Sign In

By signing in or creating an account, you agree with Associated Broadcasting Company's Terms & Conditions and Privacy Policy.

Tips for Pregnant Women: ಕೊವಿಡ್ 19ನಿಂದ ದೂರವಿರಲು ಗರ್ಭಿಣಿಯರು ಅನುಸರಿಸಬೇಕಾದ ಕ್ರಮಗಳಿವು

ಪ್ರಸ್ತುತ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಪ್ರಕಾರ, ಗರ್ಭಿಣಿಯರು ಸಾಮಾನ್ಯ ಜನರಿಗಿಂತ ಹೆಚ್ಚಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಇನ್ನು ಹೃದ್ರೋಗ ಹೊಂದಿರುವ ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಅಪಾಯವಿದೆ.

Tips for Pregnant Women: ಕೊವಿಡ್ 19ನಿಂದ ದೂರವಿರಲು ಗರ್ಭಿಣಿಯರು ಅನುಸರಿಸಬೇಕಾದ ಕ್ರಮಗಳಿವು
ಪ್ರಾತಿನಿಧಿಕ ಚಿತ್ರ
Follow us
preethi shettigar
| Updated By: ganapathi bhat

Updated on: Apr 17, 2021 | 6:01 PM

ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರು ಕೂಡ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಗರ್ಭಿಣಿ ಮಹಿಳೆಯರು ಅತ್ಯಂತ ಹೆಚ್ಚಿನ ಮುತುವರ್ಜಿ ಮತ್ತು ಕಾಳಜಿಯನ್ನು ವಹಿಸುವುದು ಅತಿ ಅವಶ್ಯವಾಗಿದೆ. ಯುನಿಸೆಫ್ ಪ್ರಕಾರ ಕೊವಿಡ್ 19 ಸೋಂಕು ಮಗುವಿನ ಜನನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹೀಗಾಗಿ ಗರ್ಭೀಣಿಯರು ಹೆಚ್ಚು ಜಾಗೃತರಾಗಿರುವುದು ಮುಖ್ಯವಾಗಿದೆ.

ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಪ್ರಕಾರ, ಗರ್ಭಿಣಿಯರು ಸಾಮಾನ್ಯ ಜನರಿಗಿಂತ ಹೆಚ್ಚಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಇನ್ನು ಹೃದ್ರೋಗ ಹೊಂದಿರುವ ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಅಪಾಯವಿದೆ.

ಗರ್ಭಿಣಿ ಮಹಿಳೆಯರು ಕೊವಿಡ್ 19 ಸೋಂಕನ್ನು ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು: 1. ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ ಮತ್ತು ಮನೆಗೆ ಭೇಟಿ ನೀಡುವವರ ಸಂಖ್ಯೆಯನ್ನು ಕನಿಷ್ಠವಾಗಿರಿಸಿಕೊಳ್ಳಿ

2. ಮನೆಯ ಯಾವುದೇ ವ್ಯಕ್ತಿಯಿಂದ ಕನಿಷ್ಠ 1 ಮೀಟರ್ ದೂರವಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ

3. ಕನಿಷ್ಠ 20 ಸೆಕೆಂಡುಗಳ ಕಾಲ ಸೋಪ್ ಮತ್ತು ನೀರಿನಿಂದ ಕೈಗಳನ್ನು ಆಗಾಗ್ಗೆ ತೊಳೆಯಿರಿ ಅಥವಾ ಸೋಂಕು ನಿವಾರಕವನ್ನು ಬಳಸಿ

4. ಕೆಮ್ಮು ಅಥವಾ ಸೀನುವಾಗ ಕೈಯಿಂದ ಬಾಯಿ ಮತ್ತು ಮೂಗನ್ನು ಮುಚ್ಚಿ. ಕಣ್ಣು, ಬಾಯಿ ಮತ್ತು ಮೂಗನ್ನು ಪದೇ ಪದೇ ಸ್ಪರ್ಶಿಸುವುದನ್ನು ಕಡಿಮೆ ಮಾಡಿ

ಸಾಮಾನ್ಯವಾಗಿ ಕೊವಿಡ್ 19ಗೆ ಸಂಬಂಧಿದಂತೆ ಒಂದಷ್ಟು ಪ್ರಶ್ನೆಗಳನ್ನು ವೈದ್ಯರಲ್ಲಿ ಕೆಳಲಾಗಿದೆ ಅವುಗಳು ಈ ಕೆಳಗಿನಂತಿದೆ. 1. ಗರ್ಭಿಣಿಯರು ದಿನಸಿ ತರಲು ಅಥವಾ ಶಾಪಿಂಗ್​ಗಾಗಿ ಹೊರ ಹೋಗಬಹುದೇ? ಉತ್ತರ: ಸದ್ಯದ ಪರಿಸ್ಥಿತಿಯಲ್ಲಿ ಗರ್ಭಿಣಿಯರು ಹೊರಗೆ ಹೋಗುವುದು ಬೇಡ ಎನ್ನುವುದು ವೈದ್ಯರ ಸಲಹೆ. ಏಕೆಂದರೆ ನಿಗದಿತ ಜಾಗದಲ್ಲಿ ಸೋಂಕು ಹರಡುವ ಅವಕಾಶ ಹೆಚ್ಚಾಗಿರುತ್ತದೆ.

