲ್ 22,051 ಲಕ್ಷ ಬಾಕ್ಸ್ ಸೇಲ್ ಆಗಿತ್ತಂತೆ‌. ಬಿಯರ್ ಮಾರಾಟ ಈ ವರ್ಷದಲ್ಲಿ ಅರ್ಧದಷ್ಟು ಕುಸಿತ ಕಂಡಿದೆ. ಏಪ್ರಿಲ್​ನಿಂದ ಆಗಸ್ಟ್​ನವರೆಗೆ ಒಟ್ಟು 1,434 ಕೋಟಿ ಕಡಿಮೆಯಾಗಿದೆ. ಹಾಗಾಗಿ, ಕೊರೊನಾದಿಂದ ಅಬಕಾರಿ ಇಲಾಖೆಯ ಆದಾಯ ನೆಲಕಚ್ಚಿದೆ. ಒಟ್ನಲ್ಲಿ ಮದ್ಯ ಮಾರಾಟದ ಕುಸಿತದಿಂದ ಮದ್ಯಪ್ರಿಯರ ಆರೋಗ್ಯಕ್ಕೆ ಒಳ್ಳೆಯದೇ ಆಗಿದೆ ಆದ್ರೆ ಸರ್ಕಾರಕ್ಕೆ..?