ಬೆಂಗಳೂರು: ಡಿಸೆಂಬರ್ 5ರಂದು ಟೌನ್‌ಹಾಲ್ ಮುಂದೆ ಪ್ರತಿಭಟನೆ ಕೈಗೊಂಡಿದ್ದ ವಾಟಳ್ ನಾಗರಾಜ್, ಕೊವಿಡ್ ಮಾರ್ಗಸೂಚಿಯನ್ವಯ ಸಾಮಾಜಿಕ ಅಂತರ ಪಾಲಿಸದ ಹಿನ್ನೆಲೆಯಲ್ಲಿ ದಂಡ ಪಾವತಿಸಲು ಕೋರ್ಟ್ ಆದೇಶ ನೀಡಿತ್ತು. ಆದರೆ ಕೋರ್ಟ್ ಆದೇಶದಂತೆ ದಂಡ ಪಾವತಿಸದ ವಾಟಾಳ್ ನಾಗರಾಜ್ ವಿರುದ್ಧ FIR ದಾಖಲು ಮಾಡಲಾಗಿದೆ.
ರಾಜ್ಯ ಸರ್ಕಾರದಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಡಿಸೆಂಬರ್ 5ರಂದು ಪ್ರತಿಭಟನೆ ನಡೆದಿತ್ತು. ಸಾಮಾಜಿಕ ಅಂತರವಿಲ್ಲದೆ ಜನರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಲಾಗಿತ್ತು. ಈ ಕುರಿತಂತೆ, ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020 ತಿದ್ದುಪಡಿ ಕಾಯ್ದೆಯಡಿ ವಾಟಾಳ್ ನಾಗರಾಜ್ ಅವರಿಗೆ 50 ಸಾವಿರ ದಂಡ ವಿಧಿಸಿ, ಜನವರಿ 21 ರೊಳಗೆ ದಂಡ ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಗಡುವು ಮುಗಿದಿದ್ದರೂ ದಂಡ ಪಾವತಿಸದ ಕಾರಣ ವಾಟಾಳ್ ನಾಗರಾಜ್ ವಿರುದ್ಧ ಎಸ್.ಜೆ.ಪಾರ್ಕ್ ಪೊಲೀಸರು FIR ದಾಖಲಿಸಿದ್ದಾರೆ.
ಕರ್ನಾಟಕದಲ್ಲಿ ಸೂಚನಾ ಫಲಕ.. ತಮಿಳಿನಲ್ಲಿ ಅಲ್ಲ, ಕನ್ನಡದಲ್ಲಿ ಇರಬೇಕು -ಬೋರ್ಡ್ ಕಿತ್ತೊಗೆದ ವಾಟಾಳ್