ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯಲ್ಲಿ 84 ಪೊಲೀಸರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತಂತೆ ಎಸ್ಪಿ ಡಾ. ಅಶ್ವಿನಿ ಹೇಳಿಕೆ ನೀಡಿದ್ದಾರೆ. ಕೊರೊನಾ ಸೋಂಕು ತಗುಲಿದವರಲ್ಲಿ 22 ಪೊಲೀಸರು ಚೇತರಿಸಿಕೊಂಡಿದ್ದಾರೆ. ಇನ್ನು 62 ಪೊಲೀಸರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ.
ಅನಗತ್ಯವಾಗಿ ರಸ್ತೆಯಲ್ಲಿ ಅಡ್ಡಾಡುತ್ತ ನಿಯಮಗಳನ್ನು ಉಲ್ಲಂಘಿಸಿದವರಲ್ಲಿ ಇಲ್ಲಿವರೆಗೆ 717 ಬೈಕ್ಗಳನ್ನ ಸೀಜ್ ಮಾಡಲಾಗಿದೆ. ನಾಳೆಯಿಂದ 14 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುವುದರಿಂದ ನಾಳೆಗೆ ಬೈಕ್ಗಳನ್ನ ಸೀಜ್ ಮಾಡಿದರೆ ಕೋರ್ಟ್ನಲ್ಲೇ ಬಿಡಿಸಿಕೊಳ್ಳಬೇಕು. ನಾಳೆ ಜಿಲ್ಲೆಯಲ್ಲಿ 11 ಚೆಕ್ ಪೋಸ್ಟ್ಗಳನ್ನ ತೆರೆಯಲಾಗುತ್ತಿದ್ದು ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ನಿಗಾವಹಿಸಲಾಗುವುದು. ಈ ಕುರಿತಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಎಸ್ಪಿ ಡಾ. ಅಶ್ವಿನಿ ಮನವಿ ಮಾಡಿಕೊಂಡಿದ್ದಾರೆ.
ಮೈಸೂರು: ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲೇ ನೇಣಿಗೆ ಶರಣು
ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ಟ್ರಾಮ ಕೇರ್ ಸೆಂಟರ್ನಲ್ಲಿ ನಡೆದಿದೆ. ತನ್ವಿರ್ ಸೇಠ್ ನಗರದ ನಿವಾಸಿ ದೇವರಾಜು ಎಂಬಾತ ಎರಡು ದಿನಗಳ ಹಿಂದೆ ಕೊವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಿಗ್ಗೆ 9 ಗಂಟೆ ಸರಿಸುಮಾರಿಗೆ ಆಕ್ಸಿಜನ್ ವಯರ್ನಿಂದ ಶೌಚಾಲಯದ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸುಮಲತಾ ಅಂಬರೀಶ್ ಸ್ವಂತ ಹಣದಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿದ್ದಾರೆ; ಮಂಡ್ಯ ಉಪ ವಿಭಾಗಾಧಿಕಾರಿ ಸ್ಪಷ್ಟನೆ
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಂದ ಮಂಡ್ಯ ಜಿಲ್ಲೆ ಜನತೆಗೆ ಕೋವಿಡ್ ನೆರವು ಘೋಷಣೆ