ಶಾಲೆ-ಕಾಲೇಜುಗಳಲ್ಲಿ ಕೊರೊನಾ ಸ್ಫೋಟ; ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆ

| Updated By: ಆಯೇಷಾ ಬಾನು

Updated on: Jan 13, 2022 | 9:15 AM

ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೊನಾ‌ ಸ್ಫೋಟಗೊಂಡಿದೆ. 35 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಪೋಷಕರ ಒತ್ತಾಯ ಮೇರೆಗೆ ಪತ್ರ ಬರೆಸಿಕೊಂಡು 35 ಸೋಂಕಿತ ವಿದ್ಯಾರ್ಥಿನಿಯರನ್ನು ಪೋಷಕರ ಜೊತೆ ಕಳಿಸಿಕೊಡಲಾಗಿದೆ.

ಶಾಲೆ-ಕಾಲೇಜುಗಳಲ್ಲಿ ಕೊರೊನಾ ಸ್ಫೋಟ; ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆ
ಪ್ರಾತಿನಿಧಿಕ ಚಿತ್ರ
Follow us on

ಕಲಬುರಗಿ: ರಾಜ್ಯದಲ್ಲಿ ಕೊರೊನಾ ಕಣ್ಣು ಹೆಚ್ಚಾಗಿ ವಿದ್ಯಾರ್ಥಿಗಳ ಮೇಲೆ ಬಿದ್ದಿದೆ. ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸೋಂಕಿತರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ. ಮೊದಲು 18 ಇತ್ತು. ಇದೀಗ ಮತ್ತೆ 16 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ. ವಿವಿಯ ಎರಡೂ ಹಾಸ್ಟೆಲ್ಗಳು ಈಗ ಕಂಟೈನ್ಮೆಂಟ್ ಝೋನ್ಗಳಾಗಿ ಪರಿವರ್ತಿಸಲಾಗಿದೆ. ಜಿಲ್ಲೆಯ ವಿವಿಧ ಶಾಲೆಯ 11 ಮಕ್ಕಳಿಗೂ ಕೊವಿಡ್ ಪಾಸಿಟಿವ್ ವರದಿ ಬಂದಿದೆ.

ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೊನಾ ಸ್ಫೋಟ
ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೊನಾ‌ ಸ್ಫೋಟಗೊಂಡಿದೆ. 35 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಪೋಷಕರ ಒತ್ತಾಯ ಮೇರೆಗೆ ಪತ್ರ ಬರೆಸಿಕೊಂಡು 35 ಸೋಂಕಿತ ವಿದ್ಯಾರ್ಥಿನಿಯರನ್ನು ಪೋಷಕರ ಜೊತೆ ಕಳಿಸಿಕೊಡಲಾಗಿದೆ. 7 ನೇ ತರಗತಿಯಿಂದ 12ನೇ ತರಗತಿವರೆಗೆ ಒಟ್ಟು 723 ವಿದ್ಯಾರ್ಥಿಗಳಿದ್ರು. 9ನೇ ತರಗತಿವರೆಗೆ ರಜೆ ಹಿನ್ನೆಲೆ 431 ವಿದ್ಯಾರ್ಥಿಗಳು ಮನೆಗೆ ತೆರಳಿದ್ದಾರೆ. ವಸತಿ ಶಾಲೆಯ ಒಟ್ಟು 136 ಜನರಿಗೆ ಕೊವಿಡ್ ಸೋಂಕು ತಗುಲಿದೆ. 77 ವಿದ್ಯಾರ್ಥಿಗಳು, 12 ಬೋಧಕ, 12 ಬೋಧಕೇತರ ಸಿಬ್ಬಂದಿಗೆ ಕೊವಿಡ್ ದೃಢಪಟ್ಟಿದೆ ಎಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಲಗಿ ತಿಳಿಸಿದ್ದಾರೆ.

ಕೋವಿಡ್ ನಿಯಮ ಗಾಳಿಗೆ ತೂರಿದ ಶಾಲಾ ಆಡಳಿತ ಮಂಡಳಿ
ಶಾಲಾ ಆಡಳಿತ ಮಂಡಳಿ ಕೋವಿಡ್ ರೂಲ್ಸ್ ಗಾಳಿಗೆ ತೂರಿ ಸೋಂಕಿತ ವಿದ್ಯಾರ್ಥಿಗಳನ್ನು ಪೋಷಕರ ಜೊತೆ ಕಳಿಸಿದೆ. ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಿಂದ ಕೋವಿಡ್ ರೂಲ್ಸ್ ಉಲ್ಲಂಘನೆಯಾಗಿದೆ. ಪೋಷಕರಿಂದ ಪತ್ರ ಬರೆಸಿಕೊಂಡು 35 ವಿದ್ಯಾರ್ಥಿಗಳನ್ನು ತಮ್ಮ ತಮ್ಮ ಪೋಷಕರ ಜೊತೆ ಕಳಿಸಿದ್ದಾಗಿ ತಹಶೀಲ್ದಾರ್ ಸೋಮಲಿಂಗಪ್ಪ ಹಲಗಿ ತಿಳಿಸಿದ್ದಾರೆ. ವಸತಿ ಶಾಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ, ಹೊರರಾಜ್ಯಗಳ ವಿದ್ಯಾರ್ಥಿಗಳ ವ್ಯಾಸಂಗ ಮಾಡುತ್ತಿದ್ದು ಸೋಂಕಿತ ವಿದ್ಯಾರ್ಥಿಗಳನ್ನು ಕೊವಿಡ್ ರೂಲ್ಸ್ ಬ್ರೇಕ್ ಮಾಡಿ ಪೋಷಕರ ಜೊತೆ ಕಳಿಸಿದ್ದರಿಂದ ಸೋಂಕು ವ್ಯಾಪಿಸುವ ಭೀತಿ ಎದುರಾಗಿದೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕೆಲವರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ಕೊರೊನಾ ಮತ್ತೆ ವಿಪರೀತ; ಪಾಸಿಟಿವಿಟಿ ರೇಟ್​ ಶೇ.24.3ಕ್ಕೆ ಏರಿಕೆ, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

Published On - 9:09 am, Thu, 13 January 22