ಭಾರತದಲ್ಲೀಗ ರಿವೇಂಜ್ ಟ್ರಾವೆಲ್! ಪಂಜರದಿಂದ ಹೊರಬಂದ ಗಿಳಿಯಂತೆ ಸುತ್ತಾಡಬೇಡಿ, ಕೊರೊನಾ 3ನೇ ಅಲೆ ಎದುರಿಗೇ ಇದೆ!

| Updated By: ಸಾಧು ಶ್ರೀನಾಥ್​

Updated on: Jul 09, 2021 | 3:34 PM

Covid Third Wave: ಈಗ ಭಾರತದಲ್ಲಿ ಜನರ ಸ್ಥಿತಿಯೂ ಅದೇ ರೀತಿ ಆಗಿದೆ. ಲಾಕ್ ಡೌನ್ ವಿಧಿಸಿ ಮನೆಯೊಳಗೆ ಬಂಧಿಯಾಗುವಂತೆ ಮಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವಂತೆ, ಲಾಕ್ ಡೌನ್ ನಿರ್ಬಂಧ ತೆರವುಗೊಳಿಸುತ್ತಿದ್ದಂತೆ, ಸಂಚಾರ ಮಾಡುವುದನ್ನು ರಿವೇಂಜ್ ಟ್ರಾವೆಲ್ ಅಂತಾರೆ. ಈಗ ಭಾರತದಲ್ಲಿ ಕೊರೊನಾ ಲಾಕ್ ಡೌನ್ ನಿರ್ಬಂಧ ತೆರವುಗೊಳಿಸಿದ ಬಳಿಕ ಜನರು ಈಗ ರೀವೇಂಜ್ ಟ್ರಾವೆಲ್ ಮಾಡುತ್ತಿದ್ದಾರೆ.

ಭಾರತದಲ್ಲೀಗ ರಿವೇಂಜ್ ಟ್ರಾವೆಲ್! ಪಂಜರದಿಂದ ಹೊರಬಂದ ಗಿಳಿಯಂತೆ ಸುತ್ತಾಡಬೇಡಿ, ಕೊರೊನಾ 3ನೇ ಅಲೆ ಎದುರಿಗೇ ಇದೆ!
ಭಾರತದಲ್ಲಿ ಈಗ ರಿವೇಂಜ್ ಟ್ರಾವೆಲ್! ಪಂಜರದಿಂದ ಹೊರಬಂದ ಗಿಳಿಯಂತೆ ಸುತ್ತಾಡಬೇಡಿ, ಕೊರೊನಾ 3ನೇ ಅಲೆ ಎದುರಿಗೇ ಇದೆ!
Follow us on

ಭಾರತದಲ್ಲಿ ಈಗ ಜನರು ರೀವೇಂಜ್ ಟ್ರಾವೆಲ್ ಮಾಡುತ್ತಿದ್ದಾರೆ. ಒಬ್ಬರ ಮೇಲೆ ಮತ್ತೊಬ್ಬರಿಗೆ ದ್ವೇಷ ಬೇರೆ ಬೇರೆ ಕಾರಣಗಳಿಗೆ ಇರಬಹುದು. ಆದರೆ, ಇದ್ಯಾವುದು, ರೀವೇಂಜ್ ಟ್ರಾವೆಲ್ ಅಂತ ನೀವು ಯೋಚನೆ ಮಾಡುತ್ತಿರಬಹುದು. ರೀವೇಂಜ್ ಟ್ರಾವೆಲ್ ನಿಂದ ಭಾರತದಲ್ಲಿ ಈಗ ಪ್ರಧಾನಿ ಮೋದಿಗೂ ಚಿಂತೆ ಶುರುವಾಗಿದೆ. ಪ್ರಧಾನಿ ಮೋದಿ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ರೀವೇಂಜ್ ಟ್ರಾವೆಲ್ ಅಂದರೇ ಏನು? ಇದಕ್ಕೆ ಪ್ರಧಾನಿ ಮೋದಿ ಏಕೆ ಕಳವಳ ವ್ಯಕ್ತಪಡಿಸಿದ್ದರು ಎನ್ನುವುದರ ಡೀಟೈಲ್ಸ್ ಇಲ್ಲಿದೆ.

