2 ಕೋಟೆ ವೆಚ್ಚದಲ್ಲಿ ನಿರ್ಮಾಣವಾದ ಆಸ್ಪತ್ತೆಗೆ ಸಿಗುತ್ತಿಲ್ಲ ಉದ್ಘಾಟನೆ ಭಾಗ್ಯ, ಉದ್ಘಾಟನೆಗೆ ಸ್ಥಳೀಯರಿಂದ ಒತ್ತಾಯ
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾವಿನಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 2 ಕೋಟೆ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಸ್ಪತ್ರೆ ನಿರ್ಮಾಣ ಮುಗಿದಿದ್ದರೂ ಉದ್ಘಾಟನೆಯಾಗಿಲ್ಲ.
ತುಮಕೂರು: ಕೊರೊನಾ ಸೋಂಕು ದೇಶವನ್ನು ಆವರಿಸಿದೆ. ಇದರ ತೀವ್ರತೆಯಿಂದಾಗಿ ಸೋಂಕಿತರು ಮತ್ತು ಮೃತರ ಸಂಖ್ಯೆ ದಾಖಲೆ ಪ್ರಮಾಣವನ್ನೇ ಮೀರಿಸುತ್ತಿದೆ. ದಿನದಿಂದ ದಿನಕ್ಕೆ ಸಾವು-ನೋವುಗಳು ಹೆಚ್ಚುತ್ತಿವೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಸೋಂಕಿತರಿಗೆ ಬೆಡ್, ಆಕ್ಸಿಜನ್, ರೆಮ್ಡಿಸಿವಿರ್ ಸಮಸ್ಯೆ ಎದುರಾಗಿದೆ. ಬೆಡ್ ಇಲ್ಲದೆ ಸೂಕ್ತ ಚಿಕಿತ್ಸೆ ಸಿಗದೆ ಸೋಂಕಿತರು ನರಳಿ ನರಳಿ ಪ್ರಾಣಬಿಡುತ್ತಿದ್ದಾರೆ. ರಾಜ್ಯದಲ್ಲಿ ಬೆಡ್ಗಳ ಅಭಾವವಿದೆ. ಇಂತಹ ಸಂದರ್ಭದಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಸಿಕಿಲ್ಲ.
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮಾವಿನಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 2 ಕೋಟೆ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಸ್ಪತ್ರೆ ನಿರ್ಮಾಣ ಮುಗಿದಿದ್ದರೂ ಉದ್ಘಾಟನೆಯಾಗಿಲ್ಲ. ಕಟ್ಟಡದ ಉದ್ಘಾಟನೆಗೆ ಆರೋಗ್ಯ ಇಲಾಖೆ ಮುಂದಾಗಿಲ್ಲ. ಶಾಸಕ ಮಸಾಲೆ ಜಯರಾಂ ಕೂಡ ಈ ಬಗ್ಗೆ ಗಮನ ಹರಿಸಿಲ್ಲ. ಕೂಡಲೇ ಕಟ್ಟಡ ಉದ್ಘಾಟಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ ಹೊಸ ಆಸ್ಪತ್ರೆ ನಿರ್ಮಾಣವಾದರೂ ಗ್ರಾಮದ ರೋಗಿಗಳು ಬೇರೆ ಬೇರೆ ಕಡೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸಂದರ್ಭದಲ್ಲಾದರೂ ಬಳಸಿಕೊಳ್ಳಬಹುದಿದ್ದರೂ ಆಸ್ಪತ್ರೆ ಉದ್ಘಾಟನೆಯಾಗಿಲ್ಲ. ಹೀಗಾಗಿ ಕೂಡಲೇ ಕಟ್ಟಡ ಉದ್ಘಾಟಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಶಿರಾ ಸಾರ್ವಜನಿಕ ಆಸ್ಪತ್ರೆಗೆ ಆ್ಯಂಬುಲೆನ್ಸ್ ನೀಡಿದ ಶಾಸಕ ಇನ್ನು ಮತ್ತೊಂದು ಕಡೆ ತುಮಕೂರು ಜಿಲ್ಲೆಯ ಶಿರಾ ಸಾರ್ವಜನಿಕ ಆಸ್ಪತ್ರೆಗೆ ಶಿರಾ ಶಾಸಕ ರಾಜೇಶ್‌ಗೌಡ ಆ್ಯಂಬುಲೆನ್ಸ್ ಕೊಡುಗೆ ನೀಡಿದ್ದಾರೆ. ಕೊವಿಡ್ ಸೋಂಕಿತರ ಅನುಕೂಲಕ್ಕೆ ಆ್ಯಂಬುಲೆನ್ಸ್ ದೇಣಿಗೆ ನೀಡಿದ್ದಾರೆ.
ಇದನ್ನೂ ಓದಿ: 74ರ ಪ್ರಾಯದ ರಣಧೀರ್ ಕಪೂರ್ಗೆ ಕೊವಿಡ್; ಕರೀನಾ ಕುಟುಂಬದಲ್ಲಿ ಹೆಚ್ಚಿದ ಆತಂಕ