AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಢೀರ್ ಕರೆಂಟ್ ಕಟ್, ಆಕ್ಸಿಜನ್ ಬಂದ್ ಆಗಿ ಸೋಂಕಿತ ಶಿಕ್ಷಕ ಸಾವು

ಕೊವಿಡ್ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ನರಳಾಡಿ ನರಳಾಡಿ 32 ವರ್ಷದ ಸೋಂಕಿತ ಶಿಕ್ಷಕ ಮೃತಪಟ್ಟಿದ್ದಾನೆ. ಹಲವು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟಿತ್ತು. ಇದರಿಂದ ಆಕ್ಸಿಜನ್ ಸಮಸ್ಯೆಯಾಗಿ ಒಂದು ಜೀವ ಬಲಿಯಾಗಿದೆ.

ದಿಢೀರ್ ಕರೆಂಟ್ ಕಟ್, ಆಕ್ಸಿಜನ್ ಬಂದ್ ಆಗಿ ಸೋಂಕಿತ ಶಿಕ್ಷಕ ಸಾವು
ಮುದ್ನಾಳ್ ಬಳಿಯ ಕೊವಿಡ್ ಆಸ್ಪತ್ರೆಯಲ್ಲಿ ಕರೆಂಟ್ ಕಟ್
ಆಯೇಷಾ ಬಾನು
|

Updated on: Apr 30, 2021 | 9:59 AM

Share

ಯಾದಗಿರಿ: ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ಕೊರೊನಾ ಸೋಂಕಿತ ಶಿಕ್ಷಕ ಮೃತಪಟ್ಟಿದ್ದಾನೆ. ಅಲ್ಲದೆ ಸೋಂಕಿತರು ಪರದಾಡಿದಂತಹ ಘಟನೆ ನಡೆದಿದೆ. ಯಾದಗಿರಿ ತಾಲೂಕಿನ ಮುದ್ನಾಳ್ ಬಳಿಯ ಕೊವಿಡ್ ಆಸ್ಪತ್ರೆಯಲ್ಲಿ ಕಳೆದ 2 ಗಂಟೆಯಿಂದ ಕರೆಂಟ್ ಇಲ್ಲದೆ ಸೋಂಕಿತರು ಪರದಾಡುತ್ತಿದ್ದಾರೆ. ಆಕ್ಸಿಜನ್, ವೆಂಟಿಲೇಟರ್‌ ಬಂದ್ ಆಗಿರುವುದರಿಂದ ನರಳುತ್ತಿದ್ದಾರೆ. ಹೀಗಾಗಿ ಸದ್ಯ ಸಂಬಂಧಿಕರು ಬಟ್ಟೆಯಿಂದ ಸೋಂಕಿತರಿಗೆ ಗಾಳಿ ಬೀಸುತ್ತಿರುವ ದೃಶ್ಯಗಳು ಕಂಡು ಬಂದಿವೆ.

ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಇದೆ ಆದ್ರೆ ಡಿಸೇಲ್ ಇಲ್ಲ. ಯಾದಗಿರಿ ಜಿಲ್ಲಾಡಳಿತದ ಎಡವಟ್ಟಿಗೆ ಸೋಂಕಿತರ ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ. ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ಭೇಟಿ

ವಿದ್ಯುತ್ ಇಲ್ದೆ ಆಕ್ಸಿಜನ್ ಸ್ಥಗಿತಗೊಂಡು ಸೋಂಕಿತ ಸಾವು ಕೊವಿಡ್ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೆ ನರಳಾಡಿ ನರಳಾಡಿ 32 ವರ್ಷದ ಸೋಂಕಿತ ಶಿಕ್ಷಕ ಮೃತಪಟ್ಟಿದ್ದಾನೆ. ಹಲವು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟಿತ್ತು. ಇದರಿಂದ ಆಕ್ಸಿಜನ್ ಸಮಸ್ಯೆಯಾಗಿ ಒಂದು ಜೀವ ಬಲಿಯಾಗಿದೆ.

ಕರೆಂಟ್ ಹೋದಾಗ ಎಷ್ಟು ಕರೆದರೂ ಯಾವೊಬ್ಬ ವೈದ್ಯರು ಸಹ ಬರಲಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನನ್ನ ಸಹೋದರ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಆಸ್ಪತ್ರೆ ಮುಂದೆ ಕುಳಿತುಮೃತ ಶಿಕ್ಷಕನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಸಹೋದರನ ಸಾವು ಕಣ್ಣಾರೆ ಕಂಡು ಮೃತ ಶಿಕ್ಷಕನ ಸಹೋದರ ಅಸ್ವಸ್ಥನಾಗಿದ್ದಾನೆ. ಇನ್ನು ಕರೆಂಟ್ ಇಲ್ಲದೆ ಸಾಕಷ್ಟು ಮಂದಿ ಸೋಂಕಿತರ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: ಕೊವಿಡ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ: ಉಸಿರಾಡಲಾಗದೆ ಸೋಂಕಿತರ ನರಳಾಟ, ಯಾವೂರಲ್ಲಿ?