ಬಾಗಲಕೋಟೆ ಆರೋಗ್ಯ ಇಲಾಖೆಯ 157 ಸಿಬ್ಬಂದಿಗೆ ಕೊರೊನಾ ಪಾಸಿಟಿವ್, ಓರ್ವ ಬಲಿ

|

Updated on: May 23, 2021 | 7:02 AM

ಅವರು ಕೊವಿಡ್ ಫ್ರಂಟ್ ಲೈನ್ ವಾರಿಯರ್ಸ್‌. ದಿನಲೂ ಜನರ ಜೀವ ಉಳಿಸಲು ಹಗಲಿರುಳು ದುಡಿಯುತ್ತಿದ್ದಾರೆ. ಆದರೆ ಅಂತಹ ಆರೋಗ್ಯ ಇಲಾಖೆಯ 157 ಸಿಬ್ಬಂದಿಗೆ ಮಹಾಮಾರಿ ವಕ್ಕರಿಸಿ, ಓರ್ವ ಮೃತಪಟ್ಟಿದ್ದಾನೆ. ಇದು ಜಿಲ್ಲೆಯ ಫ್ರಂಟ್ ಲೈನ್ ವಾರಿಯರ್ ಗಳು ಆತಂಕಕ್ಕೆ ಈಡಾಗುವಂತೆ ಮಾಡಿದೆ. ಆದ್ರೂ ವ್ಯಾಕ್ಸಿನ್ ಹಲವರ ಪ್ರಾಣ ಉಳಿಸಿದೆ.

ಬಾಗಲಕೋಟೆ ಆರೋಗ್ಯ ಇಲಾಖೆಯ 157 ಸಿಬ್ಬಂದಿಗೆ ಕೊರೊನಾ ಪಾಸಿಟಿವ್, ಓರ್ವ ಬಲಿ
ಸಂಗ್ರಹ ಚಿತ್ರ
Follow us on

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಮುಂದುವರಿದಿದೆ. ಜಿಲ್ಲೆಯಲ್ಲಿ ಸದ್ಯ ಪಾಸಿಟಿವಿಟಿ ಸಂಖ್ಯೆ ಸ್ವಲ್ಪ ಕಡಿಮೆಯಾದ್ರೂ ಕೊವಿಡ್ ಭೀತಿ, ಅದರ ಪರಿಣಾಮ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಈ ಕ್ರೂರಿಯನ್ನ ಕಟ್ಟಿಹಾಕೋಕೆ ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಆದರೆ ಆರೋಗ್ಯ ಇಲಾಖೆ ಮೇಲೆ ಈಗ ಕೊವಿಡ್ ‌ಮಹಾಮಾರಿ ಕೆಂಗಣ್ಣು ಬೀರಿದ್ದು, ಜಿಲ್ಲೆಯ ಒಟ್ಟು 157 ಆರೋಗ್ಯ ಇಲಾಖೆ ಸಿಬ್ಬಂದಿ‌ಗೆ ಕೊರೊನಾ ವಕ್ಕರಿಸಿದೆ. ಅಷ್ಟೇ ಅಲ್ಲದೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ನ ಪ್ರಾಥಮಿಕ ಆರೋಗ್ಯದ ಸ್ಟಾಪ್ ನರ್ಸ್ 41 ವರ್ಷದ ದುಂಡಪ್ಪ ಮುರನಾಳ ಕೊವಿಡ್‌ಗೆ ಬಲಿಯಾಗಿದ್ದಾರೆ. ಇದು ಕೂಡ ಆರೋಗ್ಯ ಇಲಾಖೆ ಸಿಬ್ಬಂದಿಯ ಆತಂಕಕ್ಕೆ ಪ್ರಮುಖ ಕಾರಣವಾಗಿದೆ.

