ಬೆಂಗಳೂರು: ಕೊರೊನಾ ಸೋಂಕು ದೇಶದ ಜನರ ಪ್ರಾಣ ಹಿಂಡುತ್ತಿದೆ. ಇದರ ಜೊತೆಗೆ ಕೊರೊನಾದಿಂದ ಗುಣಮುಖರಾಗಿ ಹೊಸ ಜೀವನ ಕಟ್ಟಿಕೊಳ್ಳ ಬೇಕು ಎನ್ನುವವರಿಗೆ ಗಾಯದ ಮೇಲೆ ಬರೆ ಎಳೆದಂತೆ ಅನೇಕ ರೋಗಗಳು, ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬ್ಲಾಕ್ ಫಂಗಸ್ ಬಳಿಕ ಕೊರೊನಾದಿಂದ ಗುಣಮುಖರಾದವರಲ್ಲಿ ಮತ್ತೊಂದು ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಕೊರೊನಾ ಬಂದ ಬಳಿಕ ಹೃದಯ ಸಂಬಂಧಿಸಿದ ಖಾಯಿಲೆ, ಲಂಗ್ಸ್, ಲಿವರ್ಗೆ ತೊಂದರೆಯಾಗುತ್ತಿತ್ತು. ಈಗ ಕೊರೊನಾ ಬಂದು ಹೋದವರ ಕಾಲುಗಳ ಬಣ್ಣ ಬದಲಾಗುತ್ತಿದೆ. ಕಾಲು ನೋವು, ಗ್ಯಾಂಗ್ರಿನ್ ಮಾದರಿ ಸಮಸ್ಯೆ ಕಾಣಿಸಿಕೊಳ್ತಿದೆ. ಹೀಗಾಗಿ ಕೊರೊನಾ ಬಂದು ಹೋದವರ ಕಾಲುಗಳನ್ನು ಕಟ್ ಮಾಡಲಾಗುತ್ತಿದೆ. ಈ ರೀತಿ ಸಮಸ್ಯೆಗಳು ಕಂಡು ಬಂದು ಕಾಲು ಕಳೆದುಕೊಂಡವರು ಅನೇಕ ಮಂದಿ ಇದ್ದಾರೆ.
ಯಾವುದೇ ಕಾಯಿಲೆ, ಶುಗರ್ ಇಲ್ಲದೆ ಆರೋಗ್ಯವಂತರಾಗಿರುವ ಜನರಿಗೂ ಕೊರೊನಾ ಬಳಿಕ ಒಂದೇ ಕಾರಣಕ್ಕೆ ಕಾಲಿನ ಸಮಸ್ಯೆ ಕಾಣಿಸಿಕೊಳ್ತಿದೆ. ಹೀಗೆ ಸಮಸ್ಯೆ ಎದುರಾದ 200 ಜನರ ಪೈಕಿ 30 ಜನರ ಕಾಲುಗಳನ್ನೇ ವೈದ್ಯರು ಕಟ್ ಮಾಡಿದ್ದಾರೆ.
ಇದನ್ನೂ ಓದಿ: Covid Diary : ಕವಲಕ್ಕಿ ಮೇಲ್ ; ಕೊರೊನಾ ಮಗಳು ಭವಿಷ್ಯ ಹೇಳಲು ಕಲಿತಿದ್ದು