ಸಿಲಿಕಾನ್ ವ್ಯಾಲಿ ಬೆಂಗಳೂರು ಈಗ ಕೊರೊನಾ ವ್ಯಾಲಿಯಾಗಿದೆ: ಕಾಂಗ್ರೆಸ್ ನಾಯಕ ಧ್ರುವನಾರಾಯಣ್ ಆರೋಪ

|

Updated on: May 01, 2021 | 5:47 PM

‘ಸೆಪ್ಟೆಂಬರ್‌ನಲ್ಲೇ ರಾಜ್ಯಸರ್ಕಾರಕ್ಕೆ ತಜ್ಞರ ಸಮಿತಿಯೊಂದು ವರದಿ ಸಲ್ಲಿಸಿತ್ತು. ಆದರೆ ಸರ್ಕಾರ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸಕಾಲದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಇಂಥ ಅನಾಹುತಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ‘ ಎಂದು ಧ್ರುವನಾರಾಯಣ ವಿಶ್ಲೇಷಿಸಿದರು.

ಸಿಲಿಕಾನ್ ವ್ಯಾಲಿ ಬೆಂಗಳೂರು ಈಗ ಕೊರೊನಾ ವ್ಯಾಲಿಯಾಗಿದೆ: ಕಾಂಗ್ರೆಸ್ ನಾಯಕ ಧ್ರುವನಾರಾಯಣ್ ಆರೋಪ
ಕಾಂಗ್ರೆಸ್ ನಾಯಕ ಧ್ರುವ ನಾರಾಯಣ
Follow us on

ಚಾಮರಾಜನಗರ: ಸಿಲಿಕಾನ್ ವ್ಯಾಲಿ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದ ಐಟಿ ನಗರಿ ಬೆಂಗಳೂರು ಇದೀಗ ಕೊರೊನಾ ವ್ಯಾಲಿಯಾಗಿದೆ. ಕೊರೊನಾ ಸಮಸ್ಯೆ ಎದುರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಂಸದರೂ ಆಗಿರುವ ಕಾಂಗ್ರೆಸ್ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರದಲ್ಲಿ ಆರೋಗ್ಯ ಹಸ್ತ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸೆಪ್ಟೆಂಬರ್‌ನಲ್ಲೇ ರಾಜ್ಯಸರ್ಕಾರಕ್ಕೆ ತಜ್ಞರ ಸಮಿತಿಯೊಂದು ವರದಿ ಸಲ್ಲಿಸಿತ್ತು. ಆದರೆ ಸರ್ಕಾರ ಈ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸಕಾಲದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಇಂಥ ಅನಾಹುತಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಶ್ಲೇಷಿಸಿದರು.

ಕೊರೊನಾ ಸೋಂಕಿತರ ಚಿಕಿತ್ಸೆಗೆ 10 ಸಾವಿರ ಬೆಡ್ ಇದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ. ಆದರೆ ಅವರ ಹೇಳಿಕೆ ಕಪೋಲಕಲ್ಪಿತ. ವಾಸ್ತವದಲ್ಲಿ ಇಷ್ಟು ಬೆಡ್​ಗಳು ಸಿಗುತ್ತಿಲ್ಲ. ರಾಜ್ಯಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಸಿ.ಟಿ.ರವಿ ಬೇಜವಾಬ್ದಾರಿ ವ್ಯಕ್ತಿ, ಅವರದ್ದು ಪಲಾಯನವಾದ. ಚಾಮರಾಜನಗರದ ಉಸ್ತುವಾರಿ ಸಚಿವರು ಯಾರು ಎಂದು ನನಗೆ ತಿಳಿಯುತ್ತಿಲ್ಲ. ಅಧಿಕಾರಿಗಳ ಹೇಳಿಕೆ ಕೇಳಿಕೊಂಡು ಸಚಿವರು ತಿರುಗಾಡ್ತಿದ್ದಾರೆ ಎಂದು ಅವರು ಟೀಕಿಸಿದರು.

ಕೊರೊನಾ 2ನೇ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆಗಳನ್ನು ಮುಂದೂಡಬಹುದಾಗಿತ್ತು. ಆದರೆ ಮೋದಿ ಅಧಿಕಾರ ದಾಹಕ್ಕಾಗಿ ಜನರ ಜೀವ ಬಲಿ ಪಡೆಯುತ್ತಿದ್ದಾರೆ. ಕುಂಭ ಮೇಳದಿಂದಲೂ ಕೊರೊನಾ ವ್ಯಾಪಕವಾಗಿ ಹರಡಿತು ಎಂದು ವಿಶ್ಲೇಷಿಸಿದರು.

ಚಾಮರಾಜನಗರದಲ್ಲಿ ಆರೋಗ್ಯ ಹಸ್ತ ಸಹಾಯವಾಣಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ರಿಂದ ಚಾಲನೆ ನೀಡಿದರು. ಸಹಾಯವಾಣಿಯಲ್ಲಿ ಮೂವರು ವೈದ್ಯರು ಕಾರ್ಯನಿರ್ವಹಿಸುತ್ತಾರೆ. ಸಹಾಯವಾಣಿಗೆ ಫೋನ್‌ ಮಾಡಿದ್ರೆ ಆನ್‌ಲೈನ್ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

(Coronavirus Pandemic Situation Worse in Bengaluru Says Congress Leader Dhruvanarayana)

ಇದನ್ನೂ ಓದಿ: Glenn Maxwell: ಭಾರತದಲ್ಲಿ ಹೆಚ್ಚಿದ ಕೊರೊನಾ; ಮನೆಗೆ ಹೋಗಲು ಹೊಸ ಉಪಾಯ ಮಾಡಿದ ಗ್ಲೆನ್ ಮ್ಯಾಕ್ಸ್​ವೆಲ್

ಇದನ್ನೂ ಓದಿ: ಆಮ್ಲಜನಕ ಕೊರತೆ ನೀಗಿಸಲು ಆಕ್ಸಿಜನ್ ಪ್ಲಾಂಟ್ ಸಿದ್ಧಪಡಿಸಿದ ಚಾಮರಾಜನಗರ ಜಿಲ್ಲಾಡಳಿತ

Published On - 5:45 pm, Sat, 1 May 21