ಯುವಕರೇ ಎಚ್ಚರ! ಕೊರೊನಾ ನನ್ನ ಬಳಿ ಸುಳಿಯಲ್ಲ ಎಂದು ನಿರ್ಲಕ್ಷಿಸಬೇಡಿ
ಬೆಂಗಳೂರು: ಯುವಕ, ಯುವತಿಯರೇ ಎಚ್ಚರ! ಕೊರೊನಾದಿಂದ ವೃದ್ಧರಿಗೆ ಅಪಾಯ, ನಮಗೆ ಏನಾಗಲ್ಲ ಅನ್ಕೊಂಡ್ರಾ? ಕೊರೊನಾ ನನ್ನ ಹತ್ತಿರ ಸುಳಿಯಲ್ಲ ಅನ್ಕೊತಿದೀರಾ? ನಿಮ್ಮ ನಿರ್ಲಕ್ಷ್ಯವೇ ರಾಜ್ಯವನ್ನ ಅಪಾಯಕ್ಕೆ ತಳ್ಳುತ್ತಿದೆ! ರಾಜ್ಯದಲ್ಲಿ ವೃದ್ಧರು ಮಾತ್ರವಲ್ಲ, ಯುವಕರಿಂದಲೇ ಕೊರೊನಾ ಕೇಸ್ ಹೆಚ್ಚಳವಾಗಿದೆ. ಇಲ್ಲಿವರೆಗೆ ವೃದ್ಧರಲ್ಲಿ ಮಾತ್ರ ಕೊರೊನಾ ಹೆಚ್ಚಾಗಿ ಕಾಣಿಸಿಕೊಳ್ತಿದೆ ಎನ್ನಲಾಗ್ತಿತ್ತು. ಆದ್ರೀಗ ಆರೋಗ್ಯ ಇಲಾಖೆಯ ವರದಿ ಆತಂಕ ಮೂಡಿಸಿದೆ. ಯುವ ಸಮುದಾಯದಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಇಮ್ಯೂನಿಟಿ ಪವರ್ ಹೆಚ್ಚಾಗಿದ್ರೂ ಯುವಕರಿಗೆ ಸೋಂಕು ಹರಡುತ್ತಿದೆ. 20-30 ವರ್ಷದ 203 ಜನರಲ್ಲಿ […]

ಬೆಂಗಳೂರು: ಯುವಕ, ಯುವತಿಯರೇ ಎಚ್ಚರ! ಕೊರೊನಾದಿಂದ ವೃದ್ಧರಿಗೆ ಅಪಾಯ, ನಮಗೆ ಏನಾಗಲ್ಲ ಅನ್ಕೊಂಡ್ರಾ? ಕೊರೊನಾ ನನ್ನ ಹತ್ತಿರ ಸುಳಿಯಲ್ಲ ಅನ್ಕೊತಿದೀರಾ? ನಿಮ್ಮ ನಿರ್ಲಕ್ಷ್ಯವೇ ರಾಜ್ಯವನ್ನ ಅಪಾಯಕ್ಕೆ ತಳ್ಳುತ್ತಿದೆ! ರಾಜ್ಯದಲ್ಲಿ ವೃದ್ಧರು ಮಾತ್ರವಲ್ಲ, ಯುವಕರಿಂದಲೇ ಕೊರೊನಾ ಕೇಸ್ ಹೆಚ್ಚಳವಾಗಿದೆ.
ಇಲ್ಲಿವರೆಗೆ ವೃದ್ಧರಲ್ಲಿ ಮಾತ್ರ ಕೊರೊನಾ ಹೆಚ್ಚಾಗಿ ಕಾಣಿಸಿಕೊಳ್ತಿದೆ ಎನ್ನಲಾಗ್ತಿತ್ತು. ಆದ್ರೀಗ ಆರೋಗ್ಯ ಇಲಾಖೆಯ ವರದಿ ಆತಂಕ ಮೂಡಿಸಿದೆ. ಯುವ ಸಮುದಾಯದಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಇಮ್ಯೂನಿಟಿ ಪವರ್ ಹೆಚ್ಚಾಗಿದ್ರೂ ಯುವಕರಿಗೆ ಸೋಂಕು ಹರಡುತ್ತಿದೆ.
20-30 ವರ್ಷದ 203 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ರೆ, 30-40 ವರ್ಷದ ವಯಸ್ಸಿನವರಲ್ಲಿ 191 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇನ್ನು 40-50 ವರ್ಷದ 115 ಜನರಿಗೆ ಕೊರೊನಾ ಅಟ್ಯಾಕ್ ಆಗಿದ್ದು, 50-60 ವರ್ಷದ 83 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 60 ವರ್ಷ ಮೇಲ್ಪಟ್ಟ 115 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು ಆರೋಗ್ಯ ಇಲಾಖೆಯ ಈ ವರದಿ ಆತಂಕ ಮೂಡಿಸಿದೆ.
