ಕ್ವಾರಂಟೈನ್‌ಗೆ ನಿರಾಕರಿಸಿದ್ದ ನಾಲ್ವರಿಗೆ ಸೋಂಕು, ಹೆಚ್ಚಾದ ಆತಂಕ
ದೇವನಹಳ್ಳಿ: ವಿದೇಶದಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್‌ಗೆ ಹೋಗಲು ಕಿರಿಕ್ ಮಾಡಿದ್ದ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಳೆದ 4 ದಿನದ ಹಿಂದೆ ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ಗೆ ಮಾಲ್ಡೀವ್ಸ್, ಜಕಾರ್ತದಿಂದ ಕನ್ನಡಿಗರು ಬಂದಿದ್ದರು. ಆಗಮಿಸಿದ್ದ 30 ಜನರ ಪೈಕಿ ಕೆಲವರು ಕ್ವಾರಂಟೈನ್‌ಗೆ ಹೋಗಲು ನಿರಾಕರಿಸಿದ್ದರು. ಅಧಿಕಾರಿಗಳ ಜೊತೆ ಈ ಸಂಬಂಧ ವಾಗ್ವಾದ ನಡೆಸಿದ್ದರು. ಹಲವು ಗಂಟೆಗಳ ಕಾಲ ಮನವೊಲಿಸಿ ಕ್ವಾರಂಟೈನ್‌ಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಕೊರೊನಾ ಟೆಸ್ಟ್ ಮಾಡಿಸಿದ್ರು. ನಿನ್ನೆ ಸಂಜೆ ಬಂದ ವರದಿಯಲ್ಲಿ ನಾಲ್ವರಿಗೆ […]
ದೇವನಹಳ್ಳಿ: ವಿದೇಶದಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್‌ಗೆ ಹೋಗಲು ಕಿರಿಕ್ ಮಾಡಿದ್ದ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಳೆದ 4 ದಿನದ ಹಿಂದೆ ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ಗೆ ಮಾಲ್ಡೀವ್ಸ್, ಜಕಾರ್ತದಿಂದ ಕನ್ನಡಿಗರು ಬಂದಿದ್ದರು.
ಆಗಮಿಸಿದ್ದ 30 ಜನರ ಪೈಕಿ ಕೆಲವರು ಕ್ವಾರಂಟೈನ್‌ಗೆ ಹೋಗಲು ನಿರಾಕರಿಸಿದ್ದರು. ಅಧಿಕಾರಿಗಳ ಜೊತೆ ಈ ಸಂಬಂಧ ವಾಗ್ವಾದ ನಡೆಸಿದ್ದರು. ಹಲವು ಗಂಟೆಗಳ ಕಾಲ ಮನವೊಲಿಸಿ ಕ್ವಾರಂಟೈನ್‌ಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಕೊರೊನಾ ಟೆಸ್ಟ್ ಮಾಡಿಸಿದ್ರು. ನಿನ್ನೆ ಸಂಜೆ ಬಂದ ವರದಿಯಲ್ಲಿ ನಾಲ್ವರಿಗೆ ಸೋಂಕು ದೃಢಪಟ್ಟಿದೆ.
ಸದ್ಯ ಸೋಂಕಿತರನ್ನು ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಇನ್ನುಳಿದವರಿಗೆ ಹಾಸ್ಟೆಲ್ ಕ್ವಾರಂಟೈನ್ ಮಾಡಲಾಗಿದೆ. ಹಾಸ್ಟೆಲ್ ಸುತ್ತಾಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಂದು ಹಾಸ್ಟೆಲ್ ಸುತ್ತಮುತ್ತಲಿನ ಪ್ರದೇಶ ಸೀಲ್ ಡೌನ್ ಮಾಡಲು ಚಿಂತನೆ ನಡೆಸಲಾಗುತ್ತಿದೆ.
Published On - 9:09 am, Tue, 26 May 20