ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಬಿರುಕು ವಿವಾದ: ಕಾವೇರಿ ನೀರಾವರಿ ನಿಗಮ ನೀಡಿರುವ ಅಧಿಕೃತ ಸ್ಪಷ್ಟನೆಯಲ್ಲಿ ಏನಿದೆ?

Cauvery Neeravari Nigama Limited official clarification: ನಿಯಮಿತ ಅವಧಿಗಳಲ್ಲಿ ಪರೀಕ್ಷಿಸಿ ನೀಡಿದ ವರದಿಯಲ್ಲಿ ಉಲ್ಲೇಖಿಸಿರುವಂತೆ ಬಾಡಿ ವಾಲ್‌ನಲ್ಲಿ ಯಾವುದೇ ಬಿರುಕು ಇಲ್ಲದಿರುವುದು ಖಚಿತಪಟ್ಟಿದೆ ಎಂದು ಕಾವೇರಿ ನೀರಾವರಿ ನಿಗಮ ವತಿಯಿಂದ ಸ್ಪಷ್ಟನೆ ನಿಡಲಾಗಿದೆ. 

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಬಿರುಕು ವಿವಾದ: ಕಾವೇರಿ ನೀರಾವರಿ ನಿಗಮ ನೀಡಿರುವ ಅಧಿಕೃತ ಸ್ಪಷ್ಟನೆಯಲ್ಲಿ ಏನಿದೆ?
ಕೃಷ್ಣರಾಜ ಸಾಗರ ಜಲಾಶಯ (ಸಂಗ್ರಹ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 09, 2021 | 2:13 PM

ಮಂಡ್ಯ: ತೀವ್ರ ಚರ್ಚೆ ಮತ್ತು ವಿವಾದಕ್ಕೆ ಗ್ರಾಸವಾಗಿರುವ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ (ಕೆಆರ್‌ಎಸ್ ಡ್ಯಾಂ) ಬಿರುಕು ಬಿಟ್ಟಿರುವ ವಿಚಾರವಾಗಿ ಕಾವೇರಿ ನೀರಾವರಿ ನಿಗಮವು ಅಧಿಕೃತ ಸ್ಪಷ್ಟನೆ ನೀಡಿದೆ.  ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ ಸದಸ್ಯರು ಹಾಗೂ ಇಲಾಖಾ ಮುಖ್ಯಸ್ಥರು ನಿಯಮಿತ ಅವಧಿಗಳಲ್ಲಿ ಪರೀಕ್ಷಿಸಿದ್ದಾರೆ. ಅಣೆಕಟ್ಟು ಭದ್ರತಾ ವಿಭಾಗವು KERSಗೆ ವರದಿ ಸಲ್ಲಿಸಿದೆ. ಡ್ಯಾಂ ಸುರಕ್ಷತೆ ಬಗ್ಗೆ ಪರಾಮರ್ಶೆ ಕಾರ್ಯ ಕೈಗೊಳ್ಳಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ ಜೈಪ್ರಕಾಶ್​ ಅವರು ಮಾಧ್ಯಮ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ನಿಯಮಿತ ಅವಧಿಗಳಲ್ಲಿ ಪರೀಕ್ಷಿಸಿ ನೀಡಿದ ವರದಿಯಲ್ಲಿ ಉಲ್ಲೇಖಿಸಿರುವಂತೆ ಬಾಡಿ ವಾಲ್‌ನಲ್ಲಿ ಯಾವುದೇ ಬಿರುಕು ಇಲ್ಲದಿರುವುದು ಖಚಿತಪಟ್ಟಿದೆ. ಇನ್ನು. ಕೆಆರ್‌ಎಸ್ ಡ್ಯಾಂನ ಯಾವುದೇ ವಿನ್ಯಾಸದಲ್ಲಿ ಸಮಸ್ಯೆ ಇಲ್ಲ. ಕೆಆರ್‌ಎಸ್ ಡ್ಯಾಂನಲ್ಲಿ ಯಾವುದೇ ಬಿರುಕುಗಳೂ ಇಲ್ಲ ಎಂದು ಕಾವೇರಿ ನೀರಾವರಿ ನಿಗಮ ವತಿಯಿಂದ ಸ್ಪಷ್ಟನೆ ನಿಡಲಾಗಿದೆ.

