ಶಿರಾ ಉಪಚುನಾವಣೆ: ಸತ್ಯನಾರಾಯಣ ಕುಟುಂಬದವರಿಗೇ ಬಿಜೆಪಿ ಗಾಳ?
ಬೆಂಗಳೂರು: ಶಿರಾ ಕ್ಷೇತ್ರದ ಶಾಸಕರಾಗಿದ್ದ ಸತ್ಯನಾರಾಯಣ ನಿಧನದ ನಂತರ ಈ ಕ್ಷೇತ್ರಕ್ಕಾಗಿ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ತಾಲೀಮು ಆರಂಭಿಸಿದ್ದು, ತಂತ್ರ ಮಂತ್ರಗಳೊಂದಿಗೆ ಉಪಚುನಾವಣೆ ಗೆಲ್ಲಲು ಬೇಕಾಗುವ ಅಗತ್ಯ ಚಿಕಿತ್ಸೆ ಹಾಗೂ ಔಷಧಿಗಾಗಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರಿಗೆ ಸೂಚಿಸಿದೆ. ಈ ಸಂಬಂಧ ತಯಾರಿ ಆರಂಭಿಸಿರುವ ಡಿಸಿಎಂ ಅಶ್ವಥ್ ನಾರಾಯಣ ವರಿಷ್ಠರ ಸೂಚನೆಯಂತೆ ತುಮಕೂರು ಜಿಲ್ಲಾ ಬಿಜೆಪಿ ನಾಯಕರೊಂದಿಗೆ ಮೊದಲ ಸುತ್ತಿನ ಸಭೆ ಮಾಡಿ ಚರ್ಚಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಮತ್ತು ಕಳೆದ ಬಾರಿಯ ಚುನಾವಣಾ […]

ಬೆಂಗಳೂರು: ಶಿರಾ ಕ್ಷೇತ್ರದ ಶಾಸಕರಾಗಿದ್ದ ಸತ್ಯನಾರಾಯಣ ನಿಧನದ ನಂತರ ಈ ಕ್ಷೇತ್ರಕ್ಕಾಗಿ ನಡೆಯಲಿರುವ ಉಪಚುನಾವಣೆಗೆ ಬಿಜೆಪಿ ತಾಲೀಮು ಆರಂಭಿಸಿದ್ದು, ತಂತ್ರ ಮಂತ್ರಗಳೊಂದಿಗೆ ಉಪಚುನಾವಣೆ ಗೆಲ್ಲಲು ಬೇಕಾಗುವ ಅಗತ್ಯ ಚಿಕಿತ್ಸೆ ಹಾಗೂ ಔಷಧಿಗಾಗಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರಿಗೆ ಸೂಚಿಸಿದೆ.
ಈ ಸಂಬಂಧ ತಯಾರಿ ಆರಂಭಿಸಿರುವ ಡಿಸಿಎಂ ಅಶ್ವಥ್ ನಾರಾಯಣ ವರಿಷ್ಠರ ಸೂಚನೆಯಂತೆ ತುಮಕೂರು ಜಿಲ್ಲಾ ಬಿಜೆಪಿ ನಾಯಕರೊಂದಿಗೆ ಮೊದಲ ಸುತ್ತಿನ ಸಭೆ ಮಾಡಿ ಚರ್ಚಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಮತ್ತು ಕಳೆದ ಬಾರಿಯ ಚುನಾವಣಾ ಅಭ್ಯರ್ಥಿಯಲ್ಲದೇ ಇತರ ಮುಖಂಡರ ಜೊತೆಗೂ ಒಂದು ಸುತ್ತಿನ ಸಭೆಯನ್ನು ಅಶ್ವಥ್ ನಾರಾಯಣ್ ನಡೆಸಿದ್ದಾರೆ.
ಒಕ್ಕಲಿಗರಿಗೆ ಈ ಬಾರಿ ಟಿಕೆಟ್ ಕೊಟ್ಟು ಅವರನ್ನು ಪಕ್ಷಕ್ಕೆ ಸೆಳೆಯಬೇಕು ಎಂದು ಇದುವರೆಗೆ ನಡೆದ ಸಭೆಗಳಲ್ಲಿ ಚರ್ಚಿಸಲಾಗಿದೆ. ಹಾಗೇನೆ ಕೊನೆ ಗಳಿಗೆಯಲ್ಲಿ ಸುರೇಶ್ ಗೌಡರನ್ನು ಕಣಕ್ಕಿಳಿಸುವ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ. ಆದರೆ ಸುರೇಶ್ ಗೌಡ ಅವರೇ ಜಿಲ್ಲಾಧ್ಯಕ್ಷ ಆಗಿರೋದ್ರಿಂದ, ಇದುವರೆಗೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಅವರಿಗೆ ಆಗಿಲ್ಲ.
ಇನ್ನು ದಿ. ಶಾಸಕ ಸತ್ಯನಾರಾಯಣ ಕುಟುಂಬ ಸದಸ್ಯರ ಮೇಲೂ ಬಿಜೆಪಿ ಕಣ್ಣಿಟ್ಟಿದೆ. ಹೀಗಾಗಿಯೇ ಇತ್ತೀಚೆಗೆ ಸತ್ಯನಾರಾಯಣ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಈ ಸಂದರ್ಭದಲ್ಲಿ ಡಿಸಿಎಂ ಜೊತೆಗೆ ಸತ್ಯನಾರಾಯಣ ನಿವಾಸಕ್ಕೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಕೂಡಾ ತೆರಳಿದ್ದರು.



