Covid 19 Karnataka Update: ಕರ್ನಾಟಕದಲ್ಲಿ 3203 ಮಂದಿಗೆ ಕೊರೊನಾ ಸೋಂಕು, 94 ಜನರ ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 01, 2021 | 7:35 PM

ಬೆಂಗಳೂರಲ್ಲಿ ಇಂದು ಒಂದೇ ದಿನ 676 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 18 ಜನರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನಕ್ಕೆ ಬಂದಿದೆ. ಇದು ಆಶಾದಾಯಕ ಬೆಳವಣಿಗೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

Covid 19 Karnataka Update: ಕರ್ನಾಟಕದಲ್ಲಿ 3203 ಮಂದಿಗೆ ಕೊರೊನಾ ಸೋಂಕು, 94 ಜನರ ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ 3,203 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 94 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಇಂದು ಒಂದೇ ದಿನ 676 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 18 ಜನರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನಕ್ಕೆ ಬಂದಿದೆ. ಇದು ಆಶಾದಾಯಕ ಬೆಳವಣಿಗೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿಂದು ಹೊಸದಾಗಿ 3,203 ಜನರಿಗೆ ಕೊರೊನಾ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 28,47,013ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 27,46,544 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 65,312 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 94 ಜನರು ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 35,134ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 676 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 18 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,14,235ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 15,644 ಜನರು ಸಾವನ್ನಪ್ಪಿದ್ದಾರೆ. ನಗರದ 12,14,235 ಸೋಂಕಿತರ ಪೈಕಿ 11,65,074 ಜನರು ಗುಣಮುಖರಾಗಿದ್ದಾರೆ. 33,516 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದಲ್ಲಿಂದು ಹೊಸದಾಗಿ 3,203 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 676 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಾಗಲಕೋಟೆ 4, ಬಳ್ಳಾರಿ 34, ಬೆಳಗಾವಿ 114, ಬೆಂಗಳೂರು ಗ್ರಾಮಾಂತರ 75, ಬೀದರ್ 3, ಚಾಮರಾಜನಗರ 75, ಚಿಕ್ಕಬಳ್ಳಾಪುರ 40, ಚಿಕ್ಕಮಗಳೂರು 98, ಚಿತ್ರದುರ್ಗ 41, ದಕ್ಷಿಣ ಕನ್ನಡ 285, ದಾವಣಗೆರೆ 66, ಧಾರವಾಡ 27, ಗದಗ 15, ಹಾಸನ 281, ಹಾವೇರಿ 18, ಕಲಬುರಗಿ 21, ಕೊಡಗು 167, ಕೋಲಾರ 96, ಕೊಪ್ಪಳ 16, ಮಂಡ್ಯ 97, ಮೈಸೂರು 366, ರಾಯಚೂರು 6, ರಾಮನಗರ 9, ಶಿವಮೊಗ್ಗ 194, ತುಮಕೂರು 157, ಉಡುಪಿ 146, ಉತ್ತರ ಕನ್ನಡ 59, ವಿಜಯಪುರ 11, ಯಾದಗಿರಿ 6 ಜನರಿಗೆ ಸೋಂಕು ದೃಢಪಟ್ಟಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 94 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು, ಅಂದರೆ 18 ಜನರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ 14, ಧಾರವಾಡ 7, ಬಳ್ಳಾರಿ, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಐವರು, ಶಿವಮೊಗ್ಗ, ಮಂಡ್ಯ ತಲಾ ನಾಲ್ವರು, ದಾವಣಗೆರೆ ಜಿಲ್ಲೆಯಲ್ಲಿ ಮೂವರು, ಗದಗ, ಹಾವೇರಿ, ಕೊಡಗು, ತುಮಕೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಇಬ್ಬರು, ಬೀದರ್​, ಚಿಕ್ಕಮಗಳೂರು, ಹಾಸನ, ಕಲಬುರಗಿ, ಕೊಪ್ಪಳ, ವಿಜಯಪುರ, ಉಡುಪಿ ಜಿಲ್ಲೆಯಲ್ಲಿ ಕೊರೊನಾದಿಂದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ 35,134 ಜನರು ಸಾವನ್ನಪ್ಪಿದ್ದಾರೆ.

(Coronavirus Infection Karnataka 3203 Infected 94 Died Due to Covid July 1)

ಇದನ್ನೂ ಓದಿ: ಕೊರೊನಾದಿಂದ ಅನಾಥಳಾದ ಬಾಲಕಿಯನ್ನು ದತ್ತು ಪಡೆಯಲು ನಿರ್ಧರಿಸಿದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ

ಇದನ್ನೂ ಓದಿ: ಆ್ಯಂಟಿ ಕೊರೊನಾ ಟ್ಯಾಗ್ ಧರಿಸಿರುವ ಸಿದ್ದರಾಮಯ್ಯ; ಕೊರೊನಾ ಲಸಿಕೆ ಬಗ್ಗೆ ವಿಪಕ್ಷ ನಾಯಕನ ಪಾಠ

Published On - 7:26 pm, Thu, 1 July 21