ಭಾರತದಲ್ಲಿ ಈಗ ರಿವೇಂಜ್ ಟ್ರಾವೆಲ್ ನಡೆಯುತ್ತಿದೆ. ರೀವೇಂಜ್ ಟ್ರಾವೆಲ್ ಬಗ್ಗೆ ಕಳೆದ ಒಂದು ವರ್ಷದಿಂದ ಪ್ರಸ್ತಾಪವಾಗುತ್ತಿದೆ. ಭಾರತದಲ್ಲಿ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಲಾಕ್ ಡೌನ್ ವಿಧಿಸಲಾಯಿತು. ಆಗ ದೇಶದ ಜನರೆಲ್ಲಾ ಮನೆಯೊಳಗೆ ಜೀವನ ಕಳೆಯಬೇಕಾದ ಅನಿವಾರ್ಯತೆ ಇತ್ತು. ಲಾಕ್ ಡೌನ್ ನಿಯಮ ಸಡಿಲಗೊಳಿಸುತ್ತಿದ್ದಂತೆ, ಜನರು ಮತ್ತೆ ಸ್ವಾತಂತ್ರ್ಯ ಸಿಕ್ಕಂತೆ ಪ್ರವಾಸಿ ತಾಣಗಳಿಗೆ ಬಾರಿ ಸಂಖ್ಯೆಯಲ್ಲಿ ಲಗ್ಗೆ ಇಟ್ಟಿದ್ದರು. ಗಿಳಿಯನ್ನು ಪಂಜರದಲ್ಲಿ ಬಂಧಿಸಿಟ್ಟಿರುತ್ತಾರೆ. ಪಂಜರದಿಂದ ಗಿಳಿಯನ್ನು ಹೊರಗೆ ಬಿಡುತ್ತಿದ್ದಂತೆ, ಅದು ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿ ಎಲ್ಲೆಂದರಲ್ಲಿ ಹಾರಾಟ ನಡೆಸುತ್ತೆ.

ಈಗ ಭಾರತದಲ್ಲಿ ಜನರ ಸ್ಥಿತಿಯೂ ಅದೇ ರೀತಿ ಆಗಿದೆ. ಲಾಕ್ ಡೌನ್ ವಿಧಿಸಿ ಮನೆಯೊಳಗೆ ಬಂಧಿಯಾಗುವಂತೆ ಮಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವಂತೆ, ಲಾಕ್ ಡೌನ್ ನಿರ್ಬಂಧ ತೆರವುಗೊಳಿಸುತ್ತಿದ್ದಂತೆ, ಸಂಚಾರ ಮಾಡುವುದನ್ನು ರಿವೇಂಜ್ ಟ್ರಾವೆಲ್ ಅಂತಾರೆ. ಈಗ ಭಾರತದಲ್ಲಿ ಕೊರೊನಾ ಲಾಕ್ ಡೌನ್ ನಿರ್ಬಂಧ ತೆರವುಗೊಳಿಸಿದ ಬಳಿಕ ಜನರು ಈಗ ರೀವೇಂಜ್ ಟ್ರಾವೆಲ್ ಮಾಡುತ್ತಿದ್ದಾರೆ.

ಭಾರತದಲ್ಲಿ ಈಗ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಜನರು ಪ್ರವಾಸಿ ತಾಣಗಳಿಗೆ ಲಗ್ಗೆ ಹಾಕಿದ್ದಾರೆ. ಉತ್ತರ ಭಾರತಕ್ಕೆ ಮಾನ್ಸೂನ್ ಮಳೆ ಎಂಟ್ರಿಯಾಗುವುದು ಸ್ಪಲ್ಪ ವಿಳಂಬವಾಗಿದೆ. ಬೇಸಿಗೆಯ ಬಿಸಿಲಿನಿಂದ ಕಾದು, ಬೆಂದಿದ್ದ ಜನರು ಉತ್ತರ ಭಾರತದ ಹಿಲ್ ಸ್ಟೇಷನ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಹಿಮಾಚಲ ಪ್ರದೇಶದ ಕುಲು, ಮನಾಲಿ, ಶಿಮ್ಲಾ ಹಾಗೂ ಉತ್ತರಾಖಂಡ್ ರಾಜ್ಯದ ಮಸ್ಸೂರಿ, ನೈನಿತಾಲ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಲಾಕ್ ಡೌನ್ ನಿರ್ಬಂಧ ಸಡಿಲಿಕೆಯಾಗುತ್ತಿದ್ದಂತೆ, ಪ್ರವಾಸಿ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಏಕಕಾಲಕ್ಕೆ ಜನರು ಲಗ್ಗೆ ಹಾಕಿರುವುದೇ ರಿವೇಂಜ್ ಟ್ರಾವೆಲ್.

