ಮೈಸೂರು: ಜಿಲ್ಲೆಯ ಕೊರೊನಾ ಸ್ಥಿತಿಗತಿ ಬಗ್ಗೆ ಫೇಸ್ಬುಕ್ ಲೈವ್ ಮೂಲಕ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದ್ದಾರೆ. ಲಸಿಕೆ ನಿರ್ವಹಣೆಗೆ ಜಿಲ್ಲಾಮಟ್ಟದ ಅಧಿಕಾರಿಗಳ ನೇಮಕ ಮಾಡಲಾಗಿದೆ. ಕೊರೊನಾ ವಾರಿಯರ್ಸ್ 20 ಗುಂಪುಗಳ ನೇಮಕ ಮಾಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ 34 ಸಾವಿರ ಡೋಸ್ ಲಸಿಕೆ ಲಭ್ಯವಿದೆ. ಮೊದಲು ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಿಕೆ ಕೈಗೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.
2ನೇ ಹಂತದಲ್ಲಿ ಆದ್ಯತೆಯ 18 ವರ್ಗಗಳ ಪಟ್ಟಿ ಮಾಡಲಾಗಿದೆ. ಮುಂದಿನ ವಾರ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು. 18ರಿಂದ 44 ವರ್ಷದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಿಕೆ ಹಮ್ಮಿಕೊಳ್ಳಲಾಗುವುದು. ಜೆಎಸ್ಎಸ್, ಅಪೋಲೊ, ಭಾನವಿ, ಗೋಪಾಲಗೌಡ, ಆಶಾಕಿರಣ, ಬೃಂದಾವನ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ ಲಸಿಕೆ ಒದಗಿಸಲಾಗುವುದು ಎಂದು ಹೇಳಿದರು.
ಮೈಸೂರು ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ದಾಸ್ತಾನಿದೆ ಎಂದು ತಿಳಿಸಿದ ರೋಹಿಣಿ ಸಿಂಧೂರಿ, ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು. ಫೇಸ್ಬುಕ್ ಲೈವ್ನಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿದರು.
ಕರ್ನಾಟಕ ಕೊರೊನಾ ಸೋಂಕಿತರ ವಿವರ
ಕರ್ನಾಟಕದಲ್ಲಿ ಇಂದು (ಮೇ 23) ಹೊಸದಾಗಿ 25,979 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24,24,904ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 19,26,615 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 626 ಜನ ಸಾವನ್ನಪ್ಪಿದ್ದಾರೆ. ತನ್ಮೂಲಕ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 25282 ಜನರ ಸಾವು ಸಂಭವಿಸಿದಂತಾಗಿದೆ. 4,72,986 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಜಿಲ್ಲಾವಾರು ಕೊರೊನಾ ಸೋಂಕಿತರ ವಿವರ
ಬಾಗಲಕೋಟೆ 218, ಬಳ್ಳಾರಿ 1190, ಬೆಳಗಾವಿ 1066, ಬೆಂಗಳೂರು ಗ್ರಾಮಾಂತರ 400, ಬೆಂಗಳೂರು ನಗರ 7494, ಬೀದರ್ 49, ಚಾಮರಾಜನಗರ 407, ಚಿಕ್ಕಬಳ್ಳಾಪುರ 613, ಚಿಕ್ಕಮಗಳೂರು 577, ಚಿತ್ರದುರ್ಗ 365, ದಕ್ಷಿಣ ಕನ್ನಡ 899, ದಾವಣಗೆರೆ 363, ಧಾರವಾಡ 858, ಗದಗ 371, ಹಾಸನ 1618, ಹಾವೇರಿ 243, ಕಲಬುರಗಿ 234, ಕೊಡಗು 329, ಕೋಲಾರ 439, ಕೊಪ್ಪಳ 356, ಮಂಡ್ಯ 643, ಮೈಸೂರು 2222, ರಾಯಚೂರು 540, ರಾಮನಗರ 279, ಶಿವಮೊಗ್ಗ 643, ತುಮಕೂರು 1269, ಉಡುಪಿ 909, ಉತ್ತರ ಕನ್ನಡ 862, ವಿಜಯಪುರ 246, ಯಾದಗಿರಿ ಜಿಲ್ಲೆಯಲ್ಲಿ ಇಂದು 277 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ
Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ
Published On - 8:52 pm, Sun, 23 May 21