Covid 19 Karnataka Update: ಕರ್ನಾಟಕದಲ್ಲಿ 5000 ದಾಟಿದ ಸೋಂಕಿತರ ಸಂಖ್ಯೆ, ಪಾಸಿಟಿವಿಟಿ ಪ್ರಮಾಣವೂ ಹೆಚ್ಚಾಯ್ತು

Coronavirus Infection: ಕರ್ನಾಟಕದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 3.95 ಇದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 22,000 ದಾಟಿದೆ.

Covid 19 Karnataka Update: ಕರ್ನಾಟಕದಲ್ಲಿ 5000 ದಾಟಿದ ಸೋಂಕಿತರ ಸಂಖ್ಯೆ, ಪಾಸಿಟಿವಿಟಿ ಪ್ರಮಾಣವೂ ಹೆಚ್ಚಾಯ್ತು
ಸಾಂಕೇತಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 06, 2022 | 8:56 PM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ (Coronavirus Infection) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಗುರುವಾರ (ಜ 6) ಒಂದೇ ದಿನ 5031 ಜನರಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ಪ್ರಮಾಣ ಶೇ 3.95 ಇದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 22,000 ದಾಟಿದೆ. ಸೋಂಕಿನಿಂದ ಸಾಯುವವರ ಪ್ರಮಾಣ ಶೇ 0.01 ಇದೆ. ರಾಜ್ಯದಲ್ಲಿ ಗುರುವಾರ 271 ಮದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 30,22,603 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,62,043 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇಂದು ಕೊವಿಡ್​ನಿಂದ ಒಬ್ಬರು ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ 4324 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ನಗರದಲ್ಲಿ ಪ್ರಸ್ತುತ 18,913 ಸಕ್ರಿಯ ಪ್ರಕರಣಗಳಿವೆ. ಈವರೆಗೆ 12,76,374 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,41,046 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 16,414 ಮಂದಿ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ಬೆಂಗಳೂರು ನಗರ 4324, ದಕ್ಷಿಣ ಕನ್ನಡ 106, ಉಡುಪಿ 92, ಮಂಡ್ಯ 66, ಮೈಸೂರು 65, ಬೆಳಗಾವಿ 64, ಧಾರವಾಡ 48, ಹಾಸನ 47, ಬೆಂಗಳೂರು ಗ್ರಾಮಾಂತರ, ಕಲಬುರಗಿ 25, ಬಳ್ಳಾರಿ 21, ಚಿಕ್ಕಬಳ್ಳಾಪುರ, ತುಮಕೂರು 20, ಶಿವಮೊಗ್ಗ 16, ಗದಗ 11, ಕೊಡಗು 19, ಕೋಲಾರ 14, ಉತ್ತರ ಕನ್ನಡ 13, ವಿಜಯಪುರ 11, ಚಿಕ್ಕಮಗಳೂರು 9, ದಾವಣಗೆರೆ, ರಾಮನಗರ, ಬೀದರ್ 3, ಚಿತ್ರದುರ್ಗ 4, ಚಾಮರಾಜನಗರ 2.

ಇದನ್ನೂ ಓದಿ: ಭಾರತದಲ್ಲಿ 90,928 ಕೊರೊನಾ ಕೇಸ್​ಗಳು ದಾಖಲು, ನಿನ್ನೆಗಿಂತಲೂ ಶೇ.56ರಷ್ಟು ಹೆಚ್ಚು; 325 ಮಂದಿ ಸಾವು ಇದನ್ನೂ ಓದಿ: ಮುಂದಿನ 2 ವಾರ ನಿರ್ಣಾಯಕ: ಧಿಡೀರನೇ ಕೊರೊನಾ ಕೇಸ್ ಏರಿಕೆಯಾದರೆ ಆರೋಗ್ಯ ವ್ಯವಸ್ಥೆಯೇ ಕುಸಿದುಬೀಳಬಹುದು!