AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಕ್ ಹಾಕಿ ಎಂದಿದ್ದಕ್ಕೆ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ.. 6 ಜನರ ಬಂಧನ

ಜೂನ್ 28ರಂದು ಮಾಸ್ಕ್ ಹಾಕಿ ಎಂದಿದ್ದಕ್ಕೆ ಕರ್ತವ್ಯನಿರತ ಹೆಚ್‌ಸಿ ಗುರುಪಾದ್ ಮೇಲೆ ಮಹಿಳೆಯರು ಸೇರಿ ಐವರು ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿತ್ತು. ಚೀತಾ ವಾಹನ ಬೀಳಿಸಿ ಅಟ್ಟಾಡಿಸಿ ಹಲ್ಲೆ ಮಾಡಿದ್ದರು.

ಮಾಸ್ಕ್ ಹಾಕಿ ಎಂದಿದ್ದಕ್ಕೆ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ.. 6 ಜನರ ಬಂಧನ
ಸಂಗ್ರಹ ಚಿತ್ರ
TV9 Web
| Edited By: |

Updated on: Jul 09, 2021 | 2:52 PM

Share

ಬೆಂಗಳೂರು: ಮಾಸ್ಕ್ ಧರಿಸಲು ಹೇಳಿದ್ದಕ್ಕೆ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿದ್ದ ಕೇಸ್ಗೆ ಸಂಬಂಧಿಸಿ ಹಲ್ಲೆ ನಡೆಸಿದ್ದ 6 ಜನರನ್ನು ಸೆರೆ ಹಿಡಿಯಲಾಗಿದೆ. ಅರ್ಬಾಜ್ ಖಾನ್, ಏಜಾಜ್ ಖಾನ್, ಸಲ್ಮಾನ್ ಖಾನ್, ಇಜಾಜ್, ಸಮೀನಾ, ಶಂಸದ್ ಬಂಧಿತ ಆರೋಪಿಗಳು. ಪ್ರಮುಖ ಆರೋಪಿ ಮೊಹಮ್ಮದ್‌ಗಾಗಿ ಹುಡುಕಾಟ ನಡೆಯುತ್ತಿದೆ.

ಜೂನ್ 28ರಂದು ಮಾಸ್ಕ್ ಹಾಕಿ ಎಂದಿದ್ದಕ್ಕೆ ಕರ್ತವ್ಯನಿರತ ಹೆಚ್‌ಸಿ ಗುರುಪಾದ್ ಮೇಲೆ ಮಹಿಳೆಯರು ಸೇರಿ ಐವರು ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿತ್ತು. ಚೀತಾ ವಾಹನ ಬೀಳಿಸಿ ಅಟ್ಟಾಡಿಸಿ ಹಲ್ಲೆ ಮಾಡಿದ್ದರು. ಘಟನೆ ಬಳಿಕ ಹೆಡ್ ಕಾನ್ಸ್‌ಟೇಬಲ್ ತಕ್ಷಣವೇ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳೆದ ಕೆಲ ದಿನಗಳ ಹಿಂದೆ ರಾಜಗೋಪಾಲನಗರದಲ್ಲಿ ಪಿಎಸ್ಐ ಓರ್ವರನ್ನು ಅಡ್ಡಗಟ್ಟಿ ದರೋಡೆ ಯತ್ನ ನಡೆದಿತ್ತು. ಹದಿನೈದು ದಿನದ ಅಂತರದಲ್ಲಿ ಇದು ನಗರದಲ್ಲಿ ನಡೆದ ಎರಡನೇ ಪ್ರಕರಣವಾಗಿದೆ. ಜನ ಸಾಮಾನ್ಯರಿಗೆ ಪೊಲೀಸರ ಮೇಲೆ ಭಯವೇ ಇಲ್ಲದಂತಾಗಿದೆ. ಪೊಲೀಸರಿಗೆ ಹಲ್ಲೆ ನಡೆಸುತ್ತಿದ್ದಾರೆ. ಸದ್ಯ ಹಲ್ಲೆ ಮಾಡಿದ 6 ಜನರನ್ನು ಬಂಧಿಸಲಾಗಿದ್ದು ಪ್ರಮುಖ ಆರೋಪಿ ಮೊಹಮ್ಮದ್‌ಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಮಹಿಳಾ ಅಧಿಕಾರಿಯ ಕೂದಲು ಹಿಡಿದು ಜಗ್ಗಿ, ಥಳಿಸಿದ ಮಹಿಳೆ; ‘ನನ್ನನ್ನು ಮುಟ್ಟಲು ನೀನ್ಯಾರು’ ಎಂಬ ಆವಾಜ್​ ಬೇರೆ !