ಫ್ರಂಟ್‌ಲೈನ್ ವಾರಿಯರ್ಸ್‌ ಜೀವ ಕಾಪಾಡುತ್ತಿದೆ ವ್ಯಾಕ್ಸಿನ್‌
ಆರೋಗ್ಯ ಇಲಾಖೆಯ 157 ಸಿಬ್ಬಂದಿಗೆ ಕೊರೊನಾ ವಕ್ಕರಿಸಿದ್ದು, ಇದರಲ್ಲಿ 20 ಜನ ವೈದ್ಯರು, 28 ಜನ ನರ್ಸ್, ಜೂನಿಯರ್ & ಸೀನಿಯರ್ ಹೆಲ್ತ್ ಅಸಿಸ್ಟಂಟ್, ಲ್ಯಾಬ್ ಟೆಕ್ನಿಷನ್, ಆಶಾ ಕಾರ್ಯಕರ್ತೆಯರು ಸೇರಿ 109 ಸಿಬ್ಬಂದಿಗೆ ಸೊಂಕು ತಗುಲಿದೆ. ಆದರೆ ಇಲ್ಲಿ ಗಮನಿಸಬೇಕಾದ ಒಂದು ವಿಚಾರ ಅಂದ್ರೆ ಆರೋಗ್ಯ ಇಲಾಖೆಯ ಇಷ್ಟು ಜನರಿಗೆ ಸೊಂಕು ತಗುಲಿದರೂ ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗಿದೆ. ಕಳೆದ ವರ್ಷ ಒಟ್ಟು ಐವರು ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಗೆ ಬಲಿಯಾಗಿದ್ದರು. ಆದರೆ ಈ ಬಾರಿ ಕೇವಲ ಒಬ್ಬ ಸ್ಟಾಪ್ ನರ್ಸ್ ಮಾತ್ರ ಬಿಟ್ಟು ಯಾರು ಸಾವನ್ನಪ್ಪಿಲ್ಲ. ಇಲ್ಲಿ ವ್ಯಾಕ್ಸಿನ್‌ ಆರೋಗ್ಯ ಇಲಾಖೆಯ ಸಿಬ್ಬಂದಿ ಜೀವ ಕಾಪಾಡುತ್ತಿದೆ.ವ್ಯಾಕ್ಸಿನ್ ತೆಗೆದುಕೊಂಡಿದ್ರಿಂದ ಕೊರೊನಾ ಬಂದ್ರೂ ಸಾವುಗಳ ಸಂಖ್ಯೆ ಕಮ್ಮಿಯಾಗಿದೆ.

ಒಟ್ಟಾರೆ ಜನರ ಜೀವ ಭೇಟೆಯಾಡುತ್ತಾ ಹೊರಟಿರುವ ಮಹಾಮಾರಿಗೆ ವ್ಯಾಕ್ಯಿನ್ ಸದ್ಯಕ್ಕೆ ರಾಮಬಾಣವಾಗಿದೆ. ಆರೋಗ್ಯ ಇಲಾಖೆ, ಹೆಲ್ತ್ ವರ್ಕರ್ ಗಳನ್ನು ವ್ಯಾಕ್ಸಿನ್ ಕಾಪಾಡಿದ್ದು, ವ್ಯಾಕ್ಸಿನ್ ಫ್ರಂಟ್ ಲೈನ್ ವಾರಿಯರ್ ಗೆ ಸಂಜೀವಿನಿಯಾಗಿದೆ. ಆದರೂ 157 ಸಿಬ್ಬಂದಿಗೆ ಕೊರೊನಾ ತಗುಲಿ, ಓರ್ವನ ಬಲಿ ಪಡೆದಿದ್ದು ಸಿಬ್ಬಂದಿಗೆ ಭೀತಿ ಹುಟ್ಟಿಸಿರೋದು ಮಾತ್ರ ನಿಜ.

ಇದನ್ನೂ ಓದಿ: Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಆಶಾತಾಯಂದಿರ ಎದೀಗೆ ಹೊಟ್ಟೀಗೆ ಬೇಕಾಗಿರೂದು ಚಪ್ಪಾಳಿ, ಘಂಟಿ ಸಪ್ಪಳಲ್ರೀ…