ರಾಜ್ಯದಲ್ಲಿ ಕೊವಿಡ್-19 ಪ್ರಕರಣಗಳು ಕಮ್ಮಿಯಾಗುತ್ತಿವೆ
ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ಸಾಯಂಕಾಲ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 52 ಜನ ಸಾವಿಗೀಡಾಗಿದ್ದಾರೆ ಮತ್ತು ಹೊಸದಾಗಿ 4471 ಜನರಲ್ಲಿ ಸೋಂಕು ದೃಢಪಟ್ಟಿದೆ. ಕರ್ನಾಟಕದಲ್ಲಿ ಇದುವರೆಗೆ ಕೊರೊನಾದಿಂದ 10,873 ಜನ ಮರಣಿಸಿದ್ದಾರೆ, ಸೋಂಕಿತರ ಸಂಖ್ಯೆ 7,98,378ಕ್ಕೇರಿದೆ. ಸೋಂಕಿತರ ಪೈಕಿ 7,00,737 ಜನ ಗುಣಮುಖರಾಗಿದ್ದಾರೆ, ಮಿಕ್ಕಿದ 86,749 ಜನರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೆಯೇ, ಬೆಂಗಳೂರಿನಲ್ಲಿ ಇಂದು ಮಹಾಮಾರಿಗೆ 26 ಜನ ಬಲಿಯಾಗಿದ್ದಾರೆ ಮತ್ತು ಕಳೆದ 24 […]

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ಸಾಯಂಕಾಲ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 52 ಜನ ಸಾವಿಗೀಡಾಗಿದ್ದಾರೆ ಮತ್ತು ಹೊಸದಾಗಿ 4471 ಜನರಲ್ಲಿ ಸೋಂಕು ದೃಢಪಟ್ಟಿದೆ.
ಕರ್ನಾಟಕದಲ್ಲಿ ಇದುವರೆಗೆ ಕೊರೊನಾದಿಂದ 10,873 ಜನ ಮರಣಿಸಿದ್ದಾರೆ, ಸೋಂಕಿತರ ಸಂಖ್ಯೆ 7,98,378ಕ್ಕೇರಿದೆ. ಸೋಂಕಿತರ ಪೈಕಿ 7,00,737 ಜನ ಗುಣಮುಖರಾಗಿದ್ದಾರೆ, ಮಿಕ್ಕಿದ 86,749 ಜನರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೆಯೇ, ಬೆಂಗಳೂರಿನಲ್ಲಿ ಇಂದು ಮಹಾಮಾರಿಗೆ 26 ಜನ ಬಲಿಯಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 2,251 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಕೊವಿಡ್-19 ವ್ಯಾಧಿಯಿಂದ ಈವರೆಗೆ 3,714 ಜನ ಸತ್ತಿದ್ದು ಒಟ್ಟು ಸೋಂಕಿತರ ಸಂಖ್ಯೆ 3,23,305 ತಲುಪಿದೆ.
ಸೋಂಕಿತರ ಪೈಕಿ 2,63,607 ಜನರು ಗುಣಮುಖರಾಗಿ ಮನೆಗಳಿಗೆ ಹಿಂತಿರುಗಿದ್ದಾರೆ, ಉಳಿದ 55,983 ಜನರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿರುವ ಮಾಹಿತಿ ತಿಳಿಸುತ್ತದೆ.