2. ಗರ್ಭಿಣಿಯರು ಕೆಲಸಕ್ಕಾಗಿ ಹೊರಗಡೆ ಹೊಗಬಹುದೇ? ಉತ್ತರ: ಇನ್ನು ಮೂರು ತಿಂಗಳುಗಳ ಕಾಲ ಗರ್ಭಿಣಿಯರು ವರ್ಕ್ ಫ್ರಮ್ ಹೋಮ್ ಮಾಡುವುದೇ ಹೆಚ್ಚು ಒಳಿತು. ಅದರಲ್ಲೂ ಸಾರ್ವಜನಿಕ ಸಾರಿಗೆಯಿಂದ ದೂರ ಇರುವುದು ಉತ್ತಮ.

ಕೊವಿಡ್ 19 ಸಮಯದಲ್ಲಿ ಗರ್ಭಧಾರಣೆಯ ಒತ್ತಡ ಮತ್ತು ಇತರ ಸಮಸ್ಯೆಗಳು: 1. ಮೊದಲ ಬಾರಿಗೆ ತಾಯಿಯಾದವರಿಗೆ ಕೊವಿಡ್ 19 ವಿಶೇಷವಾಗಿ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದೆ. ಆದಾಗ್ಯೂ ಎಲ್ಲಾ ಗರ್ಭಿಣಿಯರು ಈ ಸಾಂಕ್ರಾಮಿಕ ಸಮಯದಲ್ಲಿ ಒತ್ತಡವನ್ನು ಅನುಭವಿಸುತ್ತಾರೆ ಏಕೆಂದರೆ ಜನರಿಗೆ ಇದು ಹೊಸ ಪರಿಸ್ಥಿತಿ.

2. ವಾಕರಿಕೆ, ವಾಂತಿ, ಆಯಾಸ, ದೌರ್ಬಲ್ಯ ಮುಂತಾದ ಅನಪೇಕ್ಷಿತ ರೋಗ ಲಕ್ಷಣಗಳು ಮೊದಲ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ಇರುತ್ತದೆ. ಆದರೆ ಇತ್ತೀಚೆಗೆ ಕೊವಿಡ್ 19 ಕಾರಣದಿಂದಾಗಿ ಗರ್ಭ ನಷ್ಟದ ಭಯವನ್ನು ಕೆಲವು ಮಹಿಳೆಯರು ಹೊಂದಿದ್ದು, ಈ ಪರಿಸ್ಥಿತಿಯನ್ನು ನಿಭಾಯಿಸುವುದು ತುಂಬಾ ಕಷ್ಟಕರವಾಗಿದೆ.

3. ಎಲ್ಲಾ ಗರ್ಭಿಣಿಯರು ಕೊವಿಡ್ 19 ಬಗೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ವದಂತಿಗಳು ಮತ್ತು ನಕಲಿ ಸುದ್ದಿಗಳನ್ನು ಕೇಳಿ ಭಯ ಪಡುವುದನ್ನು ಮೊದಲು ನಿಲ್ಲಿಸಬೇಕಾಗಿದೆ. ಕೊರೊನಾ ಸೋಂಕಿಗೆ ಸಂಬಂಧಿಸಿದ ಲಕ್ಷಣಗಳ ಬಗ್ಗೆ ಮೊದಲು ತಿಳಿದುಕೊಳ್ಳುವುದು ಅಗತ್ಯ.

ಕೊವಿಡ್ 19 ಹರಡಲು ಎರಡು ಮಾರ್ಗಗಳಿವೆ: ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ (2 ಮೀಟರ್ ಒಳಗೆ) ಉಸಿರಾಟದ ಪಸರಿಸುವಿಕೆಯು ಕಣ್ಣುಗಳು, ಬಾಯಿ, ಮೂಗು ಅಥವಾ ಇತರ ವಾಯು ಮಾರ್ಗಗಳನ್ನು ಪ್ರವೇಶಿಸಬಹುದು. ರೋಗ ಲಕ್ಷಣಗಳನ್ನು ಹೊಂದಿರುವ ಸೋಂಕಿತ ವ್ಯಕ್ತಿಯೊಂದಿಗೆ ಯಾರಾದರೂ ನಿಕಟ ಸಂಪರ್ಕವನ್ನು ಹೊಂದಿದ್ದರೆ ಈ ಅಪಾಯವು ಹೆಚ್ಚಾಗುತ್ತದೆ. ಎರಡನೆಯದಾಗಿ ಸೋಂಕಿತ ವ್ಯಕ್ತಿಯ ಮೇಲ್ಮೈ, ವಸ್ತು ಅಥವಾ ಕೈಯನ್ನು ಸ್ಪರ್ಶಿಸಿ ನಂತರ ಸ್ವಂತ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಸ್ಪರ್ಶಿಸುವ ಮೂಲಕ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇದೆ.

