ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 7,955 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 46 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 12,813ಕ್ಕೆ ಮುಟ್ಟಿದೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 5,576 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 29 ಜನರು ಮೃತಪಟ್ಟಿದ್ದಾರೆ. ಈವರೆಗೆ ಬೆಂಗಳೂರಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 4,769ಕ್ಕೆ ಮುಟ್ಟಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 10,48,085ಕ್ಕೆ (10.48 ಲಕ್ಷ) ಮುಟ್ಟಿದೆ. ಸೋಂಕಿತರ ಪೈಕಿ 9,77,169 (9.77 ಲಕ್ಷ) ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 58,084 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಇಂದು ಒಂದೇ ದಿನ 5,576 ಜನರಿಗೆ ಸೋಂಕು ದೃಢಪಡುವ ಮೂಲಕ ಬೆಂಗಳೂರಲ್ಲಿ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 4,70,014ಕ್ಕೆ (4.70 ಲಕ್ಷ) ಏರಿಕೆಯಾಗಿದೆ. ಈ ವರೆಗೆ 4,22,719 ಜನರು ಗುಣಮುಖರಾಗಿದ್ದಾರೆ. 42,525 ಸೋಂಕಿತರು ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೊನಾ ಸೋಂಕು
ರಾಜ್ಯದಲ್ಲಿಂದು ಹೊಸದಾಗಿ 7,955 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಅತಿಹೆಚ್ಚು ಅಂದರೆ 5576 ಪ್ರಕರಣಗಳು ವರದಿಯಾಗಿವೆ. ಮೈಸೂರು 283, ಕಲಬುರಗಿ 211, ಬೀದರ್ 186, ಹಾಸನ 153, ತುಮಕೂರು 145, ವಿಜಯಪುರ 127, ಚಿಕ್ಕಬಳ್ಳಾಪುರ 119, ದಕ್ಷಿಣ ಕನ್ನಡ 115, ಮಂಡ್ಯ 104 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ದಾಟಿದೆ.
ಬಳ್ಳಾರಿ 87, ಧಾರವಾಡ 86, ಕೋಲಾರ 84, ಬೆಳಗಾವಿ 76, ಬೆಂಗಳೂರು ಗ್ರಾಮಾಂತರ ಜಿಲ್ಲೆ 71, ಉತ್ತರ ಕನ್ನಡ 67, ರಾಮನಗರ 65, ಉಡುಪಿ 46, ಚಿತ್ರದುರ್ಗ 42, ಕೊಪ್ಪಳ 39, ಬಾಗಲಕೋಟೆ 37, ಚಾಮರಾಜನಗರ 35, ಶಿವಮೊಗ್ಗ 33, ಯಾದಗಿರಿ 32, ರಾಯಚೂರು 30, ಚಿಕ್ಕಮಗಳೂರು 29, ದಾವಣಗೆರೆ 29, ಕೊಡಗು 19, ಗದಗ 16, ಹಾವೇರಿ 13 ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 46 ಜನರು ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 29, ಮೈಸೂರು 5, ಬೆಳಗಾವಿ, ಕಲಬುರಗಿ ಜಿಲ್ಲೆಯಲ್ಲಿ ಇಂದು ತಲಾ ಇಬ್ಬರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಮಂಡ್ಯ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ ಒಟ್ಟು 12,813 ಜನರ ಸಾವನ್ನಪ್ಪಿದ್ದಾರೆ.
(Covid 19 Karnataka update 7955 new coronavirus infections 46 death)
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ, ಮುಂದಿನ 10 ದಿನ ತುಂಬಾ ಕಠಿಣವಾಗಿರುತ್ತದೆ: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ
ಇದನ್ನೂ ಓದಿ: Vaccine Utsav: ಭಾರತೀಯರೆಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು; ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್ ಗಾಂಧಿ
Published On - 7:36 pm, Fri, 9 April 21