ರಿವೇಂಜ್ ಟ್ರಾವೆಲ್ ನಿಂದ ಭಾರತದಲ್ಲಿ ಮತ್ತೆ ಕೊರೊನಾ ವೈರಸ್ ಹರಡುವ ಭೀತಿ ಕೂಡ ಇದೆ. ದೇಶದಲ್ಲಿ ಲಾಕ್ ಡೌನ್ ನಿಯಮವನ್ನು ಸಡಿಲಗೊಳಿಸಲಾಗಿದೆ. ಆದರೆ, ಕೊರೊನಾ ವೈರಸ್ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಕೊರೊನಾ ವೈರಸ್ ನ 2ನೇ ಅಲೆಯ ತೀವ್ರತೆ ತಗ್ಗಿದೆ. ಆದರೇ, ಕೊರೊನಾದ ಮತ್ತೊಂದು ಅಲೆ ಬರುವ ಭೀತಿ ಇದೆ. ಕೊರೊನಾದ ನಿಯಂತ್ರಣದಲ್ಲಿ ಸಾಧಿಸಿರುವ ಮೇಲುಗೈಯನ್ನು ಜನರ ಈ ರೀತಿಯ ವರ್ತನೆಯಿಂದ ಕಳೆದುಕೊಳ್ಳಬಹುದು ಎಂದು ಕೇಂದ್ರದ ಆರೋಗ್ಯ ಇಲಾಖೆ ಹೇಳಿದೆ. ಜನರು ಹಿಲ್ ಸ್ಟೇಷನ್ ಗಳಿಗೆ ಮಾಸ್ಕ್ ಧರಿಸದೇ, ಭೌತಿಕ ಅಂತರ ಕಾಪಾಡದೇ ಭೇಟಿ ನೀಡುವುದರಿಂದ ವೈರಸ್ ಹರಡಲು ಅವಕಾಶ ಸಿಗುತ್ತೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹೇಳಿದ್ದಾರೆ.

ಜುಲೈ 8ರ ಗುರುವಾರ ಕೂಡ ಉತ್ತರಾಖಂಡ್ ಡೆಹರಾಡೂನ್ ಬಳಿ ಇರುವ ಮಸ್ಸೂರಿ ಕೆಂಫ್ಟಿ ಫಾಲ್ಸ್ ಗೂ ಸಾವಿರಾರು ಜನರು ಏಕಕಾಲಕ್ಕೆ ಲಗ್ಗೆ ಹಾಕಿ ಫಾಲ್ಸ್ ನೀರಿನಲ್ಲಿ ಮಿಂದೆದಿದ್ದಾರೆ. ಫಾಲ್ಸ್ ನಲ್ಲಿ ಯಾರೊಬ್ಬರು ಮಾಸ್ಕ್ ಧರಿಸಿಲ್ಲ. ಭೌತಿಕ ಅಂತರವನ್ನು ಕಾಪಾಡಿಲ್ಲ. ಜನರೆಲ್ಲರೂ ಎಂಜಾಯ್ ಮಾಡಲೆಂದೇ ಫಾಲ್ಸ್ ಗೆ ಹೋಗಿದ್ದಾರೆ. ಅಂಥ ಕಡೆಯೂ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಪಾಡಲು ಆಗುತ್ತಾ ಎಂದು ಪ್ರವಾಸಿಗರು ಕೇಳಬಹುದು. ಆದರೆ, ಇದು ಕೊರೊನಾ ವೈರಸ್ ಹರಡಲು ಕಾರಣವಾಗಬಹುದು ಎಂಬ ಭೀತಿಯೂ ಆರೋಗ್ಯ ತಜ್ಞರನ್ನು ಕಾಡುತ್ತಿದೆ.

