Covid-19 Karnataka Update: ಕರ್ನಾಟಕದಲ್ಲಿ 17,489 ಮಂದಿಗೆ ಸೋಂಕು, 80 ಸಾವು

|

Updated on: Apr 17, 2021 | 7:49 PM

ರಾಜ್ಯದಲ್ಲಿಂದು ಒಂದೇ ದಿನ 17,489 ಜನರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11,41,998ಕ್ಕೆ (11.41 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 80 ಜನರ ಬಲಿಯಾಗಿದ್ದಾರೆ.

Covid-19 Karnataka Update: ಕರ್ನಾಟಕದಲ್ಲಿ 17,489 ಮಂದಿಗೆ ಸೋಂಕು, 80 ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿಂದು ಒಂದೇ ದಿನ 17,489 ಜನರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11,41,998ಕ್ಕೆ (11.41 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 80 ಜನರ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 13,270 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 10,09,549 ಜನರು ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದಾರೆ. 1,19,160 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 11,404 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಕೊರೊನಾ ಸೋಂಕಿಗೆ 43 ಜನರು ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 5,063 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ 5,33,842 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ 4,41,054 ಜನರು ಗುಣಮುಖರಾಗಿದ್ದಾರೆ. 87,724 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 11,404 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಮೈಸೂರು 811, ಕಲಬುರಗಿ 560, ತುಮಕೂರು 507, ಬೀದರ್ 359, ಬಳ್ಳಾರಿ 355, ದಕ್ಷಿಣ ಕನ್ನಡ 309, , ವಿಜಯಪುರ 281, ಧಾರವಾಡ 272, ಬೆಂಗಳೂರು ಗ್ರಾಮಾಂತರ 262, ಹಾಸನ 224, ಮಂಡ್ಯ 223, ಬೆಳಗಾವಿ 188, ಚಿಕ್ಕಬಳ್ಳಾಪುರ 179, ಯಾದಗಿರಿ 153, ಕೋಲಾರ 144, ಚಾಮರಾಜನಗರ 136, ಶಿವಮೊಗ್ಗ 125, ದಾವಣಗೆರೆ 122, ಕೊಪ್ಪಳ 121, ಉಡುಪಿ 118, ರಾಮನಗರ 102, ಉತ್ತರ ಕನ್ನಡ 102, ರಾಯಚೂರು 91, ಚಿತ್ರದುರ್ಗ 80, ಚಿಕ್ಕಮಗಳೂರು 68, ಕೊಡಗು 58, ಬಾಗಲಕೋಟೆ 50, ಹಾವೇರಿ 48, ಗದಗ 37.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಕರ್ನಾಟಕದಲ್ಲಿ ಇಂದು ಕೊರೊನಾ ಸೋಂಕಿನಿಂದ ಒಟ್ಟು 80 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಅತಿಹೆಚ್ಚು ಅಂದರೆ 43 ಜನರು ಮೃತಪಟ್ಟಿದ್ದಾರೆ. ಹಾಸನ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ 8, ತುಮಕೂರು ಮತ್ತು ಕಲಬುರಗಿ, ಜಿಲ್ಲೆಯಲ್ಲಿ ತಲಾ ಮೂವರು, ಬೆಳಗಾವಿ, ಬಳ್ಳಾರಿ, ಬೀದರ್, ಚಾಮರಾಜನಗರ, ಧಾರವಾಡ ಜಿಲ್ಲೆಗಳಲ್ಲಿ ಸೋಂಕಿಗೆ ತಲಾ ಇಬ್ಬರು ಬಲಿಯಾಗಿದ್ದಾರೆ. ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೋಲಾರ, ಮಂಡ್ಯ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 13,270 ಜನರು ಸಾವನ್ನಪ್ಪಿದ್ದಾರೆ.

(Covid-19 Karnataka Update Infection found 17489 people 80 deaths due to coronavirus)

ಇದನ್ನೂ ಓದಿ: Health Tips During Covid Pandemic: ಕೊರೊನಾ ಕಾಲದಲ್ಲಿ ಆರೋಗ್ಯ ರಕ್ಷಣೆಗೆ 9 ಸೂತ್ರಗಳು

ಇದನ್ನೂ ಓದಿ: Tips for Pregnant Women: ಕೊವಿಡ್ 19ನಿಂದ ದೂರವಿರಲು ಗರ್ಭಿಣಿಯರು ಅನುಸರಿಸಬೇಕಾದ ಕ್ರಮಗಳಿವು

Published On - 7:05 pm, Sat, 17 April 21