ಕೊರೊನಾದಿಂದ ಬೇಸತ್ತ ಜನರಿಗೆ ಸಿಕ್ಕಾಪಟ್ಟೆ ಥ್ರಿಲ್ ನೀಡ್ತಿದೆ ಬಂಡೀಪುರ ಸಫಾರಿ!
ಚಾಮರಾಜನಗರ: ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕೊರೊನಾದಿಂದಾಗಿ ನಾಲ್ಕೈದು ತಿಂಗಳು ಸಫಾರಿ ಬಂದ್ ಆಗಿತ್ತು. ಎರಡು ವಾರಗಳ ಹಿಂದೆ ಸಫಾರಿ ಶುರುವಾದ್ರೂ ಪ್ರವಾಸಿಗರು ಇತ್ತ ಮುಖ ಮಾಡಿರಲಿಲ್ಲ. ಇದೀಗ ಕ್ರಮೇಣ ಬಂಡೀಪುರಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗ್ತಾ ಇದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಅರಣ್ಯ.. ಸ್ವಚ್ಛಂದವಾಗಿ ವಿಹರಿಸುತ್ತಿರುವ ವನ್ಯಜೀವಿಗಳು.. ತುಂಬಿ ತುಳುಕುತ್ತಿರುವ ಕೆರೆ ಕಟ್ಟೆಗಳು.. ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಉದ್ಯಾನವನದಲ್ಲಿ ನಿತ್ಯ ಕಾಣೋ ದೃಶ್ಯಗಳಿವು. ರಾಜ್ಯದಲ್ಲೇ ಅತಿ ಹೆಚ್ಚು […]
ಚಾಮರಾಜನಗರ: ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕೊರೊನಾದಿಂದಾಗಿ ನಾಲ್ಕೈದು ತಿಂಗಳು ಸಫಾರಿ ಬಂದ್ ಆಗಿತ್ತು. ಎರಡು ವಾರಗಳ ಹಿಂದೆ ಸಫಾರಿ ಶುರುವಾದ್ರೂ ಪ್ರವಾಸಿಗರು ಇತ್ತ ಮುಖ ಮಾಡಿರಲಿಲ್ಲ. ಇದೀಗ ಕ್ರಮೇಣ ಬಂಡೀಪುರಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗ್ತಾ ಇದೆ.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಅರಣ್ಯ.. ಸ್ವಚ್ಛಂದವಾಗಿ ವಿಹರಿಸುತ್ತಿರುವ ವನ್ಯಜೀವಿಗಳು.. ತುಂಬಿ ತುಳುಕುತ್ತಿರುವ ಕೆರೆ ಕಟ್ಟೆಗಳು.. ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಉದ್ಯಾನವನದಲ್ಲಿ ನಿತ್ಯ ಕಾಣೋ ದೃಶ್ಯಗಳಿವು.
ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳಿರುವ ತಾಣ ಬಂಡೀಪುರದಲ್ಲಿ ಎತ್ತ ನೋಡಿದರೂ ಹಸಿರು ವನರಾಶಿ ಕಂಡುಬರುತ್ತಿದೆ. 160ಕ್ಕೂ ಹೆಚ್ಚು ಹುಲಿಗಳು, ಎರಡು ಸಾವಿರಕ್ಕೂ ಹೆಚ್ಚು ಆನೆಗಳು ಸೇರಿದಂತೆ ಚಿರತೆ, ಕರಡಿ, ಜಿಂಕೆ, ಕಾಡೆಮ್ಮೆ, ಮೊದಲಾದ ವನ್ಯಜೀವಿಗಳ ಆವಾಸ ಸ್ಥಾನ.
ಈ ಬಾರಿ ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗುತ್ತಿರೋದ್ರಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿವೆ. ನೀರು ಅರಸಿ ಕಬಿನಿ, ಮದುಮಲೈ ಸೇರಿದಂತೆ ದೂರದ ಅರಣ್ಯ ಪ್ರದೇಶಗಳಿಗೆ ಹೋಗಿದ್ದ ವನ್ಯಜೀವಿಗಳು ಮರಳಿ ಬಂಡೀಪುರಕ್ಕೆ ಬರಲಾಂಭಿಸಿವೆ. ಹೀಗಾಗಿ, ವನ್ಯಜೀವಿಗಳ ದರ್ಶನವಾಗ್ತಿರೋದ್ರಿಂದ ಸಫಾರಿ ಜೋನ್‌ನಲ್ಲಿ ಪ್ರವಾಸಿಗರಿಗೆ ದರ್ಶನ ಭಾಗ್ಯ ಸಿಗ್ತಿದೆ.
ಬಂಡಿಪುರದಲ್ಲಿ ಸಫಾರಿಗೆ ಪ್ರವಾಸಿಗರ ದಂಡು ಹರಿದುಬರ್ತಿದೆ. ಕೊರೊನಾದಿಂದ ಮನೆಯಲ್ಲಿಯೇ ಕುಳಿತಿದ್ದ ಮಂದಿ ನಿಧಾನವಾಗಿ ಇತ್ತ ಮುಖ ಮಾಡುತ್ತಿದ್ದಾರೆ. ಹಲವು ದಿನಗಳ ಕಾಲ ಮನೆಯಲ್ಲಿ ಇದ್ದವರಿಗೆ ಬಂಡಿಪುರ ದರ್ಶನ ಸಂತಸ ತರಿಸಿದೆ.
ಮಕ್ಕಳಿಗೆ ಬೇಸಿಗೆ ರಜೆ ವೇಳೆ ಅರಣ್ಯ ವೀಕ್ಷಣೆಗೆ ಅಡ್ಡವಾಗಿದ್ದ ಕೊರೊನಾ ಹೆಮ್ಮಾರಿ ಬಗ್ಗೆ ಜನ ಸ್ವಲ್ಪ ಭಯ ಬಿಟ್ಟಿದ್ದಾರೆ. ಕೊರೊನಾ ನಿಯಮ ಪಾಲಿಸಿಕೊಂಡು ಸಫಾರಿಗೆ ಬಂದ್ರೆ, ಪ್ರವಾಸಿಗರಿಗಂತೂ ಕಣ್ಣಿಗೆ ಆನಂದ ಗ್ಯಾರಂಟಿ.