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9)

ಹೀಗಾಗಿಯೇ ಉತ್ತರಾಖಂಡ್ ರಾಜ್ಯದ ತೆಹ್ರಿ ಘರವಾಲ್ ಜಿಲ್ಲಾಡಳಿತ, ಈಗ ಮಸ್ಸೂರಿಯ ಕೆಂಫ್ಟಿ ವಾಟರ್ ಫಾಲ್ಸ್ ಗೆ 50 ಜನರು ಮಾತ್ರ ಭೇಟಿ ನೀಡಬೇಕೆಂದು ನಿರ್ಬಂಧ ವಿಧಿಸಿದೆ. ಜನರು ಫಾಲ್ಸ್ ಬಳಿ ಅರ್ಧಗಂಟೆಗಿಂತ ಹೆಚ್ಚಿನ ಸಮಯ ಇರಬಾರದು. ಪ್ರವಾಸಿಗರ ಮೇಲೆ ನಿಗಾ ವಹಿಸಲು ಚೆಕ್ ಪೋಸ್ಟ್ ಆರಂಭಿಸಲಾಗಿದೆ ಎಂದು ತೆಹ್ರಿ ಘರವಾಲ್ ಜಿಲ್ಲಾಡಳಿತ ಹೇಳಿದೆ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು ಹಿಮಾಚಲ ಪ್ರದೇಶ, ಉತ್ತರಾಖಂಡ್ ರಾಜ್ಯಗಳಿಗೆ ಪ್ರವಾಸಿ ಸ್ಥಳಗಳಿಗೆ ಹೆಚ್ಚಿನ ಜನರು ಭೇಟಿ ನೀಡದಂತೆ ನಿರ್ಬಂಧ ವಿಧಿಸಬೇಕು, ಜನರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಭೌತಿಕ ಅಂತರ ಕಾಪಾಡುವಂತೆ ನೋಡಿಕೊಳ್ಳಬೇಕೆಂದು ಹೇಳಿದೆ.

ಜನರ ರೀವೇಂಜ್ ಟ್ರಾವೆಲ್ ಕೇವಲ ಆರೋಗ್ಯ ತಜ್ಞರನ್ನು ಮಾತ್ರವಲ್ಲ, ದೇಶದ ಪ್ರಧಾನಿ ಮೋದಿ ಅವರನ್ನ ಚಿಂತೆಗೀಡು ಮಾಡಿದೆ. ನೆನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಜನರು ಮಾಸ್ಕ್ ಧರಿಸದೇ, ಭೌತಿಕ ಅಂತರ ಕಾಪಾಡದೇ ಓಡಾಡುತ್ತಿರುವುದು ಸಂತೋಷದ ವಿಚಾರವಲ್ಲ. ಇದು ನಮ್ಮಲ್ಲಿ ಭಯವನ್ನು ಸೃಷ್ಟಿಸಬೇಕು. ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು.

ಒಂದು ಸಣ್ಣ ತಪ್ಪು, ದೊಡ್ಡ ಅಪಾಯಕ್ಕೆ ನಾಂದಿ ಹಾಡಲಿದೆ. ಕೊರೊನಾದ ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಲಿದೆ. ಕೊರೊನಾ ಇನ್ನೂ ನಿರ್ಮೂಲನೆ ಆಗಿಲ್ಲ. ಬಹಳಷ್ಟು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ವೈರಸ್ ರೂಪಾಂತರವಾಗುತ್ತಿದೆ ಎಂದು ಪ್ರಧಾನಿ ಮೋದಿ ಕ್ಯಾಬಿನೆಟ್ ಸಭೆಯಲ್ಲಿ ಹೇಳಿದ್ದಾರೆ. ಸಚಿವರು, ಜನರು ಮುನ್ನೆಚ್ಚರಿಕೆ ವಹಿಸಲು ಮನವರಿಕೆ ಮಾಡಬೇಕು ಎಂದು ಹೇಳಿದ್ದಾರೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿರುವುದಕ್ಕೆ ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದಾರೆ.

