ಮುಂಬೈನಲ್ಲಿ ಈಗಲೇ ಲಸಿಕೆ ಇಲ್ಲ! ಬಹುತೇಕ ರಾಜ್ಯಗಳಲ್ಲಿ ನಾಳೆ ಲಸಿಕೆ ನೀಡುವುದು ಡೌಟ್​: ಏನಿದೆ ಪರಿಸ್ಥಿತಿ? ಇಲ್ಲಿದೆ ವಿವರ

No Covid Vaccination: ಕೊರೊನಾ ಸೋಂಕನ್ನು ನಿಯತ್ರಿಸಲು ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆಲ್ಲ ನಾಳೆಯಿಂದ ಕೊರೊನಾ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಅದರೆ ದೇಶದ ಬಹುತೇಕ ರಾಜ್ಯಗಳಲ್ಲಿ ನಾಳೆ ಲಸಿಕೆ ನೀಡಿಕೆ ಡೌಟ್ ಆಗಿದೆ. ಇದರಿಂದ 18-44 ವರ್ಷದೊಳಗಿನವರಿಗೆ ಲಸಿಕೆ ಸಿಗೋದು ಅನುಮಾನವಾಗಿದೆ.

ಮುಂಬೈನಲ್ಲಿ ಈಗಲೇ ಲಸಿಕೆ ಇಲ್ಲ! ಬಹುತೇಕ ರಾಜ್ಯಗಳಲ್ಲಿ ನಾಳೆ ಲಸಿಕೆ ನೀಡುವುದು ಡೌಟ್​: ಏನಿದೆ ಪರಿಸ್ಥಿತಿ? ಇಲ್ಲಿದೆ ವಿವರ
ಪ್ರಾತಿನಿಧಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on:Apr 30, 2021 | 11:08 AM

ದೆಹಲಿ: ಕೊರೊನಾ ಸೋಂಕನ್ನು ನಿಯತ್ರಿಸಲು ದೇಶಾದ್ಯಂತ 18 ವರ್ಷ ಮೇಲ್ಪಟ್ಟವರಿಗೆಲ್ಲ ನಾಳೆಯಿಂದ ಕೊರೊನಾ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಅದರೆ ದೇಶದ ಬಹುತೇಕ ರಾಜ್ಯಗಳಲ್ಲಿ ನಾಳೆ ಲಸಿಕೆ ನೀಡಿಕೆ ಡೌಟ್ ಆಗಿದೆ. ಇದರಿಂದ 18-44 ವರ್ಷದೊಳಗಿನವರಿಗೆ ಲಸಿಕೆ ಸಿಗೋದು ಅನುಮಾನವಾಗಿದೆ. ಲಸಿಕೆಯ ಕೊರತೆ ಇರುವುದೇ ಇದಕ್ಕೆ ಕಾರಣವಾಗಿದೆ. ಎಲ್ಲ ರಾಜ್ಯಗಳು ಸೆರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕಂಪನಿಗೆ ಲಸಿಕೆ ಪೂರೈಕೆಗೆ ಆರ್ಡರ್ ಮಾಡಿವೆ. ಆದರೆ ಲಸಿಕೆ ಉತ್ಪಾದನೆ ಕೊರತೆಯಿಂದ ಇದುವರೆಗೂ ಲಸಿಕೆ ಪೂರೈಸಲಾಗಿಲ್ಲ.

ಹಾಗಾದರೆ ದೇಶದಲ್ಲಿ ಲಸಿಕೆ ನೀಡಿಕೆ ಯಾವಾಗ ಸಾಧ್ಯವಾಗುತ್ತದೆ ಅಂದ್ರೆ ಮೇ 3ನೇ ವಾರದಲ್ಲಿ ಅನ್ನಬಹುದು. ಮೇ 3ನೇ ವಾರದ ವೇಳೆಗೆ ಲಸಿಕೆ ತಯಾರಿಕಾ ಸಂಸ್ಥೆಗಳು ಪೂರೈಕೆಗೆ ಸಜ್ಜಾಗಬಹುದು. ಜೂನ್ ವೇಳೆಗೆ ಭಾರತ್ ಬಯೋಟೆಕ್ ಉತ್ಪಾದನೆ ದ್ವಿಗುಣಗೊಳ್ಳುವ ಅಂದಾಜಿದೆ. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಜೂನ್​ನಲ್ಲಿ ಭಾರತ್ ಬಯೋಟೆಕ್​ನಿಂದ ಲಸಿಕೆ ಉತ್ಪಾದನೆ ಆರಂಭವಾಗುವ ನಿರೀಕ್ಷೆಯಿದೆ. ಇನ್ನು ಜೂನ್ ವೇಳೆಗೆ ಎಸ್ಐಐನಿಂದಲೂ ಲಸಿಕೆ ಉತ್ಪಾದನೆ ಹೆಚ್ಚಳವಾಗಲಿದೆ. ಈ ಮಧ್ಯೆ, ನಾಳೆ ರಷ್ಯಾದ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ ಆಮದಾಗಲಿದೆ. ಜೊತೆಗೆ ಇತರ ದೇಶಗಳೂ ಭಾರತಕ್ಕೆ ಲಸಿಕೆ ರಫ್ತು ಮಾಡುವ ನಿರೀಕ್ಷೆಯಿದೆ. ಇದೆಲ್ಲವೂ ಅಂದುಕೊಂಡಂತೆ ನಡೆದರೆ ಮೇ 3ನೇ ವಾರದ ವೇಳೆಗೆ ಲಸಿಕೆ ಸಿಗುವ ಸಾಧ್ಯತೆಯಿದೆ.

