ಚಿತಾಗಾರ ತುಂಬಿದೆ: ಸ್ಮಶಾನಗಳ ಮುಂದೆಯೂ ಹೌಸ್​ಫುಲ್​ ಬೋರ್ಡ್​, ಬುಕ್ಕಿಂಗ್​ ಫುಲ್​ ಆದ ನಂತರ ಅವಕಾಶವಿಲ್ಲ

| Updated By: ಆಯೇಷಾ ಬಾನು

Updated on: May 04, 2021 | 9:14 AM

ಚಾಮರಾಜಪೇಟೆಯ ಟಿ.ಆರ್.ಮಿಲ್ ಸಮೀಪದ ಸ್ಮಶಾನದ ಗೇಟ್​ನಲ್ಲಿ ಹೌಸ್​ಫುಲ್ ಫಲಕ ನೇತಾಡುತ್ತಿದೆ. ದಿನಕ್ಕೆ 20 ಮೃತದೇಹಗಳ ಅಂತ್ಯಕ್ರಿಯೆಗೆ ಅವಕಾಶ ಇದ್ದು, ಈಗಾಗಲೇ 19 ಮೃತದೇಹಗಳ ದಹನಕ್ಕೆ ಬುಕ್ಕಿಂಗ್ ಆಗಿದೆ. ಇನ್ನು ಹೆಚ್ಚಿನ ಶವಗಳನ್ನು ತಂದರೆ ಅಂತ್ಯ ಸಂಸ್ಕಾರ ಮಾಡಿಸುವುದಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಸಿಬ್ಬಂದಿ ಸೂಚನಾ ಫಲಕವನ್ನೇ ಹಾಕಿದ್ದಾರೆ.

ಚಿತಾಗಾರ ತುಂಬಿದೆ: ಸ್ಮಶಾನಗಳ ಮುಂದೆಯೂ ಹೌಸ್​ಫುಲ್​ ಬೋರ್ಡ್​, ಬುಕ್ಕಿಂಗ್​ ಫುಲ್​ ಆದ ನಂತರ ಅವಕಾಶವಿಲ್ಲ
ಚಿತಾಗಾರದ ಮುಂದೆ ಹೌಸ್​ಫುಲ್ ಬೋರ್ಡ್​
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದ್ದು, ಸೋಂಕಿತರ ಸಂಖ್ಯೆ ಹಾಗೂ ಸೋಂಕಿತರ ಮರಣ ಪ್ರಮಾಣ ಎರಡೂ ಗಣನೀಯವಾಗಿ ಏರಿಕೆ ಕಾಣುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಡುವವರ ಅಂತ್ಯಸಂಸ್ಕಾರ ಕ್ರಿಯೆ ನಡೆಸುವುದೂ ದೊಡ್ಡ ಸವಾಲಾಗಿದ್ದು, ಸಿನಿಮಾ ಥಿಯೇಟರ್ ಮುಂಭಾಗದಲ್ಲಿ ಕಾಣುವಂತೆ ಸ್ಮಶಾನದಲ್ಲೂ ಹೌಸ್​ಫುಲ್ ಫಲಕಗಳು ಕಣ್ಣಿಗೆ ರಾಚಲಾರಂಭಿಸಿವೆ. ಕೊರೊನಾ ಸೋಂಕಿತರ ಮರಣ ಪ್ರಮಾಣ ಹೆಚ್ಚಾದ ಕಾರಣ ಸ್ಮಶಾನಗಳಿಗೆ ಬಿಡುವೇ ಇಲ್ಲದಂತಾಗಿದ್ದು ಶವ ಸುಡುವುದಕ್ಕೆ ಬುಕ್ಕಿಂಗ್ ಮಾಡಿಕೊಂಡು ಜನ ಬರುತ್ತಿದ್ದಾರೆ.

ಚಾಮರಾಜಪೇಟೆಯ ಟಿ.ಆರ್.ಮಿಲ್ ಸಮೀಪದ ಸ್ಮಶಾನದ ಗೇಟ್​ನಲ್ಲಿ ಹೌಸ್​ಫುಲ್ ಫಲಕ ನೇತಾಡುತ್ತಿದೆ. ದಿನಕ್ಕೆ 20 ಮೃತದೇಹಗಳ ಅಂತ್ಯಕ್ರಿಯೆಗೆ ಅವಕಾಶ ಇದ್ದು, ಈಗಾಗಲೇ 19 ಮೃತದೇಹಗಳ ದಹನಕ್ಕೆ ಬುಕ್ಕಿಂಗ್ ಆಗಿದೆ. ಇನ್ನು ಹೆಚ್ಚಿನ ಶವಗಳನ್ನು ತಂದರೆ ಅಂತ್ಯ ಸಂಸ್ಕಾರ ಮಾಡಿಸುವುದಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಸಿಬ್ಬಂದಿ ಸೂಚನಾ ಫಲಕವನ್ನೇ ಹಾಕಿದ್ದಾರೆ.

ಸುಮನಹಳ್ಳಿ ಚಿತಾಗಾರ ತಾತ್ಕಾಲಿಕ ಸ್ಥಗಿತ
ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಶವ ಸಂಸ್ಕಾರ ಮಾಡಲಾಗುತ್ತಿರುವ ಕಾರಣ ಸುದ್ದಿಯಲ್ಲಿರುವ ಸುಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಇದೀಗ ವಾರದ ಮಟ್ಟಿಗೆ ಅಂತ್ಯ ಸಂಸ್ಕಾರ ಕ್ರಿಯೆ ಸ್ಥಗಿತಗೊಳ್ಳುತ್ತಿದೆ. ಇಂದಿನಿಂದ ಸುಮನಹಳ್ಳಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಸ್ಥಗಿತಗೊಳ್ಳುತ್ತಿದ್ದು, ತುರ್ತು ನಿರ್ವಹಣಾ ಕೆಲಸ ಹಿನ್ನೆಲೆ 7 ದಿನಗಳ ಕಾಲ ಅಂತ್ಯಕ್ರಿಯೆ ನಡೆಯುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ಫರ್ನೇಸ್​ಗಳನ್ನು ಬದಲಾಯಿಸುವ ಸಲುವಾಗಿ ಮೇ 4ರಿಂದ ಮೇ 10ರವರೆಗೆ ಅಂತ್ಯಕ್ರಿಯೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ:
ಸುಮನಹಳ್ಳಿ ಚಿತಾಗಾರ ಬಂದ್: ಇಂದಿನಿಂದ ಏಳು ದಿನಗಳ ಕಾಲ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಅಂತ್ಯಕ್ರಿಯೆ ಸ್ಥಗಿತ 

ಚಿತಾಗಾರಗಳ ಎದುರು ಹೆಚ್ಚಿದ ಕ್ಯೂ; ಒಂದೆಡೆಯಿಂದ ಮತ್ತೊಂದೆಡೆ ಶವ ಕೊಂಡೊಯ್ಯುತ್ತಿರುವ ಸಂಬಂಧಿಕರು