ಕೆಆರ್​ಎಸ್ ಅಣೆಕಟ್ಟು ಬಿರುಕು ವಿಚಾರವಾಗಿ ಕಾವೇರಿ ನೀರಾವರಿ ನಿಗಮದಿಂದ (Cauvery Neeravari Nigama Limited) ಅಧಿಕೃತ ಸ್ಪಷ್ಟೀಕರಣ ಸಾರಾಂಶ ಇಲ್ಲಿದೆ:

Suspected breach in KRS Dam Cauvery Neeravari Nigama Limited official clarification

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಬಿರುಕು ವಿವಾದ: ಕಾವೇರಿ ನೀರಾವರಿ ನಿಗಮ ನೀಡಿರುವ ಅಧಿಕೃತ ಸ್ಪಷ್ಟನೆಯಲ್ಲಿ ಏನಿದೆ?

ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ (DSRP) ಸದಸ್ಯರು ಹಾಗೂ ಇಲಾಖಾ ಮುಖ್ಯಸ್ಥರು ಅಣೆಕಟ್ಟೆಯನ್ನು ನಿಯಮಿತ ಅವಧಿಗಳಲ್ಲಿ (Post and pre mansoon inspections) ಪರಿವೀಕ್ಷಿಸಿ ವರದಿಗಳನ್ನು ಅಣಿಕಟ್ಟು ಭದ್ರತಾ ವಿಭಾಗ, ಕೆ.ಇ.ಆರ್.ಎಸ್ ರವರಿಗೆ ಸಲ್ಲಿಸಿ, ಅಣಿಕಟ್ಟೆಯ ಸುರಕ್ಷತೆ ಬಗ್ಗೆ ಪರಾಮರ್ಶೆ ಕಾರ್ಯವನ್ನು ಕೈಗೊಳ್ಳಲಾಗಿದೆ

Body wall ನಲ್ಲಿ ಯಾವುದೇ ತರಹದ ಬಿರುಕುಗಳು ಇಲ್ಲದಿರುವ ಬಗ್ಗೆ Post and pre mansoon inspections ವರದಿಗಳಿಂದ ಖಚಿತವಾಗಿರುತ್ತದೆ

ಅಣಿಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ (DSRP) ಸದಸ್ಯರು ನೀಡಿರುವ ಸಲಹೆಗಳ ಆಧಾರದ ಮೇಲೆ ಅಣಿಕಟ್ಟೆಯ ಬಲವನ್ನು ವೃದ್ಧಿಸಲು ಅವಶ್ಯವಿರುವ ಕಾಮಗಾರಿಗಳನ್ನು DRIP(Dam Rehabilitation & Improvement Programme) Phase-l ಯೋಜನೆಯಡಿಯಲ್ಲಿ cementatious grout ಬಳಸಿ ಅಣಿಕಟ್ಟೆಯ Up stream ಭಾಗದಲ್ಲಿ (131 ಅಡಿ ಮಟ್ಟದಿಂದ 70 ಅಡಿ ಮಟ್ಟದವರೆಗೆ) ಹೊಸದಾಗಿ ಕಟ್ಟಡದ ಕಲ್ಲುಗಳ ಕೀಲುಗಳಿಗೆ Pointing & grouting ಮಾಡಿ ಅಣೆಕಟ್ಟೆಯನ್ನು ಭದ್ರಗೊಳಿಸಲಾಗಿದೆ

ಇದರಿಂದಾಗಿ ಅಣಿಕಟ್ಟೆಯಲ್ಲಿ ಯಾವುದೇ Structural defects ಇರುವುದಿಲ್ಲ ಹಾಗೂ ಯಾವುದೇ ಬಿರುಕುಗಳು ಇರುವುದಿಲ್ಲ

ಅಣಿಕಟ್ಟೆಯ ಪುನಶ್ಚೇತನ ಕಾಮಗಾರಿಗೆ ವಿಶ್ವ ಬ್ಯಾಂಕ್ ಮತ್ತು ಕೇಂದ್ರ ಜಲ ಆಯೋಗದಿಂದ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯು ದೊರಕಿರುತ್ತದೆ

02.07.2021 ರಂದು DRIP consultant ರವರು ಹಾಗೂ ರಾಜ್ಯದ ಗೇಟ್ ಸಲಹಾ ಸಮಿತಿ ಸದಸ್ಯರು ಡ್ಯಾಂ ನ 136 ಗೇಟುಗಳ ಬದಲಾವಣೆ ಕಾಮಗಾರಿಯ ಸ್ಥಳ ಪರಿವೀಕ್ಷಣೆ ನಡೆಸಿರುತ್ತಾರೆ

ಅಣಿಕಟ್ಟೆಯ Body wall ನಲ್ಲಿ ಯಾವುದೇ ತರಹದ Structural defects ಇರುವುದಿಲ್ಲವೆಂದು ತಿಳಿಸಿರುತ್ತಾರೆ.

(Suspected breach in KRS Dam Cauvery Neeravari Nigama Limited official clarification)