ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಂದ ಮಂಡ್ಯ ಜಿಲ್ಲೆ ಜನತೆಗೆ ಕೋವಿಡ್​ ನೆರವು ಘೋಷಣೆ

ಮಂಡ್ಯ ಜಿಲ್ಲೆ ಜನತೆಗೆ ಕೋವಿಡ್​ ನೆರವು ನೀಡುವ ಬಗ್ಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಂದ ಮಂಡ್ಯ ಜಿಲ್ಲೆ ಜನತೆಗೆ ಕೋವಿಡ್​ ನೆರವು ಘೋಷಣೆ
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ
Follow us
ಸಾಧು ಶ್ರೀನಾಥ್​
|

Updated on:May 08, 2021 | 9:12 AM

ಮಂಡ್ಯ: ಜಿಲ್ಲೆಯ ಜನತೆಗೆ ಕೋವಿಡ್​ ಸಂಕಷ್ಟ ಕಾಲದಲ್ಲಿ ಮತ್ತೊಬ್ಬ ಪ್ರಭಾವಿ ನಾಯಕರು ನೆರವಿನ ಹಸ್ತ ಚಾಚಿಸಿದ್ದಾರೆ. ಮೊನ್ನೆಯಷ್ಟೇ ಜಿಲ್ಲೆಯ ಹಾಲಿ ಸಂಸದೆ ಸುಮಲತಾ ಅಂಬರೀಷ್​ ಅವರು ಜಂಬೋ ಆಕ್ಸಿಜನ್​ ಸಪ್ಲೆ ಮಾಡುವ ವಾಗ್ದಾನ ನೀಡಿ, ಅದರಂತೆ ಜಿಲ್ಲೆಗೆ ಆತ್ಯಗತ್ಯವಾಗಿರುವ ಜೀವವಾಯುವನ್ನು ಕಳುಹಿಸಿಕೊಟ್ಟಿದ್ದರು. ಇದೀಗ ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ನೆರವಾಗಲು ಮುಂದೆ ಬಂದಿದ್ದಾರೆ.

ಮಂಡ್ಯ ಜಿಲ್ಲೆಗೆ 100 ಜಂಬೋ ಆಕ್ಸಿಜನ್ ಸಿಲಿಂಡರ್​ಗಳು ಮತ್ತು ಆರೋಗ್ಯ ಕಾರ್ಯಕರ್ತರಿಗಾಗಿ 10 ಸಾವಿರ ಎನ್-95 ಮಾಸ್ಕ್ ವಿತರಿಸಲು ಮಾಜಿ ಸಿಎಂ ಎಸ್.ಎಂ.ಕೃಷ್ಣ ಮುಂದಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ ಸಿ ನಾರಾಯಣಗೌಡ ಮೂಲಕ ಈ ನೆರವು ಸಕಾಲಕ್ಕೆ ಜನಕ್ಕೆ ತಲುಪುವ ವ್ಯವಸ್ಥೆ ಮಾಡಲು ಎಸ್.ಎಂ. ಕೃಷ್ಣ ನಿರ್ಧರಿಸಿದ್ದಾರೆ.

ಮಂಡ್ಯ ಜಿಲ್ಲೆ ಜನತೆಗೆ ಕೋವಿಡ್​ ನೆರವು ನೀಡುವ ಬಗ್ಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದು ತಿಳಿಸಿದ್ದಾರೆ.

SM Krishna help to corona warriors in mandya district (1) (1)

ಮಂಡ್ಯ ಜಿಲ್ಲೆ ಜನತೆಗೆ ಕೋವಿಡ್​ ನೆರವು ನೀಡುವ ಬಗ್ಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದು ತಿಳಿಸಿದ್ದಾರೆ.

(SM Krishna help to corona warriors in mandya district)

ನುಡಿದಂತೆ ನಡೆದ ಸಂಸದೆ ಸುಮಲತಾ; ಮಂಡ್ಯಕ್ಕೆ ಬಂತು 2 ಸಾವಿರ ಲೀಟರ್ ಸಾಮರ್ಥ್ಯದ 20 ಜಂಬೋ ಆಕ್ಸಿಜನ್ ಸಿಲಿಂಡರ್

Published On - 9:11 am, Sat, 8 May 21