ಖಾಕಿ ಬೆನ್ನುಬಿದ್ದ ಕೊರೊನಾ: ಉಡುಪಿಯಲ್ಲಿ ಐವರಿಗೆ ಸೋಂಕು, ಬೆಂಗಳೂರಿನಲ್ಲಿ ಎಷ್ಟು?

ಉಡುಪಿ: ಜಿಲ್ಲೆಯಲ್ಲಿ 5 ಪೊಲೀಸರಿಗೆ ಕರೊನಾ ಪಾಸಿಟಿವ್ ಬಂದಿದೆ. ಶಂಕರನಾರಾಯಣ ಠಾಣೆಯ ಮಹಿಳಾ ಸಿಬ್ಬಂದಿ ಸೇರಿ ಸಶಸ್ತ್ರ ಮೀಸಲು ಪಡೆಯ ನಾಲ್ವರಿಗೆ ವೈರಸ್ ಅಟ್ಯಾಕ್ ಆಗಿದೆ. ಹಾಗಾಗಿ ಶಂಕರನಾರಾಯಣ ಠಾಣೆ ಮತ್ತು ಪೊಲೀಸರ ವಸತಿಗೃಹಗಳು ಕಂಟೈನ್ಮೆಂಟ್ ವಲಯಗಳಾಗಿದೆ. ಚೆಕ್​ ಪೋಸ್ಟ್​ ಮತ್ತು ಕ್ವಾರಂಟೈನ್ ಡ್ಯೂಟಿ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಬೆಂಗಳೂರಿನಲ್ಲೂ ಪೊಲೀಸ್ ಕಾನ್ಸ್​ಟೇಬಲ್​ಗೆ ಸೋಂಕು: ಬೆಂಗಳೂರಿನ ಟಿಪ್ಪುನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಎಆರ್ ಕಾನ್ಸ್​ಟೇಬಲ್​ಗೆ ರೊಟಿನ್ ಚೆಕಪ್‌ನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆಡುಗೋಡಿ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಸೋಂಕಿತ […]

ಖಾಕಿ ಬೆನ್ನುಬಿದ್ದ ಕೊರೊನಾ: ಉಡುಪಿಯಲ್ಲಿ ಐವರಿಗೆ ಸೋಂಕು, ಬೆಂಗಳೂರಿನಲ್ಲಿ ಎಷ್ಟು?
ಸಾಧು ಶ್ರೀನಾಥ್​ Edited By:

Updated on: Jun 01, 2020 | 6:51 PM

ಉಡುಪಿ: ಜಿಲ್ಲೆಯಲ್ಲಿ 5 ಪೊಲೀಸರಿಗೆ ಕರೊನಾ ಪಾಸಿಟಿವ್ ಬಂದಿದೆ. ಶಂಕರನಾರಾಯಣ ಠಾಣೆಯ ಮಹಿಳಾ ಸಿಬ್ಬಂದಿ ಸೇರಿ ಸಶಸ್ತ್ರ ಮೀಸಲು ಪಡೆಯ ನಾಲ್ವರಿಗೆ ವೈರಸ್ ಅಟ್ಯಾಕ್ ಆಗಿದೆ. ಹಾಗಾಗಿ ಶಂಕರನಾರಾಯಣ ಠಾಣೆ ಮತ್ತು ಪೊಲೀಸರ ವಸತಿಗೃಹಗಳು ಕಂಟೈನ್ಮೆಂಟ್ ವಲಯಗಳಾಗಿದೆ. ಚೆಕ್​ ಪೋಸ್ಟ್​ ಮತ್ತು ಕ್ವಾರಂಟೈನ್ ಡ್ಯೂಟಿ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲೂ ಪೊಲೀಸ್ ಕಾನ್ಸ್​ಟೇಬಲ್​ಗೆ ಸೋಂಕು:
ಬೆಂಗಳೂರಿನ ಟಿಪ್ಪುನಗರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಸಿಎಆರ್ ಕಾನ್ಸ್​ಟೇಬಲ್​ಗೆ ರೊಟಿನ್ ಚೆಕಪ್‌ನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆಡುಗೋಡಿ ಪೊಲೀಸ್ ಕ್ವಾರ್ಟರ್ಸ್​ನಲ್ಲಿ ಸೋಂಕಿತ ವಾಸವಿದ್ದ. 3 ತಿಂಗಳ ಹಿಂದೆ ಪತ್ನಿ, ಮಗುವನ್ನು ದಾವಣಗೆರೆಯ ಮನೆಗೆ ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಅಲ್ಲದೆ ಈ ಹಿಂದೆಯೂ ಟಿಪ್ಪು ನಗರದಲ್ಲಿ ಕೆಲಸ ಮಾಡಿದ್ದ CAR ಕಾನ್ಸ್‌ಟೇಬಲ್​ಗೆ ಸೋಂಕು ತಗುಲಿತ್ತು. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಾನ್ಸ್​ಟೇಬಲ್​ಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಾನ್ಸ್​ಟೇಬಲ್​ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us