ಕೊರೊನಾ ಸೋಂಕು ಹರಡುವುದನ್ನು ತಡೆಯುವುದು ಹೇಗೆ? ಪ್ರಸರಣದ ವಿಧಾನಕ್ಕೆ ಅನುಗುಣವಾಗಿ, ಸೋಂಕು ತಡೆಯುವುದು ಅವಶ್ಯಕವಾಗಿದೆ.

1.ಕಟ್ಟುನಿಟ್ಟಾದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. (ಇನ್ನೊಬ್ಬ ವ್ಯಕ್ತಿಯೊಂದಿಗೆ ಕನಿಷ್ಠ 2 ಮೀಟರ್ ದೂರವನ್ನು ಇಟ್ಟುಕೊಳ್ಳುವುದು).

2.ಎಲ್ಲಾ ಸಮಯದಲ್ಲೂ ಫೇಸ್ ಮಾಸ್ಕ್ ಧರಿಸುವುದು ಮತ್ತು ಆಗಾಗ್ಗೆ ಕೈ ತೊಳೆಯುವುದು ಅಗತ್ಯ.

3. ಆಸ್ಪತ್ರೆಯ ಸುರಕ್ಷತೆ ಬಗ್ಗೆ ಖಚಿತ ಮಾಹಿತಿ ಪಡೆದು ನಂತರ ಆಸ್ಪತ್ರೆಗೆ ಭೇಟಿ ನೀಡುವುದು ಉತ್ತಮ.

4. ನಿಗದಿತ ಭೇಟಿಗಳಿಗೆ ಸಂಬಂಧಿಸಿದಂತೆ ಫೋನ್‌ನಲ್ಲಿ ಪ್ರಸೂತಿ ತಜ್ಞರೊಂದಿಗೆ ಸಂಪರ್ಕದಲ್ಲಿರುವುದು ಅಗತ್ಯ.

5. ಸಮತೋಲಿತ ಆಹಾರವನ್ನು ಸೇವಿಸಬೇಕು ಮತ್ತು ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೇರಿಗೆ ನಂತರ ಹಾರ್ಮೋನ್​ಗಳ ಬದಲಾವಣೆ, ನಿದ್ರಾಹೀನತೆ ಇನ್ನಿತರ ಸಮಸ್ಯೆಗಳಿಂದ ಹೆಚ್ಚು ಒತ್ತಡವನ್ನು ಮಹಿಳೆ ಎದುರಿಸುತ್ತಾಳೆ ಅದನ್ನು ಕಡಿಮೆ ಮಾಡುವಲ್ಲಿ ಸಂಗಾತಿಯ ಸಹಾಯವನ್ನು ತೆಗೆದುಕೊಳ್ಳಬೇಕು ಮತ್ತು ಆದಷ್ಟು ನಿದ್ರೆಯನ್ನು ಮಾಡಲು ಪ್ರಯತ್ನಿಸಿ.

ಗರ್ಭದಲ್ಲಿರುವ ಮಗುವಿಗೆ ತಾಯಿಯಿಂದ ಹರಡುವ ಅಪಾಯ ಏನು? ಐಸಿಎಂಆರ್ ಸಾಕ್ಷ್ಯಗಳ ಪ್ರಕಾರ ಈ ರೀತಿ ಸೋಂಕು ಪ್ರಸರಣವು ಸಂಭವನೀಯವಾಗಿದೆ. ಗರ್ಭಧಾರಣೆಯ ಪ್ರಮಾಣದ ಮೇಲೆ ಇದೆಲ್ಲವೂ ಪರಿಣಾಮ ಬೀರುತ್ತದೆ. ಪ್ರಸ್ತುತ ಕೊವಿಡ್ 19, ಯೋನಿ ಸ್ರವಿಸುವಿಕೆ ಅಥವಾ ಎದೆ ಹಾಲನ್ನು ಧನಾತ್ಮಕವಾಗಿ ಪರೀಕ್ಷಿಸಿದ ಯಾವುದೇ ಪ್ರಕರಣಗಳಿಲ್ಲ. ಆದರೂ ಕೊರೊನಾ ಸೋಂಕಿನಿಂದ ಗರ್ಭಿಣಿಯರು ಹೆಚ್ಚು ಜಾಗೃತರಾಗಿರುವುದು ಅಗತ್ಯ ಏಕೆಂದರೆ ಇದು ಮಗುವಿನ ಭವಿಷ್ಯದ ಪ್ರಶ್ನೆಯಾಗಿದೆ.

ಇದನ್ನೂ ಓದಿ:Immunity Boosters: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲಾ ಜ್ಯೂಸ್ ಕುಡಿಯಬೇಕು?

(General Guideline and tips for pregnant women during Covid19 pandemic)

ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