ಮೊನ್ನೆ ಪಾಸಿಟಿವ್, ನಿನ್ನೆ ನೆಗೆಟಿವ್ ರಿಪೋರ್ಟ್; ಒಂದೇ ದಿನದಲ್ಲಿ ಕೊರೊನಾ ಹೋಗಿಬಿಡ್ತಾ?

|

Updated on: Apr 30, 2021 | 12:21 PM

ಕೇವಲ ಒಂದು ದಿನಲ್ಲಿ ಮಹಿಳೆಯೋರ್ವರಿಗೆ ಕೊವಿಡ್​ ಪಾಸಿಟಿವ್​, ನೆಗೆಟಿವ್​ ಎರಡೂ ವರದಿ ದಾಖಲಾಗಿದೆ. ಒಂದೇ ಒಂದು ದಿನದಲ್ಲಿ ಕೊವಿಡ್ ಹೋಗಿ ಬಿಡ್ತಾ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಮೊನ್ನೆ ಪಾಸಿಟಿವ್, ನಿನ್ನೆ ನೆಗೆಟಿವ್ ರಿಪೋರ್ಟ್; ಒಂದೇ ದಿನದಲ್ಲಿ ಕೊರೊನಾ ಹೋಗಿಬಿಡ್ತಾ?
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ನಗರದ ಮಹಿಳೆಯೋರ್ವರು ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್​ ಮಾಡಿಸಿಕೊಂಡಿದ್ದಾರೆ. ಮೊನ್ನೆ ವರದಿಯಾದ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್​ ಬಂದಿದ್ದನ್ನು ತಿಳಿದ ಅವರು ಅನುಮಾನಗೊಂಡು ಪುನಃ ಮತ್ತು ಕೊವಿಡ್​ ಪರೀಕ್ಷೆ ಮಾಡಿಸಲು ಮುಂದಾಗಿದ್ದಾರೆ. ಇದೀಗ ನಿನ್ನೆ ವರದಿಯಲ್ಲಿ ಕೊವಿಡ್​ ನೆಗೆಟಿವ್​ ವರದಿ ದಾಖಲಾಗಿದೆ. ಕೇವಲ ಒಂದೇ ಒಂದು ದಿನದಲ್ಲಿ ಕೊವಿಡ್ ಹೋಗಿ ಬಿಡ್ತಾ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಬೋನ್​ ಕ್ಯಾನ್ಸರ್​ ಇರುವ ಕಾರಣದಿಂದಾಗಿ ನಗರದ ಗೊರಲ್ಲಹಟ್ಟಿಯ ಮಹಿಳೆಯೋರ್ವರು ಕಿದ್ವಾಯಿ ಆಸ್ಪತ್ರೆಗೆ ಹೋಗಿದ್ದರು. ಏಪ್ರಿಲ್​ 27ರಂದು ಅವರಿಗೆ ಕೊವಿಡ್​ ಟೆಸ್ಟ್​ ಮಾಡಿಸಲಾಯಿತು. ಏಪ್ರಿಲ್​ 28ರಂದು ಬಂದ ವರದಿಯಲ್ಲಿ ಕೊವಿಡ್​ ಪಾಸಿಟಿವ್​ ದಾಖಲಾಗಿದೆ. ಇದರಿಂದ ಅನುಮಾನಗೊಂಡ ಮಹಿಳೆ ಪುನಃ ಏಪ್ರಿಲ್​ 28ರಂದೇ ಮತ್ತೆ ಕಿದ್ವಾಯಿ ಆಸ್ಪತ್ರೆಯಲ್ಲಿಯೇ ಕೊವಿಡ್​ ಮಾಡಿಸಲು ಮುಂದಾಗಿದ್ದಾರೆ. 29ರಂದು ಬಂದ ವರದಿಯಲ್ಲಿ ಕೊವಿಡ್​ ನೆಗೆಟಿವ್​ ದಾಖಲಾಗಿದೆ. ಇಂದೇ ದಿನದಲ್ಲಿ ಕೊವಿಡ್​ ಹೋಗಿ ಬಿಡ್ತಾ ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ. ಪಾಸಿಟಿವ್​ ಹಾಗೂ ನೆಗೆಟಿವ್​ ಎರಡೂ ವರದಿಯಿಂದಾಗಿ ಇದೆಂತಹ ಪರಿಸ್ಥಿತಿ ಎಂದು ಕುಟುಂಬಸ್ಥರು ಗೊಂದಲಕ್ಕೊಳಗಾಗಿದ್ದಾರೆ.

ನಗರದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿದೆ. ಕೊರೊನಾ ಸೋಂಕು ತಗುಲಿ ಸಾವಿಗೀಡಾಗುತ್ತಿರುವವರು ಅನೇಕ ಮಂದಿ. ಹೀಗಿರುವಾಗ ಜನರು ಭಯಭೀತರಾಗುತ್ತಿದ್ದಾರೆ. ಹೀಗಿರುವಾಗ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸುವುದರ ಮೂಲಕ ಕೊರೊನಾ ಸಾಂಕ್ರಾಮಿಕ ಹರಡುವಿಕೆಯ ನಿಯಂತ್ರಣಕ್ಕೆ ಮುಂದಾಗಿದೆ.

ಇದನ್ನೂ ಓದಿ: ಕೊರೊನಾ ಕಾಲದಲ್ಲಿ ಜನರ ನೆರವಿಗೆ ನಿಂತ ಬೆಳಗಾವಿಯ ಆಪತ್ಬಾಂಧವ; ಸಾರ್ವಜನಿಕರಿಂದ ಮೆಚ್ಚುಗೆ

Published On - 11:05 am, Fri, 30 April 21