ನಿನ್ನೆ ಅಂದ್ರೆ ಏಪ್ರಿಲ್ 12ರಂದು ಸೂಪಾ ಡ್ಯಾಂ ಬಳಿ ಸೆಲ್ಫಿ ತೆಗೆಸಿಕೊಳ್ಳುವ ಎಂದು ಹೋಗಿದ್ದ ಜೋಡಿ ಕಾಳಿ ನದಿಗೆ ಬಿದ್ದಿದ್ರು. ಕಾರ್ಯಾಚರಣೆ ಬಳಿಕ ಇಂದು ಬೆಳಗ್ಗೆ ಜೋಡಿಯ ಮೃತದೇಹ ಪತ್ತೆಯಾಗಿದೆ. ರಕ್ಷಿತಾ ಗುಲ್ಬರ್ಗಾದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದರು. ರಕ್ಷಿತಾ ಮತ್ತು ಪುರುಷೋತ್ತಮ್, ಜೊಯಿಡಾ ತಾಲೂಕಿನ ಗಣೇಶಗುಡಿಗೆ ಪ್ರವಾಸಕ್ಕೆ ಎಂದು ಆಗಮಿಸಿದ್ದರು. ಆದ್ರೆ ನಿನ್ನೆ ಸೂಪಾ ಡ್ಯಾಂ ಬಳಿಯಿರುವ ಕಾಳಿ ಸೇತುವೆಯಲ್ಲಿ ನಿಂತು ಸೆಲ್ಫಿ ತೆಗೆಯುತ್ತಿದ್ದ ವೇಳೆ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಕಾಳಿ ನದಿಯಲ್ಲಿ ಬಿದ್ದಿದ್ದ ಜೋಡಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ನಿನ್ನೆಯಿಂದ ಹುಡುಕಾಡುತ್ತಿದ್ದರು. ಮುಳುಗು ತಜ್ಞರು, ಟ್ಯೂಬ್ ಬೋಟ್ ಹಾಗೂ ಕಯಾಕ್ ಮೂಲಕ ಹುಡುಕಾಟ ನಡೆದಿತ್ತು. ಸದ್ಯ ಇಂದು ಬೆಳಗ್ಗೆ ಕಾಳಿ ನದಿಯಲ್ಲಿ ಜೋಡಿಗಳ ಮೃತದೇಹ ಪತ್ತೆಯಾಗಿದೆ. ಪ್ರವಾಸಕ್ಕೆ ಬಂದ ಜೋಡಿ ಪ್ರಾಣ ಕಳೆದುಕೊಂಡಿದೆ.
ಸೂಪಾ ಆಣೆಕಟ್ಟನ್ನು ಕಾಳಿ ನದಿಗೆ ಕಟ್ಟಲಾಗಿದ್ದು, ಇದು ಕಾಳಿ ನದಿಗೆ ಕಟ್ಟಲಾದ ಅತಿ ದೊಡ್ಡ ಡ್ಯಾಂ ಆಗಿದೆ. ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಅತಿದೊಡ್ಡ ಆಣೆಕಟ್ಟು ಎಂಬ ಖ್ಯಾತಿಯು ಸಹ ಸೂಪಾ ಆಣೆಕಟ್ಟಿಗಿದೆ.
ಇದನ್ನೂ ಓದಿ: ಜೋಯ್ಡಾ: ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ಸೂಪಾ ಡ್ಯಾಂಗೆ ಬಿದ್ದ ಯುವಕ-ಯುವತಿ
(Couple Body Found in Kali River in Karwar)