ರಿವೇಂಜ್ ಟ್ರಾವೆಲ್ ನಿಂದ ಟೂರಿಸ್ಟ್ ಸ್ಥಳಗಳೇ ಕೊರೊನಾ ಹಾಟ್ ಸ್ಪಾಟ್ ಗಳಾಗಬಹುದು. ಹೀಗಾಗಿ ಈಗ ಜನರೇ ಎಚ್ಚರ ವಹಿಸಬೇಕು. ನಮ್ಮ ಜೀವ ನಮ್ಮ ಕೈಯಲ್ಲೇ ಇದೆ. ಕೊರೊನಾ ನಮಗೆ ಬರದಂತೆ ತಡೆಯುವ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು. ಜನರು ಪ್ರವಾಸಿ ಸ್ಥಳಗಳಲ್ಲಿ ಜನದಟ್ಟಣೆಯ ಸ್ಥಳಗಳಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಟೂರಿಸ್ಟ್ ಸ್ಥಳಗಳಿಗೆ ಭೇಟಿ ನೀಡಿ, ಕೊರೊನಾವನ್ನು ಫ್ರಿಯಾಗಿ ಮನೆಗೆ ತೆಗೆದುಕೊಂಡು ಹೋಗಬಾರದು.

ಮನುಷ್ಯರು ಸಮಾಜ ಜೀವಿಗಳು. ಸಮಾಜದಲ್ಲಿ ಜೀವಿಸಲು ಬಯಸುತ್ತಾರೆ. ಮನುಷ್ಯ ಏಕಾಂಗಿಯಾಗಿ, ಬಂಧಿಯಾಗಿ ಜೀವಿಸಲು ಬಯಸಲ್ಲ. ಹೀಗಾಗಿ ಲಾಕ್ ಡೌನ್ ನಿರ್ಬಂಧ ತೆರವು ಆಗುತ್ತಿದ್ದಂತೆ, ರಿಲ್ಯಾಕ್ಸ್ ಆಗಲು ಪ್ರವಾಸಿ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ನುಗ್ಗಿದ್ದಾರೆ. ಆದರೇ, ಕೊರೊನಾ ನಿಯಂತ್ರಣ, ನಿರ್ವಹಣೆ ಬಗ್ಗೆಯೂ ಸ್ಪಲ್ಪ ಗಮನ ಹರಿಸಬೇಕು.

ಆದರೆ, ರಿವೇಂಜ್ ಟ್ರಾವೆಲ್, ಪರಿಕಲ್ಪನೆಯು ಇತ್ತೀಚೆಗೆ ಬಂದಿರಬಹುದು. ರಿವೇಂಜ್ ಖರ್ಚು ಪರಿಕಲ್ಪನೆ 1980ರಲ್ಲೂ ಇತ್ತು. 1980ರಲ್ಲಿ ಚೀನಾದಲ್ಲಿ ಜನರು ಜನರ ಖರ್ಚಿನ ನಿರ್ಬಂಧ ತೆರವುಗೊಳಿಸಿದ ಬಳಿಕ ರಿವೇಂಜ್ ಖರ್ಚು ಮಾಡಿದ ಘಟನೆಯೂ ನಡೆದಿತ್ತು. ಚೀನಾದ ಗುಂಜವ್ ಪ್ರಾಂತ್ಯದ ಹೆರ್ಮನ್ ಸ್ಟೋರ್ ನಲ್ಲಿ ಒಂದೇ ದಿನ ಜನರ ರಿವೇಂಜ್ ಖರ್ಚಿನ ಪರಿಣಾಮ, 2.4 ಮಿಲಿಯನ್ ಯೂರೋ ವ್ಯಾಪಾರ ನಡೆದಿತ್ತು.

(coronavirus hotspots hill stations Health Ministry has expressed concern dangerous Revenge travel surfaces in india)