ಮುಂಬೈನಲ್ಲಿ ಇಂದಿನಿಂದಲೇ 3 ದಿನ ಕೊರೊನಾ ಲಸಿಕೆ ಇಲ್ಲ:

ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕೊರೊನಾ ಲಸಿಕೆ ಕೊರತೆ ಎದುರಾಗಿದೆ. ಮುಂದಿನ ಮೂರು ದಿನ ಕೊರೊನಾ ಲಸಿಕೆ ಲಭ್ಯವಿಲ್ಲವಾಗಿದೆ. ಸಿಕೆಯ ಸ್ಟಾಕ್ ಇಲ್ಲದ ಕಾರಣ ಲಸಿಕೆ ನೀಡಲಾಗಲ್ಲ. ಮುಂಬೈ ಜನರು ಸಹಕರಿಸಲು ಬಿಎಂಸಿ ದಿಢೀರನೆ ಮನವಿ ಮಾಡಿಕೊಂಡಿದೆ. ಹಾಗಾಗಿ ನಾಳೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಇಲ್ಲೂ ಇಲ್ಲ.

ಈ ಮಧ್ಯೆ, ಭಾರತದಲ್ಲಿ ರೆಮ್​ಡೆಸಿವಿರ್ ಇಂಜೆಕ್ಷನ್ ಕೊರತೆ ಹಿನ್ನೆಲೆ ಇಂಜೆಕ್ಷನ್ ಆಮದಿಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ರೆಮ್​ಡೆಸಿವಿರ್ ಇಂಜೆಕ್ಷನ್ ಆಮದಿಗೆ ಈಜಿಪ್ಟ್, ಯುಎಇ, ಉಜ್ಬೆಕಿಸ್ತಾನ, ಬಾಂಗ್ಲಾದೇಶಗಳ ಜತೆ ಸಂಪರ್ಕದಲ್ಲಿದೆ.

ರೆಮಿಡಿಸಿವಿರ್ ಇಂಜೆಕ್ಷನ್ ಕೊರತೆ, ಕಾಳಸಂತೆಯಲ್ಲಿ ಕರಾಳದಂಧೆ:

ಇನ್ನು ಲಸಿಕೆ ಸೇರಿದಂತೆ ರೆಮಿಡಿಸಿವಿರ್ ಇಂಜೆಕ್ಷನ್ ಕೊರತೆ ಆಗ್ತಿರೋದು ಹೇಗೆ? ಆಸ್ಪತ್ರೆಗಳಲ್ಲಿ ಸಿಗದ ರೆಮ್​ಡೆಸಿವಿರ್ ಮತ್ತು ಇತರೆ ಲಸಿಕೆಗಳು ಕಾಳಸಂತೆಯಲ್ಲಿ ಸಿಗ್ತಿರೋದು ಹೇಗೆ? ಎಂದು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸೋಂಕಿತರ ಕುಟುಂಬಗಳನ್ನೇ ಟಾರ್ಗೆಟ್ ಮಾಡಿಕೊಂಡು ಬೃಹತ್​ ಜಾಲಗಳು ಕಾಳಸಂತೆಯಲ್ಲಿ ಲಸಿಕೆಗಳನ್ನು ಮಾರಾಟ ಮಾಡತೊಡಗಿವೆ ಎಂದು ತಿಳಿದುಬರುತ್ತದೆ. (Covid vaccination lack of supply no corona vaccination from may 1 in india)

ಇದನ್ನು ಓದಿ:

ಲಸಿಕೆಗಾಗಿ 18-45 ವರ್ಷದವರು ನಾಳೆ ಆಸ್ಪತ್ರೆಗೆ ಹೋಗಬೇಡಿ, ಅಧಿಕೃತವಾಗಿ ಹೇಳೋ ತನಕ ಕಾಯಬೇಕು: ಡಾ.ಸುಧಾಕರ್

Published On - 11:06 am, Fri, 30 April 21