ರಾಜ್ಯದಲ್ಲಿ ಗೋಹತ್ಯೆ ನಿಷೇಧ ಶೀಘ್ರ ಸಾಕಾರ: CT ರವಿ ವಿಶ್ವಾಸ

ಬೆಂಗಳೂರು: ಗೋಹತ್ಯೆ ನಿಷೇಧದ ಆಶಯ ರಾಜ್ಯದಲ್ಲಿ ಅತಿ ಶೀಘ್ರ ಸಾಕಾರಗೊಳ್ಳಲಿದೆ ಎಂದು ಚಿಕ್ಕಮಗಳೂರು ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ‘ಕರ್ನಾಟಕದಲ್ಲಿ ಗೋವುಗಳ ಹತ್ಯೆ ನಿಷೇಧ ಮತ್ತು ಗೋವುಗಳ ಸಂರಕ್ಷಣಾ ಮಸೂದೆ‘ಗೆ ಸಚಿವ ಸಂಪುಟದ ಅನುಮೋದನೆ ಪಡೆಯುವಂತೆ ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಅವರನ್ನು ವಿನಂತಿಸಿದ್ದೇವೆ ಎಂದು ಸಿ.ಟಿ.ರವಿ ಹೇಳಿದ್ದಾರೆ. ‘ಸಂಪುಟದ ಅನುಮೋದನೆಯ ನಂತರ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಸೂದೆಯನ್ನು ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಳ್ಳಲು ಸಚಿವರನ್ನು ಕೋರಿದ್ದೇನೆ‘ ಎಂದು ರವಿ ಟ್ವೀಟ್ […]

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಶೀಘ್ರ ಸಾಕಾರ: CT ರವಿ ವಿಶ್ವಾಸ

Updated on: Nov 20, 2020 | 6:01 PM

ಬೆಂಗಳೂರು: ಗೋಹತ್ಯೆ ನಿಷೇಧದ ಆಶಯ ರಾಜ್ಯದಲ್ಲಿ ಅತಿ ಶೀಘ್ರ ಸಾಕಾರಗೊಳ್ಳಲಿದೆ ಎಂದು ಚಿಕ್ಕಮಗಳೂರು ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

‘ಕರ್ನಾಟಕದಲ್ಲಿ ಗೋವುಗಳ ಹತ್ಯೆ ನಿಷೇಧ ಮತ್ತು ಗೋವುಗಳ ಸಂರಕ್ಷಣಾ ಮಸೂದೆ‘ಗೆ ಸಚಿವ ಸಂಪುಟದ ಅನುಮೋದನೆ ಪಡೆಯುವಂತೆ ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಅವರನ್ನು ವಿನಂತಿಸಿದ್ದೇವೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

‘ಸಂಪುಟದ ಅನುಮೋದನೆಯ ನಂತರ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಸೂದೆಯನ್ನು ಸದನದಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಳ್ಳಲು ಸಚಿವರನ್ನು ಕೋರಿದ್ದೇನೆ‘ ಎಂದು ರವಿ ಟ್ವೀಟ್ ಮಾಡಿದ್ದಾರೆ.